ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವ ಸ್ಥಾನಕ್ಕೆ ಟಿಮ್ ಪೇನ್ ರಾಜೀನಾಮೆ ನೀಡಿದ್ದಾರೆ. 2017-18ರ ಆಶಸ್ ಸರಣಿ ಆರಂಭಕ್ಕೂ ಮುನ್ನ ಕ್ರಿಕೆಟ್ ಆಸ್ಟ್ರೇಲಿಯಾದ ಮಾಜಿ ಸಹದ್ಯೋಗಿಗೆ ಅಶ್ಲೀಲ ಚಿತ್ರಗಳ & ಸಂದೇಶ ರವಾನೆ ಆರೋಪ ಕೇಳಿ ಬಂದಿದೆ. ಈ ಪ್ರಕರಣ ಸಂಬಂಧ ತನಿಖೆಗೆ ನಡೆಯುತ್ತಿದ್ದು, ಈ ಬೆನ್ನಲ್ಲೇ ಟೆಸ್ಟ್ ನಾಯಕತ್ವಕ್ಕೆ ಟೀಮ್ ಪೈನ್ ರಾಜೀನಾಮೆ ಘೋಷಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಟಿಮ್ ಪೇನ್, ಇದು ನಂಬಲಾಗದ ನಿರ್ಧಾರ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ನನ್ನ ಕುಟುಂಬದ ಪಾಲಿಗೆ ಇದು ಸರಿಯಾದ ನಿರ್ಧಾರವಾಗಿದೆ. ಆಗ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದೆ. ಈ ಘಟನೆ ಸಾರ್ವಜನಿಕವಾಗಿ ದೊಡ್ಡ ಚರ್ಚೆಯಾಗಿದೆ. ಈ ಪ್ರಕರಣ ಸಬಂಧ ನನ್ನ ಹೆಂಡತಿ, ಕುಟುಂಬಸ್ಥರು ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾಗೆ ನಾನು ಕ್ಷಮೆಯಾಚಿಸುತ್ತೇನೆ.
ನಾಯಕತ್ವದಿಂದ ಕೆಳಗಿಳಿಯುವ ತಕ್ಷಣದ ನಿರ್ಧಾರ ಸರಿಯಾಗಿದೆ ಎಂದು ನಾನು ನಂಬುತ್ತೇನೆ. ಆಸೀಸ್ ಸರಣಿಗೂ ಮುನ್ನ ದೊಡ್ಡ ವಿವಾದ ಸೃಷ್ಟಿಸಲು ನಾನು ಬಯಸುವುದಿಲ್ಲ. ಹೀಗಾಗಿ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವುದಾಗಿ ಟಿಮ್ ಪೇನ್ ತಿಳಿಸಿದ್ದಾರೆ.