ಟೀಮ್ ಇಂಡಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್… ಸದ್ಯ ಟೆಸ್ಟ್​ ಕ್ರಿಕೆಟ್​​ನ ಘಟಾನುಘಟಿ ತಂಡಗಳಾಗಿ ಗುರುತಿಸಿಕೊಂಡಿವೆ. ವಿಶ್ವ ಕ್ರಿಕೆಟ್​​ನಲ್ಲಿ ನಾವೇ ಅಂತ ಮೆರದಾಡುವ ಈ ತಂಡಗಳು, ಬೌಲಿಂಗ್​​ನಲ್ಲೂ ಘಾತುಕ, ಘಟಾನುಘಟಿ ಬೌಲರ್​ಗಳನ್ನ ಹೊಂದಿದೆ.. ಈ ಬೌಲರ್​ಗಳು ಆಯಾ ತಂಡಗಳ ಶಕ್ತಿಯೂ ಆಗಿದ್ದಾರೆ.

ಹೌದು..! ಘಾತುಕ ವೇಗಿಗಳನ್ನ ಹೊಂದಿರುವ ಟೀಮ್ ಇಂಡಿಯಾ, ಕಿವೀಸ್​​ ಇಂಗ್ಲೆಂಡ್.. ಟೆಸ್ಟ್​ ಱಂಕಿಂಗ್​​ನ ಅಗ್ರ ಮೂರು ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ದೇಶ, ವಿದೇಶವಾಗಲಿ, ಪಿಚ್ ಯಾವುದೇ ಆಗಲಿ, ಎದುರಾಳಿ ಯಾರೇ ಆಗಲಿ, ವೇಗಿಗಳೇ ಈ ತಂಡಗಳ ಎಕ್ಸ್​ಫ್ಯಾಕ್ಟರ್ ಆ್ಯಂಡ್ ಮ್ಯಾಚ್​​ ವಿನ್ನರ್​​ಗಳು ಆಗಿದ್ದಾರೆ. ಆದ್ರೀಗ ಇಂಗ್ಲೆಂಡ್ ಪ್ರವಾಸದಲ್ಲಿ ಮೂರು ತಂಡಗಳು ಮುಖಾಮುಖಿಯಾಗ್ತಿದ್ದು, ಯಾವ ತಂಡ ಬೆಸ್ಟ್​ ಅಟ್ಯಾಕರ್ಸ್ ಹೊಂದಿದೆ ಅನ್ನೋ ಗುಸುಗುಸು ಕ್ರಿಕೆಟ್ ವಲಯದಲ್ಲಿ ನಡೀತಿದೆ.

ಶಮಿ, ಇಶಾಂತ್, ಬೂಮ್ರಾ ಕಾಂಬಿನೇಷನ್ ಸೂಪರ್..!
ಟೆಸ್ಟ್​ ಕ್ರಿಕೆಟ್​ನ ನಂ.1 ತಂಡವೆಂದು ಕರೆಸಿಕೊಳ್ಳುವ ಟೀಮ್ ಇಂಡಿಯಾ, ಬೆಸ್ಟ್​ ಅಟ್ಯಾಕರ್ಸ್​ ಅನ್ನೇ ಹೊಂದಿದೆ. ಉಪಖಂಡದಲ್ಲಿ ಸ್ಪಿನ್ನರ್​ಗಳೇ ತಂಡದ ಗೇಮ್​​ ಚೇಂಜರ್​ಗಳು ಎನಿಸಿಕೊಂಡರೇ, ಸೇನಾ-ರಾಷ್ಟ್ರಗಳಲ್ಲಿ ವೇಗಿಗಳೇ ವಿರಾಟ್ ಪಡೆಯ ಮ್ಯಾಚ್ ವಿನ್ನರ್ಸ್.. ಇನ್ನು ಟೆಸ್ಟ್ ಕ್ರಿಕೆಟ್​ನ ಯಶಸ್ವಿ ತಂಡ ಎನಿಸಿಕೊಂಡಿರುವ ಟೀಮ್ ಇಂಡಿಯಾ, ಇತ್ತೀಚೆಗೆ ವಿದೇಶಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸುತ್ತಿದೆ ಎಂದರೆ, ಅದಕ್ಕೆ ವೇಗಿಗಳ ಪಾತ್ರ ಬಹುಮುಖ್ಯ ಅನ್ನೋದನ್ನ ಮರೆಯುವಂತಿಲ್ಲ..

2019ರ ಬಳಿಕ ಭಾರತೀಯ​ ವೇಗಿಗಳ ಸಾಧನೆ
ಇನ್ನಿಂಗ್ಸ್​ ವಿಕೆಟ್
ಮಹಮ್ಮದ್ ಶಮಿ 16 38
ಜಸ್​​ಪ್ರೀತ್​ ಬೂಮ್ರಾ 19 35
ಇಶಾಂತ್ ಶರ್ಮಾ 20 36

ನಂ.2 ಪಟ್ಟಕ್ಕೇರಿದ್ದರ ಹಿಂದೆ ಕಿವೀಸ್​ ವೇಗಿಗಳ ಪಾತ್ರ..!
ಕೆಲ ದಿನಗಳ ಹಿಂದೆ ವಿಶ್ವ ಟೆಸ್ಟ್​ ಕ್ರಿಕೆಟ್​​ನ ನಂ.1 ತಂಡವಾಗಿದ್ದ ಕಿವೀಸ್, ಟೆಸ್ಟ್​ ಕ್ರಿಕೆಟ್​​ ಇತಿಹಾಸದಲ್ಲೇ ಮೊದಲ ಬಾರಿಗೆ ಇಂಥಹ ಸಾಧನೆ ಮಾಡಿತ್ತು. ಈ ಸಾಧನೆ ಹಿಂದೆ ಬೆಸ್ಟ್​ ಅಟ್ಯಾಕರ್ಸ್​ ಎನಿಸಿಕೊಂಡಿರೋ ಟ್ರೆಂಟ್ ಬೋಲ್ಟ್​, ಕೈಲ್ ಜಿಮ್ಮಿಸನ್, ನೇಲ್ ವ್ಯಾಗ್ನರ್, ಟಿಮ್ ಸೌಥಿ​ ಸಾಧನೆ ಬಹುದೊಡ್ಡದಿದೆ. ಅದ್ರಲ್ಲೂ ಫಾಸ್ಟ್​ ಟ್ರ್ಯಾಕ್​ನಲ್ಲಿ ಎಫೆಕ್ಟೀವ್ ಪೇಸರ್ಸ್ ಆಗಿರುವ ಇವರು, 146 ವಿಕೆಟ್ ಉರುಳಿಸಿದ್ದಾರೆ. ಇದೇ ತ್ರಿವಳಿ ವೇಗಿಗಳು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​ನಲ್ಲಿ ಟೀಮ್ ಇಂಡಿಯಾಕ್ಕೆ ಕಂಟಕವಾಗುವ ಎಲ್ಲಾ ಸಾಧ್ಯತೆಯಿದೆ.

2019ರ ಬಳಿಕ ನ್ಯೂಜಿಲೆಂಡ್​​ ಪೇಸರ್ಸ್​ ಸಾಧನೆ
ಇನ್ನಿಂಗ್ಸ್​ ವಿಕೆಟ್
ನೀಲ್ ವ್ಯಾಗ್ನರ್ 22 61
ಟ್ರೆಂಟ್ ಬೋಲ್ಟ್​ 24 49
ಜಿಮ್ಮಿಸನ್ 12 36

ಕಿವೀಸ್​ಗಿಂತ ಡೇಂಜರಸ್ ಇಂಗ್ಲೆಂಡ್​ ಸ್ಪೀಡ್​ಸ್ಟರ್ಸ್..!​
V.O – ನ್ಯೂಜಿಲೆಂಡ್​ ತಂಡಕ್ಕೆ ಹೋಲಿಸಿದರೆ, ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಡೇಂಜರಸ್​ ಆಗಿ ಕಾಣುತ್ತಿದೆ. ಅನುಭವಿ ವೇಗಿಗಳಾದ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್​ ಆ್ಯಂಡರ್ಸನ್ ಜೋಡಿ, ಸ್ವದೇಶದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗುತ್ತೆ. ಇವರ ಜೊತೆಗೆ ಫಾಸ್ಟ್ ಌಂಡ್​ ಫ್ಯೂರಿಯೆಸ್ ಎಂದೇ ಕರಿಸಿಕೊಳ್ಳುವ ಜೋಫ್ರಾ ಆರ್ಚರ್​ ಕೂಡ, ಕಮಾಲ್ ಮಾಡಬಲ್ಲರು.. ಈ ಡೇಂಜರಸ್ ತ್ರಿವಳಿ ವೇಗಿಗಳು ಮುಗಿ ಬಿದ್ದರೇ, ಟೀಮ್ ಇಂಡಿಯಾಕ್ಕೆ ಸಂಕಷ್ಟ ತಪ್ಪಿದ್ದಲ್ಲ..!!! ಯಾಕಂದ್ರೆ 2019ರಿಂದ ಈ ತ್ರಿವಳಿ ವೇಗಿಗಳ ಬೇಟೆ , ಬರೋಬ್ಬರಿ175 ವಿಕೆಟ್.

2019ರ ಬಳಿಕ ಇಂಗ್ಲೆಂಡ್​ ವೇಗಿಗಳ ಸಾಧನೆ
ಇನ್ನಿಂಗ್ಸ್​ ವಿಕೆಟ್
ಸ್ಟುವರ್ಟ್ ಬ್ರಾಡ್ 41 84
ಆ್ಯಂಡರ್ಸನ್ 26 49
ಜೋಫ್ರಾ ಆರ್ಚರ್​ 24 42

ವಿಶ್ವ ಕ್ರಿಕೆಟ್​​ನಲ್ಲಿ ಅಗ್ರ ಮೂರು ಸ್ಥಾನಗಳಲ್ಲಿ ಗುರುತಿಸಿಕೊಂಡಿರುವ ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್ ವಿಭಿನ್ನ ಪರಿಸ್ಥಿತಿ, ಹವಾಮಾನಕ್ಕೆ ಅನುಗುಣವಾಗಿ ಕಮಾಲ್ ಮಾಡಬಲ್ಲ ಸಶಕ್ತ ಬೌಲರ್​ಗಳ ದಂಡನ್ನೇ ಹೊಂದಿವೆ. ಇದರ ಪರಿಣಾಮವೇ ಅಗ್ರ ಮೂರರಲ್ಲಿ ಕಾಣಿಸಿಕೊಂಡಿದರ ಸಿಕ್ರೇಟ್ ಅನ್ನೋದನ್ನ, ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಿಲ್ಲ. ಒಟ್ನಲ್ಲಿ.. ವಿಶ್ವ ಕ್ರಿಕೆಟ್​​ನಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ಈ ತಂಡಗಳು, ಬೌಲಿಂಗ್​​ನಲ್ಲಿ ಬೆಸ್ಟ್​ ಮ್ಯಾಚ್​ ವಿನ್ನರ್​​ಗಳನ್ನೇ ಹೊಂದಿದೆ.

The post ಟೀಮ್ ಇಂಡಿಯಾ ವೇಗಗಳೇ ವಿಶ್ವ ಕ್ರಿಕೆಟ್​​ನ ಬೆಸ್ಟ್ ಪೇಸರ್ಸ್​..? appeared first on News First Kannada.

Source: newsfirstlive.com

Source link