ಟೀಮ್​ ಇಂಡಿಯಾದಲ್ಲಿ ಸ್ಥಾನ ಸಿಗೋದೇ ದೊಡ್ಡ ಸವಾಲು..! ಅಪ್ಪಿತಪ್ಪಿ ಸಿಕ್ಕರೂ ಪೈಪೋಟಿಯಲ್ಲಿ ಅದನ್ನ ಉಳಿಸಿಕೊಳ್ಳೋದು ಮತ್ತೊಂದು ಸವಾಲು..! ಇದು ಇಂದು ನಿನ್ನೆಯ ಕಥೆಯಲ್ಲ, ಕಾಲದಿಂದಲೂ ಟೀಮ್​ ಇಂಡಿಯಾ ಪ್ಲೇಯಿಂಗ್​ ಇಲೆವೆನ್​ ಸ್ಥಾನಕ್ಕಿರೋ ಪೈಪೋಟಿಯಿದು. ಈ ಪೈಪೋಟಿಯಿಂದ ಸ್ಪೋಟಕ ಬ್ಯಾಟ್ಸ್​ಮನ್​ ಯುವರಾಜ್​ ಸಿಂಗ್​ ಕೂಡ ಹೊರತಾಗಿಲ್ಲ.

ಯುವರಾಜ್​ ಸಿಂಗ್​…! ಟೀಮ್​ ಇಂಡಿಯಾ ಕಂಡ ಮೋಸ್ಟ್​ ಫ್ಲೆಕ್ಸಿಬಲ್​​ ಆಲ್​ರೌಂಡರ್. ಸ್ಪೋಟಕ ಬ್ಯಾಟಿಂಗ್​, ಆರ್ಥೋಡಕ್ಸ್​ ಬೌಲಿಂಗ್​ನಿಂದಲೇ ಅದೆಷ್ಟೋ ಗೆಲುವಿನ ಗಿಫ್ಟ್​ ನೀಡಿದ ಖ್ಯಾತಿ, ಯುವಿಗಿದೆ. 2007ರ ಚುಟುಕು ವಿಶ್ವಕಪ್​, 2011 ಏಕದಿನ ವಿಶ್ವಕಪ್​ ಈ ಎರಡೂ ಟ್ರೋಫಿಗಳ ಗೆಲುವಿನಲ್ಲಿ ಎಡಗೈ ಆಲ್​ರೌಂಡರ್​​ ಕೊಡುಗೆಯನ್ನ ಅಲ್ಲಗಳೆಯುವಂತಿಲ್ಲ.

ಕೇವಲ ಅದೆರಡು ವಿಶ್ವಕಪ್​ ಟೂರ್ನಿಗಳಲ್ಲಿ ಮಾತ್ರವಲ್ಲ..! ಕರಿಯರ್​ನೂದ್ದಕ್ಕೂ ಯುವಿ ನೀಡಿದ್ದು, ಮಾಸ್ಟರ್​ ಕ್ಲಾಸ್​​ ಪ್ರದರ್ಶನವನ್ನೇ. ಯುವರಾಜ್​ ಸಿಂಗ್​ರ ಏಕದಿನ, ಟಿ20 ಮಾದರಿಯ ಟ್ರ್ಯಾಕ್​​ ರೆಕಾರ್ಡೇ ಈ ಬಗ್ಗೆ ಮಾತನಾಡುತ್ತೆ.

ಏಕದಿನ, ಟಿ20 ಮಾದರಿಯಲ್ಲಿ ಯವರಾಜ್​ ಸಿಂಗ್​
ಏಕದಿನ                              ಟಿ20
304              ಪಂದ್ಯ            58
8701             ರನ್​            1177
111             ವಿಕೆಟ್​​            28

ODI, T20ಯಲ್ಲಿ ಖಾಯಂ ಪ್ಲೇಯರ್​, ಟೆಸ್ಟ್​​ ಸ್ಥಾನಕ್ಕೇ ಫೈಟ್​​
ಎರಡು ದಶಕಗಳಲ್ಲಿ ಸಿಕ್ಕಿದ್ದು ಕೇವಲ 40 ಚಾನ್ಸ್

ಯೆಸ್​​..! ಹಲವು ಏರಿಳಿತಗಳ ನಡುವೆಯೂ ಏಕದಿನ, ಟಿ20 ತಂಡದ ಖಾಯಂ ಪ್ಲೇಯರ್​​ ಆಗಿದ್ದ ಯುವರಾಜ್​ ಸಿಂಗ್,​ ಟೆಸ್ಟ್​ ತಂಡದಲ್ಲಿ ಮಾತ್ರ ವಾಟರ್​ ಬಾಯ್​ ಆಗಿದ್ದೇ ಹೆಚ್ಚು..! 2003ರಲ್ಲಿ ಟೆಸ್ಟ್​​ ಕ್ರಿಕೆಟ್​​​ಗೆ ಪದಾರ್ಪಣೆ ಮಾಡಿದ್ರೂ, ಎರಡು ದಶಕಗಳ ಸುದೀರ್ಘ ವೃತ್ತಿ ಜೀವನದಲ್ಲಿ ಆಡಿದ್ದು ಕೇವಲ 40 ಟೆಸ್ಟ್​​ ಪಂದ್ಯಗಳನ್ನ ಮಾತ್ರ..!

GFX: ಯವರಾಜ್​ ಸಿಂಗ್​ ಟೆಸ್ಟ್​​ ಕರಿಯರ್​​
ಪಂದ್ಯ             40
ರನ್​               1900
100/50          3/11
ವಿಕೆಟ್​​            09

33.93 ಟೆಸ್ಟ್​​ ಕ್ರಿಕೆಟ್​​ನಲ್ಲಿ ಯುವರಾಜ್​ ಸಿಂಗ್​ ಕಲೆ ಹಾಕಿದ ರನ್​ ಸರಾಸರಿ ಇದು. 3.53, ಇದು ಬೌಲಿಂಗ್​ ಎಕಾನಮಿ..ಇದರೊಂದಿಗೆ ಬೋನಸ್​ ಎಂಬಂತೆ ಬೆಸ್ಟ್​​ ಫೀಲ್ಡರ್​​ ಕೂಡ. ಹೀಗಿದ್ದರೂ ಯುವರಾಜ್​ ಸಿಂಗ್​ಗೆ ಸಿಕ್ಕಿದ್ದು ಕೇವಲ 40 ಪಂದ್ಯಗಳಲ್ಲಿ ಮಾತ್ರ ಅವಕಾಶ. ಟೆಸ್ಟ್​ನಲ್ಲಿ ಸುದೀರ್ಘವಾಗಿ ಆಡಲು ಅವಕಾಶ ಸಿಗಲಿಲ್ಲ ಅನ್ನೋದೇ, ಯುವಿ ಮನದಲ್ಲಿ ಇಂದಿಗೂ ಇರುವ ನೋವು.

ಮುಂದಿನ ಜೀವನದಲ್ಲಾದ್ರೂ ಅವಕಾಶ ಸಿಗುತ್ತಾ ಎಂದ ಯುವಿ..!

ಟ್ವಿಟರ್​​ನಲ್ಲಿ ಯಾವ ಭಾರತೀಯ ಆಟಗಾರ ಇನ್ನೂ ಹೆಚ್ಚು ಟೆಸ್ಟ್​ ಪಂದ್ಯಗಳನ್ನಾಡಬೇಕಿತ್ತು ಎಂದು ವಿಸ್ಡನ್​ ಇಂಡಿಯಾ, ಅಭಿಮಾನಿಗಳಿಗೆ ಪ್ರಶ್ನೆ ಕೇಳಿತ್ತು. ಈ ಪ್ರಶ್ನೆಗೆ ಅಭಿಮಾನಿಗಳು ಹಲವು ಉತ್ತರಗಳನ್ನ ನೀಡಿದ್ರು. ಆದ್ರೆ ಈ ಟ್ವೀಟ್​​ಗೆ ಸ್ವತಃ ಯುವರಾಜ್​ ಸಿಂಗ್​ ನೀಡಿದ ಉತ್ತರ, ಟೆಸ್ಟ್ ಕ್ರಿಕೆಟ್​ನಲ್ಲಿ​​ ಸಿಕ್ಕ ಕಡಿಮೆ ಅವಕಾಶದ ಬಗ್ಗೆ ಅಸಮಾಧಾನವನ್ನ ಹೊರ ಹಾಕಿದ್ದಾರೆ. ಮುಂದಿನ ಜನ್ಮದಲ್ಲಿ 7 ವರ್ಷಗಳ ಕಾಲ ನಾನು 12ನೇ ಆಟಗಾರನಾಗದಿದ್ದರೆ ಎಂದು ಯುವಿ ನೀಡಿರುವ ಉತ್ತರ, ಚರ್ಚೆಗೆ ಕಾರಣವಾಗಿದೆ.

ಅದೇನೆ ಇದ್ರೂ.. ಯುವರಾಜ್​ ಸಿಂಗ್​ ಹೊರತಾಗಿ ಟೀಮ್​ ಇಂಡಿಯಾ ಕ್ರಿಕೆಟ್​​ ಇತಿಹಾಸ ಎಂದಿಗೂ ಅಪೂರ್ಣ..! ಭಾರತದ ಹಲವು ಗೆಲುವಿನಲ್ಲಿ ಯುವರಾಜ್​ ಸಿಂಗ್​ ನೀಡಿದ ಅಮೂಲ್ಯ ಕೊಡುಗೆಯನ್ನ ಮರಯೋದು ಅಭಿಮಾನಿಗಳ ಪಾಲಿಗಂತೂ ಅಸಾಧ್ಯ..!

The post ಟೆಸ್ಟ್ ಕ್ರಿಕೆಟ್​ನಲ್ಲಿ 7 ವರ್ಷ 12th ಮ್ಯಾನ್ ಆಗಿ ಸೇವೆ- ಆಯ್ಕೆಗಾರರ ಕಾಲೆಳೆದ ಯುವರಾಜ್ appeared first on News First Kannada.

Source: newsfirstlive.com

Source link