ನವದೆಹಲಿ: ನಗರದ ಲಡೊ ಸರೈ ಮತ್ತು ಗುರುಗ್ರಾಮದಲ್ಲಿರುವ ಟ್ವಿಟರ್​ ಇಂಡಿಯಾ ಕಚೇರಿ ಮೇಲೆ ದೆಹಲಿ ಪೊಲೀಸ್ ಸ್ಪೆಷಲ್ ಸೆಲ್​​ ದಾಳಿ ಮಾಡಿದೆ.

ಟ್ವಿಟರ್​​ ಕಚೇರಿಗೆ ದಾಳಿ ಮಾಡಿರುವ ವಿಶೇಷ ಪೊಲೀಸ್ ದಳ ಶೋಧಕಾರ್ಯ ನಡೆಸಿದೆ. ಮೂಲಗಳ ಪ್ರಕಾರ ದಿನನಿತ್ಯದಂತೆ ಟ್ವಿಟರ್​ ಕಚೇರಿಗೆ ನೋಟಿಸ್ ನೀಡಲು ಹೋಗಿದೆ. ಆದರೆ ಟ್ವಿಟರ್ ಇಂಡಿಯಾದ MD ನೀಡಿದ ಉತ್ತರಗಳು ಅಸ್ಪಷ್ಟವಾಗಿತ್ತು. ಹೀಗಾಗಿ ಹೆಚ್ಚಿನ ಮಾಹಿತಿಗಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಯಾವುದರ ಬಗ್ಗೆ ನೋಟಿಸ್​..?
ಕಾಂಗ್ರೆಸ್​ ವಿರುದ್ಧ ಬಿಜೆಪಿ ನಾಯಕರು ಮಾಡಿರುವ ‘ಟೂಲ್​ ಕಿಟ್’​​ ಆರೋಪಕ್ಕೆ ಸಂಬಂಧಿಸಿ ನೋಟಿಸ್ ಕಳುಹಿಸಲಾಗಿತ್ತು. ಕೊರೊನಾ ಸಂಕಷ್ಟದ ಸಮಯದಲ್ಲಿ ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಇಮೇಜ್ ಹಾಳುಮಾಡಲು ಟೂಲ್ ಕಿಟ್ ಪಿತೂರಿ ನಡೆಸಿದೆ ಅಂತಾ ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಆರೋಪ ಮಾಡಿದ್ದರು. ಈ ಆರೋಪವನ್ನ ಟ್ವಿಟರ್​ ನಿರಾಕರಿಸಿ, ಇದು ತಿರುಚಿದ ದಾಖಲೆ ಎಂದು ಹೇಳಿತ್ತು. ಈ ಸಂಬಂಧ ದೆಹಲಿ ಪೊಲೀಸರು ಟ್ವಿಟರ್​ ಆಫ್ ಇಂಡಿಯಾ ಬಳಿ ಸ್ಪಷ್ಟನೆ ಕೇಳಿದ್ದರು.

ಆದರೆ ಈ ಬಗ್ಗೆ ಟ್ವಿಟರ್​ ಇಂಡಿಯಾ ಎಂಡಿ ನೀಡಿರುವ ಉತ್ತರ ಅಸ್ಪಷ್ಟವಾಗಿದ್ದರಿಂದ, ಯಾರು ಈ ರೀತಿಯ ಉತ್ತರವನ್ನ ನೀಡಿದೋರು ಅಂತಾ ನೋಡಲು ದಾಳಿಮಾಡಬೇಕಾಯಿತು ಅಂತಾ ದೆಹಲಿ ಪೊಲೀಸರು ಹೇಳಿದ್ದಾರೆ.

The post ಟೂಲ್​ ಕಿಟ್​ ಕೇಸ್​; ಟ್ವಿಟರ್​ ಇಂಡಿಯಾ ಕಚೇರಿ ಮೇಲೆ ದೆಹಲಿ ಪೊಲೀಸರ ದಾಳಿ appeared first on News First Kannada.

Source: newsfirstlive.com

Source link