ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​​​ ಮುಕ್ತಾಯದ ಬೆನ್ನಲ್ಲೆ ಟೀಮ್ ಇಂಡಿಯಾಕ್ಕೆ ಆಘಾತ ಎದುರಾಗಿದೆ. ಫೈನಲ್​ ಪಂದ್ಯದ 2ನೇ ಇನ್ನಿಂಗ್ಸ್​​​ನಲ್ಲಿ ಗಾಯಗೊಂಡಿದ್ದ ವೇಗಿ ಇಶಾಂತ್​ ಶರ್ಮಾ ಬಲಗೈಗೆ ಹೊಲಿಗೆ ಹಾಕಲಾಗಿದ್ದು, ಇಂಗ್ಲೆಂಡ್​​ ಸರಣಿಗೆ ಅಲಭ್ಯರಾಗ್ತಾರಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ. ಆಗಸ್ಟ್ 4ರಿಂದ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿ ಆರಂಭವಾಗಲಿದ್ದು, ಅಷ್ಟರೊಳಗೆ ಇಶಾಂತ್ ಶರ್ಮಾ ಸಂಪೂರ್ಣವಾಗಿ ಫಿಟ್​ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಫೈನಲ್​ ಪಂದ್ಯದ 6ನೇ ದಿನದಂದು ಬೌಲಿಂಗ್‌ ಮಾಡ್ತಿದ್ದಾಗ ಇಶಾಂತ್​ ಗಾಯಗೊಂಡಿದ್ದಾರೆ.

ಕಿವೀಸ್​ ಬ್ಯಾಟ್ಸ್​ಮನ್​​​ ಬಾರಿಸಿದ ಸ್ಟ್ರೈಟ್‌ ಡ್ರೈವ್‌ ತಡೆಯಲು ಪ್ರಯತ್ನಿಸುವ ವೇಳೆ ಕೈಗೆ ಗಾಯವಾಗಿತ್ತು. ಆ ಸಂದರ್ಭದಲ್ಲಿ ಇಶಾಂತ್​ ಶರ್ಮಾ ಕೈ ಬೆರಳಿನಲ್ಲಿ ರಕ್ತ ಸೋರಿಯಾಗಿತ್ತು. ಹಾಗಾಗಿ ಬೌಲಿಂಗ್​​ನಲ್ಲಿ ಮೊದಲ ಎಸೆತವನ್ನ ಎಸೆದ ನಂತರ, ಮೈದಾನವನ್ನ ತೊರೆದು ಡ್ರೆಸ್ಸಿಂಗ್​ ರೂಮ್​ನತ್ತ ಹೆಜ್ಜೆ ಹಾಕಿದ್ರು. ಈ ಕುರಿತು ಬಿಸಿಸಿಐ ಅಧಿಕಾರಿಯೊಬ್ಬರು ಮಾತನಾಡಿದ್ದು, ಇಶಾಂತ್​​ ಶರ್ಮಾ ಬೆರಳಿಗೆ ಮೂರು ಹೊಲಿಗೆ ಹಾಕಲಾಗಿದೆ. ಆದರೆ ಇದು ಗಂಭೀರವಾದ ಗಾಯವಲ್ಲ. ಮುಂದಿನ 10 ದಿನಗಳ ಒಳಗೆ ಚೇತರಿಕೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.

 

The post ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮಾ ಬೆರಳಿಗೆ 3 ಹೊಲಿಗೆ appeared first on News First Kannada.

Source: newsfirstlive.com

Source link