ಟೀ 20 ವಿಶ್ವಕಪ್​ ನಂತರ ನ್ಯೂಜಿಲೆಂಡ್​​, ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ; ಪಾಂಡ್ಯ ಟಿ20 ನಾಯಕ, ಇಲ್ಲಿದೆ ಆಟಗಾರರ ಪಟ್ಟಿ – BCCI announce squads for New Zealand Bangladesh tour


ಈ ವಿಶ್ವಕಪ್​​ ನಂತರ ಭಾರತ ತಂಡ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್​ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ತಿಳಿಸಿದ್ದಾರೆ.

ಟೀ 20 ವಿಶ್ವಕಪ್​ ನಂತರ ನ್ಯೂಜಿಲೆಂಡ್​​, ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ; ಪಾಂಡ್ಯ ಟಿ20 ನಾಯಕ, ಇಲ್ಲಿದೆ ಆಟಗಾರರ ಪಟ್ಟಿ

India

Image Credit source: INSIDESPORT

ಭಾರತ ತಂಡ ಸದ್ಯ ಆಸ್ಟ್ರೇಲಿಯಾದ ನೆಲದಲ್ಲಿ ಟೀ 20 ವಿಶ್ವಕಪ್​ ಆಡುತ್ತಿದ್ದು 2 ಗೆಲವು ಮತ್ತು 1 ಸೋಲಿನೊಂದಿಗೆ ಮುನ್ನಡೆಯುತ್ತಿದೆ. ಈ ವಿಶ್ವಕಪ್​​ ನಂತರ ಭಾರತ ತಂಡ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್​ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ತಿಳಿಸಿದ್ದಾರೆ. ಭಾರತ ತಂಡವು ನ್ಯೂಜಿಲೆಂಡ್​ನಲ್ಲಿ ಟೀ 20 ಮತ್ತು ಏಕದಿನ ಸರಣಿ (ODI) ಆಡಲಿದೆ. ಬಾಂಗ್ಲಾದೇಶದಲ್ಲಿ ಏಕದಿನ ಸರಣಿ (ODI) ಮತ್ತು ಟೆಸ್ಟ ಪಂದ್ಯಾವಳಿ ಆಡಲಿದೆ.

ನ್ಯೂಜಿಲೆಂಡ್ ಪ್ರವಾಸದಿಂದ ರೋಹಿತ್​ ಶರ್ಮಾ, ಕೆ. ಎಲ್​ ರಾಹುಲ್​ ಮತ್ತು ರನ್​ ಮಷೀನ್​ ವಿರಾಟ್​ ಕೋಲ್ಹಿ ವಿಶ್ರಾಂತಿ ಪಡೆಯಲಿದ್ದಾರೆ. ಆದರೆ ಇವರು ಬಾಂಗ್ಲಾದೇಶದಲ್ಲಿ ನಡೆಯುವ ಸರಣಿಗಳಲ್ಲಿ ಆಡಲಿದ್ದಾರೆ. ಸಂಜು ಸ್ಯಾಮ್ಸನ್ ಕೂಡ ನ್ಯೂಜಿಲೆಂಡ್ ಸರಣಿಯ ಆಡಲಿದ್ದು, ಬಾಂಗ್ಲಾದೇಶ ಸರಣಿಯಿಂದ ಹೊರ ಉಳಿಯಲಿದ್ದಾರೆ. ನ್ಯೂಜಿಲೆಂಡ್​ನಲ್ಲಿ ಟೀ 20ಗೆ ಹಾರ್ದಿಕ್​ ಪಾಂಡ್ಯ ತಂಡವನ್ನು ಮುನ್ನಡೆಸಿದರೇ, ಏಕದಿನ ಸರಣಿಗೆ ಶೀಖರ್​ ಧವನ ನಾಯಕರಾಗಿರಲಿದ್ದಾರೆ.

ಬೆನ್ನು ನೋವಿನಿಂದ ಬಳಲುತ್ತಿರುವ ದೀಪಕ್ ಚಹಾರ್ ಬಾಂಗ್ಲಾದೇಶ ಪ್ರವಾಸಕ್ಕೆ ಮರಳಲಿದ್ದಾರೆ. ಆದರೆ, ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ದಿನೇಶ್ ಕಾರ್ತಿಕ್ ಅವರನ್ನು ನ್ಯೂಜಿಲೆಂಡ್‌ನ ಟಿ20 ಸರಣಿಯಿಂದ ಕೈಬಿಡಲಾಗಿದೆ. ಶುಭಮನ್ ಗಿಲ್ ಟಿ20 ಸರಣಿಯಲ್ಲಿ ಆಡಲಿದ್ದಾರೆ.

ಭಾರತ ತಂಡದ ಆಟಗಾರರ ಪಟ್ಟಿ

  1. NZ T20I ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ ( ಉಪನಾಯಕ ಮತ್ತು ವಿಕೇಟ್​​ ಕೀಪರ್​), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೇಟ್​​ ಕೀಪರ್), W ಸುಂದರ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಮೊ. ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.
  2. NZ ODI ತಂಡ: ಶಿಖರ್ ಧವನ್ (ನಾಯಕ), ರಿಷಭ್ ಪಂತ್ (ಉಪನಾಯಕ ಮತ್ತು ವಿಕೇಟ್​​ ಕೀಪರ್), ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೇಟ್​​ ಕೀಪರ್), W ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಶ್ದೀಪ್ ಸಿಂಗ್, ದೀಪಕ್ ಚಹಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.
    ಬಾಂಗ್ಲಾದೇಶ ಏಕದಿನ ಸರಣಿ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೇಟ್​​ ಕೀಪರ್), ಇಶಾನ್ ಕಿಶನ್ (ವಿಕೇಟ್​​ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಡಬ್ಲ್ಯೂ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಯಶ್ ದಯಾಳ್
  3. ಬಾಂಗ್ಲಾದೇಶ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೇಟ್​​ ಕೀಪರ್), ಕೆಎಸ್ ಭರತ್ (ವಿಕೇಟ್​​ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊ. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ICC T20 ವಿಶ್ವಕಪ್ ನಂತರ ಟೀಮ್ ಇಂಡಿಯಾ ನ್ಯೂಜಿಲೆಂಡ್‌ಗೆ ಹೊರಡಲಿದೆ. ನವೆಂಬರ್ 18 ರಂದು T20 ಅಂತರಾಷ್ಟ್ರೀಯ ಪಂದ್ಯವನ್ನು ಆಡಬಹುದು. 13 ದಿನಗಳ ಅವಧಿಯಲ್ಲಿ, ಭಾರತ ಮತ್ತು ನ್ಯೂಜಿಲೆಂಡ್ ಒಟ್ಟು 6 ಕ್ರಿಕೆಟ್ ಪಂದ್ಯಗಳನ್ನು ಆಡಲಿವೆ. 3 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಮತ್ತು 3 ODIಗಳನ್ನು ಆಡಲಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.