ಟೆಸ್ಟ್ ಕ್ಯಾಪ್ಟನ್ಸಿಗೆ ರೋಹಿತ್​, ರಾಹುಲ್​, ಬೂಮ್ರಾ ಯಾರೂ ಉತ್ತಮ ಆಯ್ಕೆ ಅಲ್ಲ! ಯಾಕೆ ಗೊತ್ತಾ..?


ವಿರಾಟ್​ ಕೊಹ್ಲಿ ಪಟ್ಟ ತ್ಯಜಿಸಿದ ಬೆನ್ನಲ್ಲೇ ನೂತನ ಕ್ಯಾಪ್ಟನ್​ ಆಯ್ಕೆಯ ಡಿಬೆಟ್​ ಜೋರಾಗಿದೆ. ಈ ಚರ್ಚೆಯಲ್ಲಿ ಸೀನಿಯರ್​ ಆಟಗಾರರ ಹೆಸರೇ ಹೆಚ್ಚು ಸದ್ದು ಮಾಡ್ತಿದೆ. ರೋಹಿತ್​, ರಾಹುಲ್​, ಬೂಮ್ರಾ ಹೀಗೆ ಹಲ ಹೆಸರು ಕೇಳಿ ಬರ್ತಿವೆ. ಅಸಲಿಗೆ ಇವರ್ಯಾರೂ ಉತ್ತಮ ಆಯ್ಕೆಯಾಗೋಕೆ ಸಾಧ್ಯವಿಲ್ಲ. ಅದ್ಯಾಕೆ?

ದೀರ್ಘ ಕಾಲದಿಂದ ಟೀಮ್​ ಇಂಡಿಯಾದ ನಾಯಕತ್ವ ಹೊಂದಿದ್ದ ಕೊಹ್ಲಿ ದಿಢೀರ್​​ ಪಟ್ಟ ತ್ಯಜಿಸಿದ್ದಾರೆ. ಇದರ ಬೆನ್ನಲ್ಲೇ, ನೂತನ ನಾಯಕನ ಹುಡುಕಾಟ ಜೋರಾಗಿದೆ. ಹಲ ಮಾಜಿ ಕ್ರಿಕೆಟಿಗರು, ವಿಶ್ಲೇಷಕರು ಸೀನಿಯರ್ಸ್​​ಗಳ ಪರ ಬ್ಯಾಟಿಂಗ್​ ನಡೆಸ್ತಿದ್ದಾರೆ. ಆದ್ರೆ, ಅವರ್ಯಾರು ನಾಯಕನ ಸ್ಥಾನಕ್ಕೆ ಉತ್ತಮ ಆಯ್ಕೆಯಲ್ಲ.

ರೋಹಿತ್​ಗೆ ಹೊರೆಯಾಗಲಿದೆ ಹೆಚ್ಚುವರಿ ಜವಾಬ್ದಾರಿ
ರೋಹಿತ್​ ಶರ್ಮಾ ಹೆಸರು ನಾಯಕತ್ವ ರೇಸ್​ನಲ್ಲಿ ಮುಂಚೂಣಿಯಲ್ಲಿದೆ. ಆದ್ರೆ, ಹಿಟ್​ಮ್ಯಾನ್​ ಈಗಾಗಲೇ ಫಿಟ್​ನೆಸ್​ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೊತೆಗೆ ಮುಂದಿನ ಎಪ್ರಿಲ್​ನಲ್ಲಿ 35ನೇ ವರ್ಷಕ್ಕೂ ಕಾಲಿಡಲಿದ್ದಾರೆ. ಈಗಾಗಲೇ ಟಿ20 ಹಾಗೂ ಏಕದಿನ ನಾಯಕತ್ವದ ಜವಾಬ್ದಾರಿ ಹೊತ್ತಿರೋ ರೋಹಿತ್​ಗೆ, ಈ ಹೆಚ್ಚುವರಿ ಜವಾಬ್ದಾರಿ ಇನ್ನಷ್ಟು ಹೊರೆಯಾಗಲಿದೆ. ಫಿಟ್​ನೆಸ್​​​ ಹಾಗೂ ವಯಸ್ಸನ್ನ ಗಮನಿಸಿದ್ರೆ, ಮುಂಬೈಕರ್​ ಪಟ್ಟಕಟ್ಟದಿರೋದೆ ಒಳ್ಳೇದು.

ರಾಹುಲ್​ಗೆ ಪಟ್ಟ ಕಟ್ಟೋದು ಬೇಡವೇ ಬೇಡ..!
ಕನ್ನಡಿಗ ಕೆಎಲ್​ ರಾಹುಲ್​ ಹೆಸರೂ ಹೆಚ್ಚಾಗಿ ಕೇಳಿ ಬರ್ತಿದೆ. ಟೆಸ್ಟ್​​ ತಂಡದಿಂದಲೇ ದೂರವಾಗಿದ್ದ ರಾಹುಲ್​ಗೆ ಕಳೆದ ಇಂಗ್ಲೆಂಡ್​ ಪ್ರವಾಸದಿಂದ ಚಾನ್ಸ್​ ಸಿಗ್ತಿದೆ. ಹಾಗಿದ್ರೂ, ರಾಹುಲ್ ಇನ್​ಕನ್ಸಿಸ್ಟೆಂಟ್​ ಬ್ಯಾಟಿಂಗ್​ ಮುಂದುವರೆದಿದೆ. ಟೆಸ್ಟ್​ನಲ್ಲಿ 35.38ರ ಸಾಧಾರಣ ಸರಾಸರಿ ಹೊಂದಿರೋದನ್ನ ಗಮನಿಸಿದ್ರೆ, ನಾಯಕತ್ವದ ಜವಾಬ್ದಾರಿ ಕೆಎಲ್​ಗೆ ಇನ್ನಷ್ಟು ಹೊರೆಯಾಗಲಿದೆ ಅನ್ನೋದು ಹಲವರ ಅಭಿಪ್ರಾಯವಾಗಿದೆ.

ಜಸ್​ಪ್ರಿತ್​ ಬೂಮ್ರಾ ಭವಿಷ್ಯಕ್ಕೂ ನಾಯಕತ್ವ ಮಾರಕ
ವೇಗಿ ಜಸ್ಪ್ರಿತ್​ ಬೂಮ್ರಾ, ಮೂರೂ ಮಾದರಿಯಲ್ಲಿ ಟೀಮ್​ ಇಂಡಿಯಾ ಮೇನ್​ ವೆಪನ್​. ಅದರಲ್ಲೂ ಫಾರಿನ್​ ಪಿಚ್​ಗಳಲ್ಲಿ ಮ್ಯಾಚ್​​ ವಿನ್ನರ್​​ ಗುರುತಿಸಿಕೊಂಡಿದ್ದಾರೆ. ವರ್ಷ ಪೂರ್ತಿ ಮೂರು ಮಾದರಿಯಲ್ಲಿ ಬ್ಯುಸಿಯಾಗೋ ವಿಶ್ರಾಂತಿ ಬೇಕೇ ವಿನಃ, ಹೆಚ್ಚುವರಿ ಜವಾಬ್ದಾರಿ ಅಲ್ಲ. ರೆಸ್ಪಾನ್ಸಿಬಿಲಿಟಿ ಹೆಚ್ಚಾದ್ರೆ, ಬೂಮ್ರಾ

ಪರ್ಫಾಮೆನ್ಸ್​ ಡಲ್​ ಆಗೋ ಸಾಧ್ಯತೆ ಹೆಚ್ಚಿದೆ.
ಇವರೆಲ್ಲರೊಂದಿಗೆ ಆಫ್​ ಸ್ಪಿನ್ನರ್​ ಆರ್​.ಅಶ್ವಿನ್​ ಹೆಸರು ಕೇಳಿ ಬರ್ತಿದೆ. ಆದ್ರೆ, ವಿದೇಶಿ ಪಿಚ್​ಗಳಲ್ಲಿ ಅಶ್ವಿನ್, ಇಂಫ್ಯಾಕ್ಟ್​​ಫುಲ್​ ಪ್ರದರ್ಶನ ನೀಡ್ತಿಲ್ಲ. ಫಾರಿನ್​ ಪಿಚ್​ನಲ್ಲಿ ಪ್ಲೇಯಿಂಗ್​ ಇಲೆವೆನ್​ಗೆ ಅಶ್ವಿನ್​ ಆಯ್ಕೆಯೇ ಚರ್ಚಾ ವಿಷಯವಾಗಿರುವಾಗ ನಾಯಕನ ಪಟ್ಟ ಕಟ್ಟೋದು ಎಷ್ಟು ಸರಿ ಅನ್ನೋದು ಪ್ರಶ್ನೆಯಾಗಿದೆ.
ಈ ಎಲ್ಲಾ ಕಾರಣಗಳಿಂದ ರಿಷಭ್​ ಪಂತ್​, ಶ್ರೇಯಸ್​ ಅಯ್ಯರ್​ ಅವರಂತಹ ಯುವ ಆಟಗಾರರಿಗೆ ಪಟ್ಟ ಕಟ್ಟೋದು ಭವಿಷ್ಯದ ದೃಷ್ಟಿಯಿಂದಲೂ ಸಹಾಯಕವಾಗಲಿದೆ. ಅಂತಿಮವಾಗಿ ಈ ಎಲ್ಲವೂ ಚರ್ಚೆಗೆ ಬರಲಿದ್ದು, ಬಿಸಿಸಿಐ ಹಾಗೂ ಆಯ್ಕೆ ಸಮಿತಿ ಯಾರಿಗೆ ಪಟ್ಟ ಕಟ್ಟುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಜೊತೆಗೆ ಕೋಚ್​ ರಾಹುಲ್​ ದ್ರಾವಿಡ್​ ಆಯ್ಕೆಯೇ ಇಲ್ಲಿ ನಿರ್ಣಾಯಕವಾಗಲಿದೆ.

News First Live Kannada


Leave a Reply

Your email address will not be published. Required fields are marked *