ನೀವು ಟೆಲಿಗ್ರಾಂ ಬಳಕೆದಾರರು ಆಗಿರಬಹುದು. ಹಲವು ಗ್ರೂಪ್‍ಗಳಲ್ಲಿ ನೀವು ಸದಸ್ಯರಾಗಿರಬಹುದು. ಹಾಗಾದರೆ ಖಂಡಿತವಾಗಿಯೂ ಟೆಲಿಗ್ರಾಂ ಗ್ರೂಪ್‍ಗಳಲ್ಲಿ ನಿಮ್ಮ ನಂಬರ್ ಸುಲಭವಾಗಿ ಇತರರಿಗೆ ದೊರೆಯಬಹುದು. ಇದರಿಂದ ಅನವಶ್ಯಕ ಕರೆ, ಚಾಟಿಂಗ್‍ ನೀವು ಎದುರಿಸಬಹುದು. ಈ ತೊಂದರೆ ತಪ್ಪಿಸುವುದು ಹೇಗೆ ? ನಿಮ್ಮ ಮೊಬೈಲ್‍ ನಂಬರ್ ಇತರರ ಪಾಲಾಗದಿರುವಂತೆ ತಡೆಯುವುದು ಹೇಗೆ ?

ಹೌದು, ವಾಟ್ಸಪ್‍ ಗ್ರೂಪ್‍ ಗಳಲ್ಲಿ ನಿಮ್ಮ ಫೋನ್‍ ನಂಬರ್ ಸುಲಭವಾಗಿ ಎಲ್ಲರ ಕೈಗೂ ದೊರೆಯುತ್ತದೆ. ಇಲ್ಲಿ ನೀವು ನಿಮ್ಮ ನಂಬರ್ ಹೈಡ್ ಮಾಡಲು ಸಾಧ್ಯವಿಲ್ಲ. ಆದರೆ, ಟೆಲಿಗ್ರಾಂ ಫೋನ್ ನಂಬರ್ ಹೈಡ್ ಮಾಡುವ ಸೌಕರ್ಯವನ್ನು ತನ್ನ ಬಳಕೆದಾರರಿಗೆ ಕಲ್ಪಿಸಿದೆ. ಇದು ಗೌಪ್ಯತೆ ದೃಷ್ಟಿಯಿಂದ ಒಳ್ಳೆಯ ಫೀಚರ್. ಹಾಗಾದರೆ ಟೆಲಿಗ್ರಾಂ ಆ್ಯಪ್ ನೋಂದಣಿಗೆ ನೀವು ನೀಡಿದ ಫೋನ್ ನಂಬರ್ ಹೈಡ್ ಮಾಡಬಹುದು. ಗ್ರೂಪ್‍ನಿಂದ ನಿಮ್ಮ ನಂಬರ್ ಯಾರ ಕೈಗೂ ಸಿಗದಂತೆ ಮಾಡಬಹುದು. ಅದು ಹೇಗೆ ಎಂಬುದು ಇಲ್ಲಿದೆ ನೋಡಿ

ನಂಬರ್ ಹೈಡ್ ಮಾಡುವ ಕ್ರಮ :

ಟೆಲಿಗ್ರಾಂನಲ್ಲಿ ನಿಮ್ಮ ಮೊಬೈಲ್ ನಂಬರ್ ಹೈಡ್ ಮಾಡೋದು ಹೇಗೆ ?

ನಿಮ್ಮ ಟೆಲಿಗ್ರಾಂ ಪರದೆ ತೆರೆದುಕೊಳ್ಳಿ.

ಸೆಟ್ಟಿಂಗ್‍ ಆಯ್ಕೆ ಕ್ಲಿಕ್ ಮಾಡಿ.

‘ಪ್ರೈವಸಿ ಆ್ಯಂಡ್ ಸೆಕ್ಯೂರಿಟಿ’ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಫೋನ್ ನಂಬರ್ ಎನ್ನುವ ಆಯ್ಕೆ ಕಾಣಿಸಿಕೊಳ್ಳುತ್ತದೆ.

ಇದರ ಒಳಗೆ ಎವ್ರಿಬಡಿ ( ಎಲ್ಲರಿಗೂ), ಮೈ ಕಾಂಟಾಕ್ಟ್ಸ್ ( ನಿಮ್ಮ ಫೋನ್ ಬುಕ್‍ ನಲ್ಲಿರುವ ನಂಬರ್ ಗಳಿಗೆ ಮಾತ್ರ) ಹಾಗೂ ಕೊನೆಯದಾಗಿ ನೋಬಡಿ( ಯಾರಿಗೂ ಬೇಡ) ಎನ್ನುವ ಮೂರು ಆಯ್ಕೆಗಳಿವೆ.

ನೀವು ನೋಬಡಿ ಮೇಲೆ ಕ್ಲಿಕ್ ಮಾಡಿ.

ಈ ಮೇಲಿನ ವಿಧಾನದ ಮೂಲಕ ನಿಮ್ಮ ಫೋನ್‍ ನಂಬರ್‍ ನ್ನು ಯಾರಿಗೂ ಕಾಣದಂತೆ ಹೈಡ್ ಮಾಡಬಹುದು.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More