ಕರ್ನಾಟಕ ತಂಡದ ಸ್ಟಾರ್ ವೇಗಿ ಪ್ರಸಿದ್ಧ್ ಕೃಷ್ಣ, ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈ ಯುವ ವೇಗಿಯ ಆಯ್ಕೆಗೆ ವಿಶೇಷ ಕಾರಣವಿದೆ. ಹಾಗೇ ಇದರ ಹಿಂದೆ ಬಿಸಿಸಿಐ ಮಾಸ್ಟರ್ ಪ್ಲಾನ್ ಕೂಡ ರೂಪಿಸಿದೆ. ಅದೇನಂತಿರಾ. ಇಲ್ಲಿದೆ ಡಿಟೇಲ್ಸ್.
ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ 16 ಸದಸ್ಯರ ತಂಡವನ್ನ, ಪ್ರಕಟಿಸಿದೆ. ಅಜಿಂಕ್ಯ ರಹಾನೆ ನೇತೃತ್ವದ ಈ ಯುವ ಸೈನ್ಯದಲ್ಲಿ, ನಿರೀಕ್ಷೆಯಂತೆ ಕೆಲವು ಅಚ್ಚರಿ ಹೆಸರುಗಳಿವೆ. ಅದರಂತೆ ಕರ್ನಾಟಕದ ಯುವ ವೇಗಿ ಪ್ರಸಿದ್ಧ್ ಕೃಷ್ಣ ಕೂಡ ಒಬ್ಬರು. 2011ರ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಕರ್ನಾಟಕದ ಮೊದಲ ವೇಗಿ ಕೂಡ ಹೌದು. ಪೇಸ್, ಇಂಪ್ರೆಸ್ಸಿವ್ ಬೌಲಿಂಗ್ ಆ್ಯಂಡ್ ಪ್ರಾಮಿಸಿಂಗ್ ಸ್ಪೆಲ್ಲೇ, ಈತನ ಆಯ್ಕೆಗೆ ಕಾರಣ. ಹಾಗೆ ಈತನ ಆಯ್ಕೆಯ ಹಿಂದೆ ಮಾಸ್ಟರ್ ಪ್ಲಾನ್ ಕೂಡ ಇದೆ.
ಇದೇ ವರ್ಷ ಟೀಮ್ ಇಂಡಿಯಾಗೆ ಡೆಬ್ಯೂ ಮಾಡಿದ್ದ ಪ್ರಸಿದ್ಧ್ ಕೃಷ್ಣ
ಯೆಸ್, ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾಗೆ ಡೆಬ್ಯೂ ಮಾಡಿದ್ದು ಇದೇ ವರ್ಷ. ಅದು ಏಕದಿನ ಕ್ರಿಕೆಟ್ಗೆ. ಇಂಗ್ಲೆಂಡ್ ವಿರುದ್ಧ ಅಖಾಡಕ್ಕಿಳಿದಿದ್ದ ಪ್ರಸಿದ್ಧ್, ಸಿಕ್ಕ ಅವಕಾಶವನ್ನ ಎರಡೂ ಕೈಗಳಿಂದ ಬಾಚಿಕೊಂಡಿದ್ರು. ಇತ್ತೀಚೆಗೆ ನಡೆದ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲೂ ಈ ಸ್ಪೀಡ್ಸ್ಟರ್, ಚಾನ್ಸ್ ಪಡೆದಿದ್ರು. ಸ್ಟ್ಯಾಂಡ್ಬೈ ಆಟಗಾರನಾಗಿದ್ದ ಈತ, ಸರಣಿಯ 4ನೇ ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಗೊಂಡ್ರು. ಆದ್ರೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಕ್ಕಿರಲಿಲ್ಲ.
ಇಂಗ್ಲೆಂಡ್ ಸರಣಿಯ ಬಳಿಕ, ಪ್ರಮುಖ ಟೆಸ್ಟ್ ತಂಡದಲ್ಲಿ ಪ್ರಸಿದ್ಧ್ ಅವಕಾಶ ಪಡೆದಿದ್ದಾರೆ. ಕಿವೀಸ್ ಸರಣಿಗೆ ಬೂಮ್ರಾ, ಶಮಿ, ಶಾರ್ದೂಲ್ರಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಅಲಭ್ಯತೆಯಲ್ಲಿ ಪ್ರಸಿದ್ಧ್, ಚಾನ್ಸ್ ಪಡೆದುಕೊಂಡಿದ್ದಾರೆ. ಆದ್ರೆ BCCI ಮತ್ತೊಂದು ಯೋಜನೆ ಕೂಡ ರೂಪಿಸಿದೆ. ಅನುಭವಿ ವೇಗಿಗಳ ಅಲಭ್ಯತೆ ಎದುರಾದಾಗ, ಪ್ರಸಿದ್ಧ್ರನ್ನ ಕಣಕ್ಕಿಳಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ. ಅಷ್ಟೆ ಅಲ್ಲದೆ, ಭವಿಷ್ಯದ ಟೆಸ್ಟ್ ತಂಡಕ್ಕೆ ಈಗಿನಿಂದಲೇ ಪ್ರಸಿದ್ಧ್ರನ್ನ ರೆಡಿ ಮಾಡಲಾಗ್ತಿದೆ. ಅನುಭವಿಗಳ ವರ್ಕ್ಲೋಡ್ ಕಡಿಮೆ ಮಾಡುವುದು ಬಿಸಿಸಿಐ ಯೋಜನೆಯಲ್ಲಿದೆ.
ಪ್ರಸಿದ್ಧ್ರನ್ನೇ ಆಯ್ಕೆ ಮಾಡಲು ನಿಖರವಾದ ಕಾರಣವೇನು..?
ಪ್ರಸಿದ್ಧ್ ಉತ್ತಮ ವೇಗವನ್ನ ಹೊಂದಿದ್ದಾರೆ. ಹೆಚ್ಚು ಎತ್ತರ ಇರುವ ಹಿನ್ನೆಲೆ, ಉತ್ತಮ ಬೌನ್ಸ್ ಎಸೆಯಬಲ್ಲರು. ಹಾಗೆ ಪೇಸ್, ಸ್ವಿಂಗ್, ಅಟ್ಯಾಕಿಂಗ್ ಬೌಲಿಂಗ್ ತಂಡಕ್ಕೆ ನೆರವಾಗುತ್ತದೆ. ಹಾಗಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದಷ್ಟೆ ಅಲ್ಲ, IPLನಲ್ಲೂ ಮಾರಕ ಬೌಲಿಂಗ್ ದಾಳಿ ಮತ್ತು ರಣಜಿ ಕ್ರಿಕೆಟ್‌ನಲ್ಲಿ ವಿಕೆಟ್ ಟೇಕಿಂಗ್ ಸ್ಪೆಲ್ಗಳ ಮೂಲಕ, ಪ್ರಸಿದ್ಧ್ ಗಮನ ಸೆಳೆದಿದ್ದಾರೆ. ಪ್ರಸಿದ್ಧ್ರ ಸಂಘಟಿತ ಬೌಲಿಂಗ್ಗೆ ಫಿದಾ ಆಗಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಈ ಹಿಂದೆ ಗುಣಗಾನ ಮಾಡಿದ್ರು.
ಇದನ್ನೂ ಓದಿ: ಕಿಂಗ್ ಕೊಹ್ಲಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಕೋಚ್ ರವಿ ಶಾಸ್ತ್ರಿ..!
ಟೆಸ್ಟ್ಗೆ ಪರಿಗಣಿಸಬೇಕಾದ ವ್ಯಕ್ತಿ
ಪ್ರಸಿದ್ಧ್ ಕೃಷ್ಣ ಅವರ ಪೇಸ್ ಆ್ಯಂಡ್ ಸೀಮ್ ಅದ್ಭುತ. ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡುವ ಪರಿಣಿತಿ ಅವರಿಗಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟ್ಸ್ಮನ್ಗಳಿಗೆ ಕಾಡುವ ಸೀಮ್ ಬೌಲಿಂಗ್ ಹೊಂದಿದ್ದಾರೆ. ಹಾಗಾಗಿ ಅಪರೂಪದ ಬೌಲಿಂಗ್ ಕೌಶಲ್ಯ ಹೊಂದಿರುವ ಪ್ರಸಿದ್ಧ್ರನ್ನ ಟೆಸ್ಟ್ ತಂಡಕ್ಕೆ ಆಯ್ಕೆ ಸಮಿತಿ ಪರಿಗಣಿಸಲೇಬೇಕು.
ಇದನ್ನೂ ಓದಿ: ವೆಂಕಟೇಶ್ ಅಯ್ಯರ್ ಪರ VVS ಲಕ್ಷ್ಮಣ್ ಬ್ಯಾಟ್; ಮಾಜಿ ಕ್ರಿಕೆಟಿಗನಿಂದ ‘ಬಂಗಾರ’ದಂಥ ಸಲಹೆ
ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟಿಗ
ಈ ಕಾರಣಗಳಿಂದಲೇ ಪ್ರಸಿದ್ಧ್ ಚಾನ್ಸ್ ಪಡೆದುಕೊಂಡಿದ್ದಾರೆ. ಸದ್ಯ ಅನುಭವಿಗಳ ಅಲಭ್ಯತೆಯಲ್ಲಿ ಅವಕಾಶ ಪಡೆದಿರುವ ಪ್ರಸಿದ್ಧ್, ಈ ಸಲ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಹಾಗೇ ತವರಿನಲ್ಲಿ ಉತ್ತಮ ಪ್ರದರ್ಶನ ತೋರುವ ಭರವಸೆ ಹೊಂದಿದ್ದಾರೆ.
ಇದನ್ನೂ ಓದಿ: ನೀವು ನಂಬ್ಲೆ ಬೇಕು: ಚೆನ್ನೈ ಜಲಗಂಡಾಂತರಕ್ಕೆ ಕಾರಣವಾಗಿದ್ದೆ ಪ್ಲಾಸ್ಟಿಕ್.. ಹೇಗೆ ಗೊತ್ತಾ..?