ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಾಂಗ್ಲಾ ತಂಡದ ಮಹಮ್ಮದುಲ್ಲಾ..!

ಬಾಂಗ್ಲಾದೇಶ ತಂಡದ T20 ನಾಯಕ ಮತ್ತು ಆಲ್​​ರೌಂಡರ್​​​​ ಮಹಮ್ಮದುಲ್ಲಾ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಈ ಬಗ್ಗೆ ಖಚಿತಪಡಿಸಿದೆ. ಟೆಸ್ಟ್​ ತಂಡ ತೊರೆದಿರುವ ಮಹಮ್ಮದ್ದುಲ್ಲಾ, ಟಿ20, ಏಕದಿನ ಕ್ರಿಕೆಟ್​​​ನಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.

50 ಟೆಸ್ಟ್​ ಪಂದ್ಯಗಳನ್ನಾಡಿರುವ 2914 ರನ್​ ಕಲೆ ಹಾಕಿದ್ದಾರೆ. ಅದರಲ್ಲಿ 5 ಶತಕ ಮತ್ತು 16 ಅರ್ಧಶತಕಗಳು ಕೂಡ ಸೇರಿವೆ. ಹಾಗೆಯೇ 43 ವಿಕೆಟ್​ ಕೂಡ ಪಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ಜಿಂಬಾಬ್ವೆಯಲ್ಲಿ ವರ್ಷದ ಬಳಿಕ ಟೆಸ್ಟ್​ ಕ್ರಿಕೆಟ್​ಗೆ ಮರಳಿದ ಮಹಮ್ಮದುಲ್ಲಾ, ಅಜೇಯ 150 ರನ್​​ ಕಲೆ ಹಾಕಿ ತಂಡಕ್ಕೆ 220 ರನ್​​ಗಳ ಗೆಲುವು ತಂದುಕೊಟ್ಟಿದ್ದರು.

ಈ ಬಗ್ಗೆ ಮಾತನಾಡಿರುವ ಮಹಮ್ಮದ್ದುಲ್ಲಾ, ಟೆಸ್ಟ್‌ನಿಂದ ನಿವೃತ್ತಿಯಾಗುತ್ತಿದ್ದರೂ, ನಾನಿನ್ನೂ ODI ಮತ್ತು T20 ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಆಡುತ್ತೇನೆ ಆಡುತ್ತಿದ್ದೇನೆ. ಶಾರ್ಟೆಸ್ಟ್​​​ ಫಾರ್ಮೆಟ್​​​ನಲ್ಲಿ ದೇಶಕ್ಕಾಗಿ ನನ್ನ ಅತ್ಯುತ್ತಮ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇತ್ತ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ, ಟೆಸ್ಟ್​ ತಂಡಕ್ಕಾಗಿ ನಿಮ್ಮ ಕೊಡುಗೆ ಅಮೋಘವಾದದ್ದು ಎಂದು ಧನ್ಯವಾದ ಹೇಳಿದೆ.

News First Live Kannada

Leave a comment

Your email address will not be published. Required fields are marked *