ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಶ್ರೇಯಸ್ ಅಯ್ಯರ್ ಇಂದು ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಇಂದು ಮೊದಲ ಪಂದ್ಯ ಪಾದಾರ್ಪಣೆ ವೇಳೆ ಭಾರತೀಯ ಕ್ರಿಕೆಟ್ನ ದಂತಕತೆ ಸುನಿಲ್ ಗವಾಸ್ಕರ್ ಶ್ರೇಯಸ್ಗೆ ಟೆಸ್ಟ್ ಕ್ಯಾಪ್ ನೀಡಿ ಶುಭ ಕೋರಿದರು. ಹಾಗೆಯೇ ಟೀಂ ಇಂಡಿಯಾ ಇತರ ಆಟಗಾರರು ಅಯ್ಯರ್ಗೆ ಅಭಿನಂದಿಸಿದರು.
ಮುಂಬೈ ಬ್ಯಾಟರ್ ಶ್ರೇಯಸ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 81.54ರ ಸ್ಟ್ರೈಕ್ ರೇಟ್ನಲ್ಲಿ 52.18ರ ಸರಾಸರಿಯೊಂದಿಗೆ 4,592 ರನ್ ಗಳಿಸಿದ್ದಾರೆ. 2017ರ ಡಿ. 10ರಂದು ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಅಯ್ಯರ್ ಪಾದಾರ್ಪಣೆ ಮಾಡಿದ್ದರು. ಇದಾದ ನಾಲ್ಕು ವರ್ಷಗಳ ಬಳಿಕ ಅವರು ದೀರ್ಘ ಮಾದರಿಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.