ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​ಗೆ ಕೇವಲ 7 ದಿನ ಮಾತ್ರವೇ ಬಾಕಿಯಿದ್ದು, ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಸದ್ಯ ಸೌತ್​ ಹ್ಯಾಂಪ್ಟನ್​ನಲ್ಲಿ ಬೀಡುಬಿಟ್ಟಿರುವ ವಿರಾಟ್ ಪಡೆ, ಕಠಿಣ ಅಭ್ಯಾಸ ಆರಂಭಿಸಿದೆ. ಇಂದು ಮೊದಲ ಗ್ರೂಪ್​ ಪ್ರ್ಯಾಕ್ಟೀಸ್​ ಸೆಷನ್​​ನಲ್ಲಿ ಭಾಗಿಯಾಗಿದ್ದ ಟೀಮ್ ಇಂಡಿಯಾ ಆಟಗಾರರು, ಹೆಡ್​​​ಕೋಚ್ ರವಿ ಶಾಸ್ತ್ರಿ ಮುಂದಾಳತ್ವದಲ್ಲಿ ನೆಟ್ಸ್​ನಲ್ಲಿ ಬೆವರಿಳಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ, ಕೆ.ಎಲ್​.ರಾಹುಲ್​, ರಿಷಭ್ ಪಂತ್ ನೆಟ್ಸ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ರೆ, ಆಶ್ವಿನ್, ಮಹಮ್ಮದ್ ಶಮಿ, ಜಸ್​ಪ್ರೀತ್​ ಬೂಮ್ರಾ, ಮಹಮ್ಮದ್ ಸಿರಾಜ್ ನೆಟ್ ಸೆಷನ್​​ನಲ್ಲಿ, ಬೌಲಿಂಗ್ ನಡೆಸಿದರು. ಆಟಗಾರರು ತಾಲೀಮು ನಡೆಸಿದ ವಿಡಿಯೋವನ್ನ ಬಿಸಿಸಿಐ, ತನ್ನ ವೈಬ್​ಸೈಟ್​ನಲ್ಲಿ ಶೇರ್​ ಮಾಡಿದೆ.

The post ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ಗೆ​ ಟೀಮ್ ಇಂಡಿಯಾ ಭರ್ಜರಿ ಪ್ರಾಕ್ಟೀಸ್ appeared first on News First Kannada.

Source: newsfirstlive.com

Source link