ಬೆಂಗಳೂರು: ಹೋಟೆಲ್ಗೆ ಟೀ ಕುಡಿಯೋ ನೆಪದಲ್ಲಿ ಬಂದ ಕಳ್ಳನೊಬ್ಬ ಕ್ಷಣಾರ್ಧದಲ್ಲಿ ಮೊಬೈಲ್ ಎಗಿಸಿ ಎಸ್ಕೇಪ್ ಆದ ಘಟನೆ ನಗರದ ಯಶವಂತಪುರದ ಕಾಫಿ ಸಂತೆ ಹೋಟೆಲ್ ನಲ್ಲಿ ನಡೆದಿದೆ.
ಹೋಟೆಲ್ಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಕಳ್ಳ, ಸೈಲೆಂಟಾಗಿ ಒಳ ನುಗ್ಗಿದವ್ನೇ ಹೋಟೆಲ್ ಸಿಬ್ಬಂದಿಯ ಮೊಬೈಲ್ ಎಗರಿಸಿದ್ದಾನೆ. ಹೋಟೆಲ್ ಸಿಬ್ಬಂದಿ ವ್ಯಾಪಾರದಲ್ಲಿ ಬ್ಯುಸಿಯಾದ್ರೆ, ಕಳ್ಳ ಮೊಬೈಲ್ ಕದಿಯೋದ್ರಲ್ಲಿ ಬ್ಯುಸಿಯಾಗಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೀಲಿ ಬಣ್ಣದ ಶರ್ಟ್ ಧರಿಸಿ ಬಂದಿದ್ದ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದು, ಯಶವಂತಪುರ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ.