ಟೆಸ್ಟ್​​ ಕ್ರಿಕೆಟ್ ಆರಂಭವಾಗಿ 144 ವರ್ಷಗಳಾದ ಬಳಿಕ, ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ಇಂದು ಆರಂಭಗೊಳ್ಳಲಿದೆ.

ಟೆಸ್ಟ್​ ಚಾಂಪಿಯನ್ ಪಟ್ಟಕ್ಕಾಗಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲ್ಯಾಂಡ್ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡಗಳು ಸೆಣಸಲಿವೆ. 2019ರ ಜುಲೈಯಿಂದ ಆರಂಭಗೊಂಡು ಎರಡು ವರ್ಷಗಳ ಅವಧಿಯಲ್ಲಿ ಪಂದ್ಯಾವಳಿ ನಡೆದಿದೆ. ಈ ಪಂದ್ಯಾವಳಿಯಲ್ಲಿ 9 ತಂಡಗಳು 71 ಪಂದ್ಯಗಳನ್ನು ಆಡಿವೆ. ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡ ಫೈನಲ್​ಗೆ ಬಂದಿದ್ದು, ಫೈನಲ್‌ನಲ್ಲಿ ಗೆದ್ದ ತಂಡಕ್ಕೆ 1.6 ಮಿಲಿಯ ಡಾಲರ್ ನಗದು ಬಹುಮಾನ ಕೂಡ ನೀಡಲಾಗುತ್ತದೆ. ಸೋತ ತಂಡಕ್ಕೆ ಇದರ ಅರ್ಧದಷ್ಟು ಮೊತ್ತ ಸಿಗಲಿದೆ.

The post ಟೆಸ್ಟ್​ ಚಾಂಪಿಯನ್​ಶಿಪ್​​​ ಫೈನಲ್​ಗೆ ಕ್ಷಣಗಣನೆ- ಟೀಂ ಇಂಡಿಯಾ, ಕಿವೀಸ್​ ನಡುವೆ ಭಾರೀ ಹಣಾಹಣಿ appeared first on News First Kannada.

Source: newsfirstlive.com

Source link