ಇವತ್ತು ಆರು ಕನ್ನಡ ಸಿನಿಮಾಗಳು ರಿಲೀಸ್ಆಗಿವೆ.. ಆ ಆರು ಸಿನಿಮಾಗಳಗಲ್ಲಿ ವಿಶೇಷವಾಗಿ ಕಾಣಸಿಗೋದು ಭಾವಚಿತ್ರ.. ಈ ಭಾವಚಿತ್ರ ಸಿನಿಮಾದಲ್ಲಿ ಕ್ಯಾಮೆರಾವೇ ಮುಖ್ಯ ಪಾತ್ರದಾರಿ ಅಂತ ಚಿತ್ರತಂಡ ಹೇಳಿಕೊಂಡಿತ್ತು.. ನಮ್ಮ ಸಿನಿಮಾ ಡಿಫರೆಂಟ್ ಆದ ಸಿನಿಮಾ.. ಟೆಕ್ನೋ ಥ್ರಿಲ್ಲರ್ ಸಿನಿಮಾ ಅಂತೆಲ್ಲ ಹೇಳಿಕೊಂಡಿತ್ತು.. ಸಿನಿಮಾ ತಂಡ ಹೇಳಿಕೊಂಡಂತೆ ಇದಿಯಾ? ಹೇಗಿದೆ ಭಾವಚಿತ್ರ ಅನ್ನೋದನ್ನ ಈ ಸುದ್ದಿಯಲ್ಲಿ ತಿಳಿಸ್ತಿವಿ ಬನ್ನಿ..
ಭಾವಚಿತ್ರ.. ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಇದು.. ಇವತ್ತು ಪ್ರೇಕ್ಷಕರ ಮುಂದೆ ಬಂದಿರುವ ಭಾವಚಿತ್ರವನ್ನ ಪ್ರೇಕ್ಷಕರು ತಮ್ಮ ದೃಷ್ಟಿಕೋನದಿಂದ ಅಳೆದು ತೂಗಿ ಮಾರ್ಕ್ಸ್ ಕೊಟ್ಟಿದ್ದಾರೆ. ಗಿರೀಶ್ ಕುಮಾರ್.ಬಿ ನಿರ್ದೇಶನದ ಈ ಚಿತ್ರ ಗೌತಮ್ ಶ್ರೀವತ್ಸ ಮ್ಯೂಸಿಕ್ ಒಳಗೊಂಡಿದೆ. ಗಾನವಿ ಆರ್ಕಿಯಾಲಾಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕನಾಗಿ ಚಕ್ರವರ್ತಿ ನಟಿಸಿದ್ದಾರೆ..
ಟೆಕ್ನೋ ಥ್ರಿಲ್ಲರ್ ಕಥೆ ಹೊಂದಿರುವ ‘ಭಾವಚಿತ್ರ’
ಸ್ಯಾಂಡಲ್ವುಡ್ನಲ್ಲಿ ಥ್ರಿಲ್ಲರ್ ಕಥೆಗಳನ್ನು ಹೊಂದಿರುವ ಹಲವು ಸಿನಿಮಾಗಳು ಬಂದಿವೆ. ಆದರೆ, ಭಾವಚಿತ್ರದ ಕಾನ್ಸೆಪ್ಟ್ ಸ್ವಲ್ಪ ವಿಭಿನ್ನ ಮತ್ತು ವಿಶೇಷ. ಇಲ್ಲಿ ಟೆಕ್ನಲಾಜಿ ಇದೆ, ಸೈನ್ಸ್ ಇದೆ, ಹಾಗೆ ಇತಿಹಾಸನೂ ಇದೆ. ಇದೆಲ್ಲವನ್ನು ಸೇರಿಸಿ ಅದಕ್ಕೆ ಭಾವನೆಗಳನ್ನು ಮಿಕ್ಸ್ ಮಾಡಿ ರೋಚಕವಾಗಿ ತೆರೆಮೇಲೆ ತಂದಿದ್ದಾರೆ.
ಇನ್ನು ಭಾವಚಿತ್ರವನ್ನ ಮೊದಲ ದಿನ ನೋಡಿದ ಪ್ರೇಕ್ಷಕ ಮಹಾಶಯರ ರೆಸ್ಪಾನ್ಸ್ ಹೀಗಿತ್ತು..
ಭಾವಚಿತ್ರ ಕಾನ್ಸೆಪ್ಟ್ ಚೆನ್ನಾಗಿದೆ, ಇನ್ನು ಉತ್ತಮವಾಗಿ ಪ್ರೆಸೆಂಟ್ ಮಾಡಬಹುದಿತ್ತು ಎನಿಸುತ್ತದೆ. ತಾಂತ್ರಿಕವಾಗಿ ಚಿತ್ರತಂಡಕ್ಕೆ ಅನುಭವದ ಕೊರತೆ ಫ್ರೆಮ್ಗಳಲ್ಲಿ ಕಾಣುತ್ತದೆ. ಇನ್ನುಳಿದಂತೆ ಗಾನವಿ ಲಕ್ಷ್ಮಣ್, ಚಕ್ರವರ್ತಿ, ಗಿರೀಶ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ.. ಒಟ್ಟಿನಲ್ಲಿ ಭಾವಚಿತ್ರ ಸಿನಿಮಾ ಬೇರೆ ಎಲ್ಲಾ ಸಿನಿಮಾಗಳಿಗಿಂತ ವಿಭಿನ್ನವಾಗಿ ಕಾಣಿಸುತ್ತದೆ.
The post ಟೆಕ್ನಾಲಜಿ, ಸೈನ್ಸ್, ಹಿಸ್ಟರಿ ಎಲ್ಲವೂ ಇರೋ ‘ಭಾವಚಿತ್ರ’ದ ಬಗ್ಗೆ ಆಡಿಯನ್ಸ್ ಹೇಳಿದ್ದೇನು..? appeared first on News First Kannada.