ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ನಾಯಕನಿಗೆ ಜವಾಬ್ದಾರಿಗಳೇ ಹೆಚ್ಚಾಗಿದೆ. ನಾಯಕನಾಗಿ ಕೊಹ್ಲಿ ಐಸಿಸಿ ಟೂರ್ನಿಗಳಾದ ಟಿ20 ವಿಶ್ವಕಪ್​, ಏಕದಿನ ವಿಶ್ವಕಪ್​, ಚಾಂಪಿಯನ್​​ ಟ್ರೋಫಿ ಈ ಮೂರೂ ಟೂರ್ನಿಗಳಲ್ಲಿ ಕೊನೆ ಹಂತದಲ್ಲಿ ಎಡವಿದ್ದಾರೆ. ಇದೀಗ ಟೆಸ್ಟ್​ ಚಾಂಪಿಯನ್​ ಶಿಪ್​ ರೂಪದಲ್ಲಿ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲೋ ಅವಕಾಶ ಕ್ಯಾಪ್ಟನ್​ ಕೊಹ್ಲಿ ಮುಂದಿದೆ. ಕಿವೀಸ್​ ಪಡೆಯನ್ನ ಮಣಿಸಿ ಈ ಟ್ರೋಫಿಯನ್ನಾದ್ರೂ ಜಯಿಸಬೇಕಾದ ಸವಾಲು ಕೊಹ್ಲಿ ಮುಂದಿದೆ.

ನಾಯಕನಾಗಿ ಎದುರಾಳಿ ಕಿವೀಸ್​ಗೆ ರಣತಂತ್ರ ಹೆಣೆಯಬೇಕಾದ ಜವಾಬ್ದಾರಿ ಒಂದೆಡೆಯಾದ್ರೆ, ಬ್ಯಾಟ್ಸ್​ಮನ್​ ಆಗಿ ತಂಡಕ್ಕೆ ಕಾಣಿಕೆ ನೀಡೋ ಸವಾಲು ಇನ್ನೊಂದೆಡೆ. ಹಲವು ದಿನಗಳಿಂದಲೂ ಅಭಿಮಾನಿಗಳಿಗೆ ಸೆಂಚುರಿ ಇನ್ನಿಂಗ್ಸ್​ನ ಗಿಫ್ಟ್​ ನೀಡೋಕೆ ಕೊಹ್ಲಿ ಸಿದ್ಧತೆ ನಡೆಸಿದ್ದಾರೆ. ಫ್ಯಾನ್ಸ್​ ಕೂಡ ಸೌತ್​ಹ್ಯಾಂಪ್ಟನ್​ನಲ್ಲಿ ಶತಕಗ ಸೊಬಗು ಪಕ್ಕಾ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಆದ್ರೆ, ಅದಕ್ಕೆ ಈ ಫ್ಯಾಬ್​-4ಗಳು ಅವಕಾಶ ನೀಡ್ತಾರಾ ಅನ್ನೋದೇ ಈಗ ಪ್ರಶ್ನೆಯಾಗಿದೆ. ಯಾಕಂದ್ರೆ ಬಿಡುಗಡೆಯಾಗಿರುವ 15 ಜನರ ತಂಡದಲ್ಲಿ ಈ ನಾಲ್ವರಿಗೂ ಮಣೆ ಹಾಕಲಾಗಿದೆ.

ಕಿವೀಸ್​​​ನ ಫ್ಯಾಬ್​-4ಗಳೇ ರನ್​ಮಷೀನ್​ಗೆ ಕಂಟಕ..!
ವಿರಾಟ್​​ ಕೊಹ್ಲಿಗೆ ಟಿಮ್​ ಸೌಥಿಯೇ ಮೊದಲ ಥ್ರೆಟ್​​..!

ಯೆಸ್​​​..! ಮಹತ್ವದ ಪಂದ್ಯದಲ್ಲಿ ಕೊಹ್ಲಿಗೆ ಕಿವೀಸ್​ನ ಫ್ಯಾಬ್​ – 4 ವೇಗಿಗಳೇ ಸವಾಲಾಗಿದ್ದಾರೆ. ಅದರಲ್ಲೂ ಟಿಮ್​ ಸೌಥಿ ಕೊಹ್ಲಿಗೆ ಮೊದಲ ಥ್ರೆಟ್​ ಅಂದ್ರೆ ತಪ್ಪಾಗಲ್ಲ. ಅಂತರಾಷ್ಟ್ರೀಯ ಕರಿಯರ್​​ನಲ್ಲಿ ಈವರೆಗೆ 10 ಬಾರಿ ಟಿಮ್​ ಸೌಥಿಗೆ ಕಿಂಗ್​ ಕೊಹ್ಲಿ ವಿಕೆಟ್​ ಒಪ್ಪಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲೂ 3 ಬಾರಿ ಕಿವೀಸ್​ ವೇಗಿಯ ತಂತ್ರಕ್ಕೆ ಸಿಲುಕಿದ್ದಾರೆ.

ಟೆಸ್ಟ್​​ ಕ್ರಿಕೆಟ್​​ನಲ್ಲಿ ಸೌಥಿ ಎದುರು ಕೊಹ್ಲಿ
ಇನ್ನಿಂಗ್ಸ್​​              09
ರನ್​                   109
ಔಟ್​                   03

ಟ್ರಂಪ್​ಕಾರ್ಡ್​​ ಬೋಲ್ಟ್​​​​​ಗೂ 3 ಬಾರಿ ಬಲಿ​​..!
ಸೌಥಿ ಮಾತ್ರವಲ್ಲ..! ನ್ಯೂಜಿಲೆಂಡ್​ನ ಇನ್ನೋರ್ವ ವೇಗಿ ಟ್ರೆಂಟ್​​ ಬೋಲ್ಟ್​​ ಎದುರು ಕೂಡ ಕೊಹ್ಲಿ ತಡಕಾಡಿದ್ದಾರೆ. ಈವರೆಗೆ ಟೆಸ್ಟ್​ ಕ್ರಿಕೆಟ್​​ನಲ್ಲಿ ಒಟ್ಟು 3 ಬಾರಿ ಕೊಹ್ಲಿ ವಿಕೆಟ್​ ಕೈ ಚೆಲ್ಲಿದ್ದಾರೆ. ಇಷ್ಟೇ ಅಲ್ಲ 2019ರ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ 4 ಬಾರಿ ಔಟ್​ ಆಗಿದ್ದಾರೆ. ಇದು ಆತಂಕ ಮೂಡಿಸಿರೋದು..!

2019ರ ಬಳಿಕ ಬೋಲ್ಟ್​ ಎದುರು ಕೊಹ್ಲಿ
ಇನ್ನಿಂಗ್ಸ್​​          06
ರನ್​               16
ಔಟ್​              04

ವ್ಯಾಗ್ನರ್​​ ಬೌಲಿಂಗ್​ ಕೂಡ ಕೊಹ್ಲಿಗೆ ಕಂಟಕವೇ..! ನಿಖರವಾದ ಲೈನ್​ ಆ್ಯಂಡ್​ ಲೆಂಥ್​ನೊಂದಿಗೆ ಸಾಲಿಡ್​ ಸ್ಪೆಲ್​ ಮಾಡಬಲ್ಲ ಕಿವೀಸ್​ ವೇಗಿ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಕೊಹ್ಲಿಯನ್ನ ಬಹುವಾಗಿ ಕಾಡಿದ್ದಾರೆ. ಟಿ20 ಮಾದರಿಯಲ್ಲಿ ವ್ಯಾಗ್ನರ್​​ರ ಮೊದಲ ಎಸೆತಕ್ಕೆ ವಿಕೆಟ್​ ಒಪ್ಪಿಸಿರುವ ಕೊಹ್ಲಿ, ಟೆಸ್ಟ್​ ಕ್ರಿಕೆಟ್​​ನಲ್ಲಿ ಆಡಿದ 6 ಇನ್ನಿಂಗ್ಸ್​ಗಳಲ್ಲೇ 3 ಬಾರಿ ಔಟ್​ ಆಗಿದ್ದಾರೆ.

ಟೆಸ್ಟ್​ ಮಾದರಿಯಲ್ಲಿ ವ್ಯಾಗ್ನರ್​ ಎದುರು ಕೊಹ್ಲಿ
ಇನ್ನಿಂಗ್ಸ್​​        06
ರನ್​             60
ಔಟ್​            03

ಸೌತ್​​ಹ್ಯಾಂಪ್ಟನ್​ನಲ್ಲಿ ಕಾಡಲಿದ್ದಾನೆ ಆರ್​​ಸಿಬಿ ಟೀಮ್​ಮೇಟ್​..!
ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದಲ್ಲಿ ಕೊಹ್ಲಿ ನಾಯಕತ್ವದಲ್ಲೇ ಆಡೋ ವೇಗಿಯೂ ಸೌತ್​ಹ್ಯಾಂಪ್ಟನ್​ನಲ್ಲಿ ಕೊಹ್ಲಿ ಪಾಲಿಗೆ ವಿಲನ್ನೇ..! ಜೆಮಿಸನ್​ನ ಟೆಸ್ಟ್​ ಕರಿಯರ್​ನ 2ನೇ ವಿಕೆಟ್​​ ಆಗಿರುವ ಕೊಹ್ಲಿ, ಎದುರಿಸಿದ 45 ಎಸೆಗಳಲ್ಲಿ ಕೇವಲ 21 ರನ್​ ಕಲೆ ಹಾಕಿದ್ದಾರೆ. ಆರ್​​ಸಿಬಿ ತಂಡದ ಆಲ್​ರೌಂಡರ್​ ಕೊಹ್ಲಿಗೆ ಮಾತ್ರವಲ್ಲ ಇಡೀ ಟೀಮ್​ಇಂಡಿಯಾಗೆ ಬಿಗ್​ಥ್ರೆಟ್​..! ಕಳೆದ ನ್ಯೂಜಿಲೆಂಡ್​​ ಪ್ರವಾಸದಲ್ಲಿ ಭಾರತವನ್ನ ಕಾಡಿದ್ದು ಇದೇ ವೇಗಿ.

ಫೈನಲ್​ ಪಂದ್ಯಕ್ಕೆ ಸಿದ್ಧಗೊಂಡಿರುವ ಪಿಚ್​ ಕೂಡ ಪೇಸ್​ ಹಾಗೂ ಬೌನ್ಸ್​ ಒಳಗೊಂಡಿದ್ದು, ವೇಗಿಗಳಿಗೆ ಸಹಕಾರಿ ಎಂದು ಈಗಾಗಲೇ ಕ್ಯುರೇಟರ್​ ಹೇಳಿದ್ದಾರೆ. ಅಂಕಿ-ಅಂಶಗಳು ಕಿವೀಸ್​ ವೇಗಿಗಳ ಪರವಾಗಿಯೇ ಇವೆ. ಹೀಗಾಗಿ ಫೈನಲ್​ ಪಂದ್ಯದಲ್ಲಿ ಕೊಹ್ಲಿ ಹೇಗೆ ಬ್ಯಾಟಿಂಗ್​ ನಡೆಸಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

The post ಟೆಸ್ಟ್​ ಚಾಂಪಿಯನ್​​ಶಿಪ್​ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಅಗ್ನಿಪರೀಕ್ಷೆ ಯಾಕೆ..? appeared first on News First Kannada.

Source: newsfirstlive.com

Source link