ಟೀಶರ್ಟ್​ ಲೇಬಲ್​ ನೆನಪಾಗ್ತಿದೆಯಾ ಈ ಚಾಕೋಲೇಟ್ ನೋಡ್ತಿದ್ದ ಹಾಗೆ? – Chocolate bar that comes in small to extra large size divides Twitter


Chಒcolate : ಸ್ವಲ್ಪ ಮುರಿದರೆ ಜಾಸ್ತಿ, ಜಾಸ್ತಿ ಮುರಿದರೆ ಸ್ವಲ್ಪ. ಅಂತೂ ಎಷ್ಟು ಬೇಕೋ ಅಷ್ಟು ಚಾಕೋಲೇಟನ್ನು ತಿನ್ನಲು ಆಗುವುದೇ ಇಲ್ಲ ಎಂದು ಬೇಸರಿಸಿಕೊಳ್ಳುವವರಿಗೆ ಇಲ್ಲೊಂದ ಉಪಾಯವಿದೆ!

ಟೀಶರ್ಟ್​ ಲೇಬಲ್​ ನೆನಪಾಗ್ತಿದೆಯಾ ಈ ಚಾಕೋಲೇಟ್ ನೋಡ್ತಿದ್ದ ಹಾಗೆ?

Chocolate bar that comes in small to extra large size

Viral : ಸ್ವಲ್ಪ ಚಾಕೋಲೇಟ್ ತಿನ್ನಿ ಅದು ನಿಮಗೆ ಆ ಕ್ಷಣಕ್ಕೆ ಕೊಡುವ ಶಕ್ತಿ ಮಾತ್ರ ಅದ್ಭುತ. ಎನರ್ಜಿ ಬೂಸ್ಟರ್​ನಂತೆ ಚಾಕೋಲೇಟ್​. ಮಕ್ಕಳನ್ನು ಗಮನಿಸಿ. ಮೊದಲೇ ಪುಟಿಯುವ ಚೆಂಡುಗಳು. ಇನ್ನು ಚಾಕೋಲೇಟ್​ ತಿಂದರೆ ಕೇಳಬೇಕೆ? ಆದರೆ ದೊಡ್ಡವರಾದ ನಿಮಗೆ ಇಡೀ ದೊಡ್ಡ ಚಾಕೋಲೇಟ್​ ಬಾರನ್ನು ತಿನ್ನುವುದು ಜಾಸ್ತಿ ಎನ್ನಿಸಬಹುದು. ಆಗ ಎಷ್ಟು ಬೇಕೋ ಅಷ್ಟು ಮುರಿಯುವುದು ಚೂರು ಕಷ್ಟ. ಹಾಗಂತ ಇನ್ನು ಇದಕ್ಕಾಗಿ ಬಹಳ ಯೋಚಿಸಬೇಕಿಲ್ಲ. ಏಕೆಂದರೆ ಇದೀಗ ವೈರಲ್ ಆಗಿರುವ ಈ ಟ್ವೀಟ್​ ನೋಡಿ. ಚಾಕೋಲೇಟ್​ ಬಾರಿನಲ್ಲಿ ಬಟ್ಟೆಗಳ ಮೇಲೆ ಬರೆದಿರುವಂತೆ ವಿವಿಧ ಅಳತೆಗಳನ್ನು ನಮೂದಿಸಿದ್ದಾರೆ!

ಇನ್ನು ನೀವು ಎಷ್ಟು ಬೇಕೋ ಅಷ್ಟಷ್ಟನ್ನೇ ಮುರಿದು ತಿನ್ನುವುದು ಸುಲಭ. ಈ ಐಡಿಯಾ ಚೆನ್ನಾಗಿದೆಯಲ್ಲ? ಟೀಶರ್ಟ್​ನ ಲೇಬಲ್​ ಮೇಲೆ ಬರೆದಂತೆ “XS,” “S,” “L,” ಮತ್ತು “XL” ನೋಡಲು ಮಜಾ. ತಿನ್ನಲೂ ಮಜಾ ಮತ್ತು ಸುಲಭ. ಪುಡಿಪುಡಿಯಾಯಿತು ಎಂದೋ, ಜಾಸ್ತಿ ಮುರಿಯಿತು ಎಂದೋ ಯೋಚಿಸಬೇಕಿಲ್ಲ. ಎಷ್ಟು ಬೇಕೋ ಅಷ್ಟು ತಿಂದು ಸಮಾಧಾನವಾಗಿ ಬ್ಯಾಗಿನೊಳಗಿಟ್ಟುಕೊಳ್ಳಬಹುದು.

ಈತನಕ ಸುಮಾರು 4,000 ಜನರು ಈ ಟ್ವೀಟ್​ ಇಷ್ಟಪಟ್ಟಿದ್ದಾರೆ. ಅನೇಕರುಈ ಐಡಿಯಾ ಅನ್ನು ಹೊಗಳಿದ್ದಾರೆ. ‘ಎಲ್ಲಿದ್ದೀಯಪ್ಪಾ ಸೃಷ್ಟಿಕರ್ತ. ನಿಮ್ಮ ಪ್ರತಿಭೆ ಅದ್ಭುತ. ಒಮ್ಮೆ ಭೇಟಿ ಮಾಡಬೇಕಿದೆ.’ ಎಂದಿದ್ದಾರೆ ಒಬ್ಬರು. ‘ನನಗೆ XS ಸರಿ ಇದೆ’ ಎಂದಿದ್ದಾರೆ ಇನ್ನೂ ಒಬ್ಬರು. ‘ನೀವೇನೇ ತಲೆ ಉಪಯೋಗಿಸಿ. ಆದರೆ ನಾನು ಮಾತ್ರ ಈ ಬಾರನ್ನು ಒಂದೇ ಏಟಿಗೆ ತಿನ್ನುತ್ತೇನೆ’ ಎಂದಿದ್ಧಾರೆ ಮತ್ತೊಬ್ಬರು.

ಅಲ್ವಾ? ಇಷ್ಟಿಷ್ಟೇ ಮುರಿದಿಟ್ಟುಕೊಂಡು ಚಾಕೋಲೇಟ್​ ತಿನ್ನುವುದು ಸ್ವಲ್ಪ ಏನು ಬಾರೀ ಕಷ್ಟವೇ ಅಲ್ಲವೇ!?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.