ಟೆನ್ನಸ್ಸೀಯಲ್ಲಿ 40 ವರ್ಷಗಳ ಹಿಂದೆಯಾದ ಪತ್ತೆಯಾದ ಅಸ್ಥಿಯ ಅವಶೇಷಗಳು ಕಾಣೆಯಾಗಿದ್ದ ಇಂಡಿಯಾನಾದ ಹುಡುಗಿಯವು ಅಂತ ಗೊತ್ತಾಗಿದೆ | Skeletal remains found about 40 years ago in Tennessee identified as missing Indiana girl


ಟ್ರೇಸಿ ಸ್ಯೂ ವಾಕರ್‌ ಸಾವಿಗೆ ಕಾರಣವಾಗಿರಬಹುದಾದ ಸಂದರ್ಭಗಳು ಮತ್ತು ಅವಳು ಕ್ಯಾಂಪ್‌ಬೆಲ್ ಕೌಂಟಿಗೆ ಬಂದಿದ್ದು ಯಾಕೆ ಅನ್ನೋದನ್ನು ನಿರ್ಧರಿಸಲು ಜನರಿಂದ ಸಹಾಯ ಸಿಗುವ ಬಗ್ಗೆ ಟಿಬಿಐ ವಿಶೇಷ ಏಜೆಂಟ್‌ಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಟೆನ್ನಸ್ಸೀಯಲ್ಲಿ 40 ವರ್ಷಗಳ ಹಿಂದೆಯಾದ ಪತ್ತೆಯಾದ ಅಸ್ಥಿಯ ಅವಶೇಷಗಳು ಕಾಣೆಯಾಗಿದ್ದ ಇಂಡಿಯಾನಾದ ಹುಡುಗಿಯವು ಅಂತ ಗೊತ್ತಾಗಿದೆ

1978ರಲ್ಲಿ ಕಾಣೆಯಾದ ಟ್ರೇಸಿ ಸ್ಯೂ ವಾಕರ್

ಸುಮಾರು ನಾಲ್ಕು ದಶಕಗಳ ಹಿಂದೆ ಅಮೆರಿಕದ ಟೆನ್ನಸ್ಸೀಯಲ್ಲಿ (Tennessee) ತಮಗೆ ಸಿಕ್ಕ ಅಸ್ಥಿ ಪಂಜರದ ಅವಶೇಷಗಳು ನಾಪತ್ತೆಯಾದ ಇಂಡಿಯಾನಾದ (Indiana) ಒಬ್ಬ ಹದಿಹರೆಯದ ಹುಡುಗಿಯದ್ದು ಅನ್ನೋದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹುಡುಗಿ ಇಂಡಿಯಾನಾದಿಂದ ನೂರಾರು ಮೈಲಿ ದೂರವಿರುವ ಟೆನ್ನಸ್ಸೀಗೆ ಹೇಗೆ ಬಂದಳು ಎಂಬ ಅಂಶವನ್ನು ತನಿಖಾಧಿಕಾರಿಗಳು (investigators) ಈಗ ಪತ್ತೆ ಮಾಡುತ್ತಿದ್ದಾರೆ.

ಟೆನ್ನಸ್ಸೀ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಬಿಡುಗಡೆ ಮಾಡಿರುವ ಪ್ರಕಟಣೆಯೊಂದರ ಪ್ರಕಾರ ಏಪ್ರಿಲ್ 13, 1985 ರಂದು ಕ್ಯಾಂಬೆಲ್ ಪ್ರಾಂತ್ಯದಲ್ಲಿ 10 ರಿಂದ 15 ರ ಪ್ರಾಯದ ಬಿಳಿ ಹುಡುಗಿಯ ಅವಶೇಷಗಳು ಪತ್ತೆಯಾಗಿದ್ದವು. ಅಧಿಕಾರಿಗಳಿಗೆ ಅವಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ ಅವರು ಅವಳನ್ನು ‘ಬೇಬಿ ಗರ್ಲ್’ ಅಂತ ಉಲ್ಲೇಖಿಸಲಾರಂಭಿಸಿದ್ದರು.

ಈ ವಾರದ ಆರಂಭದಲ್ಲಿ ಯೂನಿವರ್ಸಿಟಿ ಆಫ್ ನಾರ್ಥ್ ಟೆಕ್ಸಾಸ್ ಸೆಂಟರ್ ಫಾರ್ ಹ್ಯೂಮನ್ ಐಡೆಂಟಿಫಿಕೇಶನ್ (ಯುಎನ್ ಟಿ ಸಿ ಹೆಚ್ ಐ) ಅವಶೇಷಗಳು ಟ್ರೇಸಿ ಸ್ಯೂ ವಾಕರ್ ಹೆಸರಿನ ಹುಡುಗಿಯವು ಅನ್ನೋದನ್ನು ಪತ್ತೆ ಮಾಡುವಲ್ಲಿ ಸಫಲವಾಗಿದೆ. ಈ ಹುಡುಗಿ 1978 ರಲ್ಲಿ ಇಂಡಿಯಾನಾದ ಲಾಫಾಯೆಟ್ ನಿಂದ ನಾಪತ್ತೆಯಾಗಿದ್ದಳು.

ಟ್ರೇಸಿ ಸ್ಯೂ ವಾಕರ್‌ ಸಾವಿಗೆ ಕಾರಣವಾಗಿರಬಹುದಾದ ಸಂದರ್ಭಗಳು ಮತ್ತು ಅವಳು ಕ್ಯಾಂಪ್‌ಬೆಲ್ ಕೌಂಟಿಗೆ ಬಂದಿದ್ದು ಯಾಕೆ ಅನ್ನೋದನ್ನು ನಿರ್ಧರಿಸಲು ಜನರಿಂದ ಸಹಾಯ ಸಿಗುವ ಬಗ್ಗೆ ಟಿಬಿಐ ವಿಶೇಷ ಏಜೆಂಟ್‌ಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಶೈತ್ಯಾಗಾರಕ್ಕೆ ಸೇರಿದ ಅನೇಕ ಪ್ರಕರಣಗಳನ್ನು ಬಗೆಹರಿಸಲು ಸಹಾಯ ಮಾಡಿರುವ ಫೋರೆನ್ಸಿಕ್ ಜೆನೆಟಿಕ್ ವಂಶಾವಳಿಯ ಪರೀಕ್ಷೆಯನ್ನು ಅಧಿಕಾರಿಗಳು ಅವಶೇಷಗಳನ್ನು ಗುರುತಿಸಲು ಟ್ರೇಸಿ ಸ್ಯೂ ಪ್ರಕರಣದಲ್ಲಿ ಬಳಸಿದ್ದಾರೆ.

2007 ರಲ್ಲಿ, ಅಂದರೆ ಅವಶೇಷಗಳು ಪತ್ತೆಯಾದ 20 ವರ್ಷಗಳ ನಂತರ, ಅಧಿಕಾರಿಗಳು ಯುಎನ್‌ಟಿಚಿಐಗೆ ಮಾದರಿಯನ್ನು ಸಲ್ಲಿಸಿದ ನಂತರ ಡಿಎನ್‌ಎ ಪ್ರೊಫೈಲ್ ಅನ್ನು ಅಭಿವೃದ್ಧಿಪಡಿಸಲಾಯಿತು. ಅದಾದ ಮೇಲೆ ಸಂಯೋಜಿತ ಡಿಎನ್‌ಎ ಸೂಚ್ಯಂಕ ವ್ಯವಸ್ಥೆ ಮತ್ತು ಕಾಣೆಯಾದವರ ರಾಷ್ಟ್ರೀಯ ಮಾಹಿತಿ ಮತ್ತು ಗುರುತಿಸಲಾಗದ ವ್ಯಕ್ತಿಗಳ ಡಾಟಾದೊಂದಿಗೆ ಡಿ ಎನ್ ಎ ಪ್ರೊಫೈಲ್ ತಾಳೆ ಹಾಕಲಾಯಿತು.

ಈ ಪ್ರಕರಣವನ್ನು 2013 ರಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ಮರುಪರಿಶೀಲನೆಗೆ ಒಳಪಡಿಸಲಾಯಿತು. ಅವಶೇಷಗಳನ್ನು ವಿಧಿವಿಜ್ಞಾನದ ಆನುವಂಶಿಕ ವಂಶಾವಳಿಯ ಪರೀಕ್ಷೆಗಾಗಿ ಖಾಸಗಿ ಪ್ರಯೋಗಾಲಯವಾದ ಒಥ್ರಾಮ್‌ಗೆ ಕಳುಹಿಸಲಾಯಿತು. ಜೂನ್‌ನಲ್ಲಿ, ಸದರಿ ಲ್ಯಾಬ್ ಇಂಡಿಯಾನಾದಲ್ಲಿ ವಾಸಿಸುತ್ತಿದ್ದ ಮಗುವಿನ ಸಂಭವನೀಯ ಸಂಬಂಧಿಯನ್ನು ಪತ್ತೆ ಮಾಡಿತು ಎಂದು ಟೆನ್ನಸ್ಸೀ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಪ್ರಕಟಣೆಯೊಂದರಲ್ಲಿ ತಿಳಿಸಿತ್ತು.

ನಂತರ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದಾಗ ಅವರು ತಮ್ಮ ಕುಟುಂಬದ ಸದಸ್ಯರೊಬ್ಬರು 1978 ರಲ್ಲಿ ಕಾಣೆಯಾಗಿದ್ದನ್ನು ಖಚಿತಪಡಿಸಿದರು. ಟ್ರೇಸಿಯ ಒಡಹುಟ್ಟಿದವರಾಗಿರಬಹುದಾದ ಕೆಲವರು ತಮ್ಮ ಡಿಎನ್ ಎ ನಮೂನೆಗಳನ್ನು ನೀಡಿದರು. ಅವುಗಳ ಮೂಲಕ ಯುಎನ್ ಟಿ ಸಿ ಹೆಚ್ ಐ ನಲ್ಲ್ಲಿ ಹುಡುಗಿಯ ಗುರುತು ಪತ್ತೆ ಮಾಡುವುದು ಸಾಧ್ಯವಾಯಿತು.

ಪೊಲೀಸರು 1-800-TBI-FIND ನಂಬರೊಂದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಹುಡುಗಿಯ ಸಾವಿನ ಬಗ್ಗೆ ಅಥವಾ ಅವಳು ಸಾಯುವ ಮುನ್ನ ನೋಡಿದ್ದೇಯಾದರೆ ಮಾಹಿತಿ ಒದಗಿಸುವಂತೆ ಕೋರಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.