ಟೆಸ್ಟ್‌ ಕ್ರಿಕೆಟ್‌ ನಾಯಕತ್ವ ತೊರೆದ ಕೊಹ್ಲಿಗೆ ಶೇನ್‌ ವಾರ್ನ್‌ ಏನಂದ್ರು..?


ಟೀಂ ಇಂಡಿಯಾ ಟೆಸ್ಟ್​ ನಾಯಕತ್ವದಿಂದ ಕೆಳಗಿಳಿದ ವಿರಾಟ್​ ಕೊಹ್ಲಿ ನಿರ್ಧಾರದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್‌ ವಾರ್ನ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರೋ ಶೇನ್‌ ವಾರ್ನ್‌, ಇಷ್ಟು ವರ್ಷ ಟೆಸ್ಟ್‌ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ ಕೊಹ್ಲಿಗೆ ಥ್ಯಾಂಕ್ಸ್‌ ಎಂದರು.

ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಅತ್ಯುತ್ತಮ ಸಾಧನೆ ಮಾಡಿದೆ. ಕ್ಯಾಪ್ಟನ್‌ ಆಗಿ ನೀವು ಮಾಡಿದ ಸಾಧನೆಗೆ ಕಂಗ್ರಾಟ್ಸ್‌. ಟೆಸ್ಟ್‌ ಕ್ರಿಕೆಟ್‌ಗೆ ನೀವು ನೀಡಿದ ಕೊಡುಗೆ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲೇ ನಂ.1 ಮಾದರಿ ಎಂದು ಸಾಬೀತುಪಡಿಸಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೊಹ್ಲಿ ಭಾರತದ ಯಶಸ್ವಿ ನಾಯಕ. 68 ಪಂದ್ಯಗಳಲ್ಲಿ ತಂಡ ಮುನ್ನಡೆಸಿರೋ ಕೊಹ್ಲಿ, ಟೀಂ ಇಂಡಿಯಾಗೆ 40 ಜಯ ತಂದುಕೊಟ್ಟಿದ್ದಾರೆ.

News First Live Kannada


Leave a Reply

Your email address will not be published. Required fields are marked *