ಸಂಜಯ್​ ಮಂಜ್ರೇಕರ್​..! ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಹಾಲಿ ಕ್ರಿಕೆಟ್ ವಿಶ್ಲೇಷಕ. ಮಂಜ್ರೇಕರ್​ ಒಬ್ಬ ಆಟಗಾರನಾಗಿ ಅನ್ನೋದಕ್ಕಿಂತ, ಒಬ್ಬ ವಿಶ್ಲೇಷಕನಾಗಿಯೇ ಭಾರತದ ಅಭಿಮಾನಿಗಳಿಗೆ ಹೆಚ್ಚು ಚಿರಪರಿಚಿತ. ಒಬ್ಬ ಉತ್ತಮ ಕ್ರಿಕೆಟ್​​ ಎಕ್ಸ್​ಪರ್ಟ್ ಅನ್ನೋ ​ಕಾರಣದಿಂದಲ್ಲ..! ಬದಲಾಗಿ ಕಾಂಟ್ರವರ್ಶಿಯಲ್​ ಹೇಳಿಕೆಗಳಿಂದ..!

ಅಶ್ವಿನ್​ ಬಗೆಗಿನ ಹೇಳಿಕೆಯಿಂದ ಮತ್ತೆ ಸುದ್ದಿಯಲ್ಲಿ ಮಂಜ್ರೇಕರ್​..!
ಅಶ್ವಿನ್​ ನನ್ನ ಪ್ರಕಾರ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟರ್​ ಅಲ್ಲವೇ ಅಲ್ಲ…!’ ಇದು ವಿವಾದದ ಸ್ವರೂಪ ಪಡೆದುಕೊಂಡ ಸಂಜಯ್​ ಮಂಜ್ರೇಕರ್​ರ ಲೇಟೆಸ್ಟ್ ಹೇಳಿಕೆ. ವಿಶ್ವದ ಅದೆಷ್ಟೋ ಲೆಜೆಂಡ್​ಗಳು, ವಿಶ್ಲೇಷಕರು, ಹಾಲಿ ಕ್ರಿಕೆಟಿಗರು ಅಶ್ವಿನ್​ ಟೆಸ್ಟ್​ ಕ್ರಿಕೆಟ್​​ನ ಸಾರ್ವಕಾಲಿಕ ಶ್ರೇಷ್ಠ​ ಪ್ಲೇಯರ್​ ಎಂದು ಹೇಳ್ತಿದ್ದಾರೆ. ಆದ್ರೆ, ಈ ವಿಚಾರದಲ್ಲಿ ಮಂಜ್ರೇಕರ್​ ನಿಲುವು ತದ್ವಿರುದ್ಧ..! ಸೇನಾ ರಾಷ್ಟ್ರಗಳ ಅಂಕಿ-ಅಂಶಗಳ ಆಧಾರದಲ್ಲಿ ಅಶ್ವಿನ್​ರನ್ನ ಮಂಜ್ರೇಕರ್​ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಹೇಳಿದ್ರು. ಅಷ್ಟೇ ಅಲ್ಲ..! ಈ ಬಗ್ಗೆ ಟ್ವೀಟ್​ ಕೂಡ ಮಾಡಿದ್ರು. ಇದು ವಿವಾದದ ಸ್ವರೂಪ ಪಡೆದುಕೊಳ್ತು. ಇನ್ನೂ ಮಂಜ್ರೇಕರ್​ರ ಟ್ವೀಟ್​​ಗೆ ಕೇರಂ ಸ್ಪಿನ್ನರ್​​ ಟ್ವಿಟ್​ ಮೂಲಕವೇ ಸಿನೆಮಾ ಸ್ಟ್ರೈಲ್​ನಲ್ಲಿ ತಿರುಗೇಟು ನೀಡಿದ್ರು.

ಜಡೇಜಾ ಒಬ್ಬ ಬಿಟ್ಸ್​​ ಆ್ಯಂಡ್​​ ಪೀಸಸ್​​ ಕ್ರಿಕೆಟರ್​..!
2019ರ ವಿಶ್ವಕಪ್​ ಟೂರ್ನಿಯ ವೇಳೆ ಜಡೇಜಾ, ಮಂಜ್ರೇಕರ್​​​ ನಡುವಿನ ವಾಗ್ವಾದ ತಾರಕ್ಕೇರಿತ್ತು. ಜಡ್ಡು ಬಗ್ಗೆ ನಾನು ಬಿಟ್ಸ್​​ ಆ್ಯಂಡ್​​ ಪೀಸಸ್​​ ಪ್ಲೇಯರ್​ಗಳ ಅಭಿಮಾನಿಯಲ್ಲ ಎಂದು ಮಂಜ್ರೇಕರ್​ ನೀಡಿದ ಹೇಳಿಕೆ ತೀವ್ರ ಸ್ವರೂಪದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಟ್ವಿಟರ್​​ನಲ್ಲಿ ತಿರುಗೇಟು ನೀಡಿದ್ದ ಜಡ್ಡು, ತಾವಾಡಿದ ಅರ್ಧದಷ್ಟು ಪಂದ್ಯಗಳನ್ನ ಕೂಡ ನೀವು ಆಡಿಲ್ಲ ಎಂದು ಹೇಳಿದ್ರು. ಇಷ್ಟೇ ಅಲ್ಲ..! ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಕಾಂಮೆಂಟರಿ ಬಾಕ್ಸ್ ​ನೆಡೆಗೆ ಬ್ಯಾಟ್​ ತೋರಿಸಿ ಸಂಭ್ರಮಿಸಿದ್ರು. ಮಂಜ್ರೇಕರ್​ ಆಗ ಕಾಮೆಂಟರಿ ಪ್ಯಾನಲ್​ನಲ್ಲಿದ್ರು.

ಜಡೇಜಾ, ಮಂಜ್ರೇಕರ್​ ವಿವಾದ ಇಲ್ಲಿಗೆ ನಿಂತಿಲ್ಲ.! ಈ ವಿವಾದದ ಬಳಿಕ ಮಂಜ್ರೇಕರ್​ ಜಡ್ಡುಗೆ ಇಂಗ್ಲೀಷ್​ ಬರಲ್ಲ ಎಂದು ಚಾಟ್​ ಮಾಡಿದ್ದು ಇದೀಗ ವೈರಲ್​ ಆಗಿದೆ. ಸೂರ್ಯ ನಾರಾಯಣ್ ಎಂಬುವವರ ಜೊತೆ ಟ್ವಿಟರ್​ನಲ್ಲಿ ಸಂಭಾಷಣೆ ನಡೆಸಿದ್ದ ಮಂಜ್ರೇಕರ್,​ಜಡೇಜಾಗೆ ಇಂಗ್ಲಿಷ್ ಮಾತನಾಡುವುದಿಲ್ಲ ಹಾಗೂ ಏನು ಹೇಳುತ್ತಾರೆಂದು ಸಹ ಅರ್ಥವಾಗುವುದಿಲ್ಲ. ಆದ್ದರಿಂದ ಬಿಟ್ಸ್ ಹಾಗೂ ಪೀಸಸ್​ ಎಂಬುದರ ನಿಜವಾದ ಅರ್ಥ ತಿಳಿದಿರಲಿಲ್ಲ. ಖಂಡಿತವಾಗಿಯೂ ಯಾರಾದರೂ ಜಡೇಜಾಗೆ ಮೌಖಿಕವಾಗಿ ತಿಳಿಸಿ ಎಂದು ಮೆಸೇಜ್​ ಮಾಡಿದ್ರು. ಆ ಚಾಟ್​ ಇದೀಗ ಬಹಿರಂಗವಾಗಿದೆ.

ವಿಂಡೀಸ್​​ ಕ್ರಿಕೆಟರ್​​ ಪೊಲಾರ್ಡ್​ಗೆ ಮೆದುಳೇ ಇಲ್ಲ​..!
ಭಾರತೀಯ ಕ್ರಿಕೆಟಿಗರು ಮಾತ್ರವಲ್ಲ..! ವಿದೇಶಿ ಕ್ರಿಕೆಟಿಗರ ಬಗ್ಗೆಯೂ ಮಂಜ್ರೇಕರ್​​ ವಿವಾದಾತ್ಮ ಹೇಳಿಕೆಗಳನ್ನ ನೀಡಿದ್ದಾರೆ. ವೆಸ್ಟ್​ ಇಂಡೀಸ್​ ಟಿ20 ತಂಡದ ನಾಯಕ​, ಮುಂಬೈ ಇಂಡಿಯನ್ಸ್​ ತಂಡದ ಸ್ಟಾರ್​ ಪ್ಲೇಯರ್​​ ಕಿರನ್​ ಪೊಲಾರ್ಡ್​ಗೆ ಮೆದುಳೇ ಇಲ್ಲ ಎಂದು ಮಂಜ್ರೇಕರ್​ ಹೇಳಿದ್ರು. 2017ನೇ ಆವೃತ್ತಿಯ ಐಪಿಎಲ್​ ಟೂರ್ನಿಯ ಪಂದ್ಯವೊಂದರಲ್ಲಿ ಬ್ಯಾಟಿಂಗ್​ ಆರ್ಡರ್​ನಲ್ಲಿ ಬಡ್ತಿ ಪಡೆದು ಪೊಲಾರ್ಡ್​ ಕಣಕ್ಕಿಳಿದಿದ್ರು. ಅಂದು ಕಾಮೆಂಟರ್​ ಆಗಿದ್ದ ಮಂಜ್ರೇಕರ್​​, ಪೊಲಾರ್ಡ್​ಗೆ ಮೆದುಳೇ ಇಲ್ಲ. ಇದು ಅನಗತ್ಯ ನಿರ್ಧಾರ ಎಂದು ಹೇಳಿದ್ರು. ಅದೇ ಪಂದ್ಯದಲ್ಲಿ ವಿಂಡೀಸ್​ ದೈತ್ಯ ಘರ್ಜಿಸಿದ್ರು, ಆಗ ವರಸೆ ಬದಲಿಸಿದ್ದ ಮಂಜ್ರೇಕರ್​, ಬ್ಯಾಟಿಂಗ್​ ಬಡ್ತಿ ನೀಡಿದ್ದು ಫ್ರಾಂಚೈಸಿ ತೆಗೆದುಕೊಂಡ ಉತ್ತಮ ನಿರ್ಧಾರ ಎಂದಿದ್ರು.

ಕೊಹ್ಲಿ ಟೆಸ್ಟ್​​ ಕ್ರಿಕೆಟ್​ಗೆ ಸೂಕ್ತ ಆಟಗಾರನಲ್ಲ​..!
ನಾಯಕ ವಿರಾಟ್​ ಕೊಹ್ಲಿ ಮೂರು ಮಾದರಿಯಲ್ಲಿ ಟೀಮ್​ಇಂಡಿಯಾದ ಬ್ಯಾಟಿಂಗ್​ ಪಿಲ್ಲರ್​..! ವಿಶ್ವ ಕ್ರಿಕೆಟ್​ ಲೋಕವೇ ಕೊಹ್ಲಿ ದಿಗ್ಗಜ ಬ್ಯಾಟ್ಸ್​ಮನಬ್​ ಅನ್ನೋದನ್ನ ಒಪ್ಪಿಕೊಂಡಿದೆ. ಆದ್ರೆ 2011-12ರ ಸಮಯದಲ್ಲಿ ವೈಫಲ್ಯ ಕಂಡಿದ್ದ ಕೊಹ್ಲಿಯನ್ನ, ಈತ ಟೆಸ್ಟ್​ ಕ್ರಿಕಟ್​ಗೆ ಸೂಕ್ತ ಆಟಗಾರನಲ್ಲ ಎಂದು ತಿಳಿದುಕೊಳ್ಳಲು, ಈತನಿಗೆ ಇನ್ನೊಂದು ಅವಕಾಶ ನೀಡಿ ಎಂದು ಮಂಜ್ರೇಕರ್ ಹೇಳಿಕೆ ನೀಡಿದ್ರು. ಮಂಜ್ರೇಕರ್​ ಈ ಹೇಳಿಕೆ ನೀಡಿದ ನಂತರದ ಪರ್ತ್​ ಟೆಸ್ಟ್​ನಲ್ಲಿ 75 ರನ್​ ಸಿಡಿಸಿದ್ದ ಕೊಹ್ಲಿ, ಆ ಬಳಿಕ ಅಡಿಲೇಡ್​ನಲ್ಲಿ ಶತಕ ಸಿಡಿಸಿ ತಿರುಗೇಟು ನೀಡಿದ್ರು.

ಹಾರ್ದಿಕ್ ಪಾಂಡ್ಯ ಸ್ಪೆಷಲಿಸ್ಟ್​​ ಬ್ಯಾಟ್ಸ್​ಮನ್​ ಅಲ್ಲ..!
ಸೀಮಿತ ಓವರ್​ಗಳ ತಂಡದಲ್ಲಿ ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾದ ಖಾಯಂ ಸದಸ್ಯ. ಲೋಯರ್​ ಆರ್ಡರ್​​ನಲ್ಲಿ ಮ್ಯಾಚ್​ವಿನ್ನಿಂಗ್​​ ಫರ್ಪಾಮೆನ್ಸ್ ನೀಡಬಲ್ಲ ಪಾಂಡ್ಯ, ಸಧ್ಯ ಫಿನಿಷರ್​​ ರೋಲ್​ ಪ್ಲೆ ಮಾಡ್ತಿದ್ದಾರೆ. ಆದ್ರೆ, ಪಾಂಡ್ಯ ಬಗ್ಗೆ ಕಳೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಮಾತನಾಡಿದ್ದ ಮಂಜ್ರೇಕರ್​​, ಸೀಮಿತ ಓವರ್​​ಗಳ ತಂಡದಲ್ಲಿ ಪಾಂಡ್ಯ ಒಬ್ಬ ಸ್ಪೆಷಲಿಸ್ಟ್​ ಪ್ಲೇಯರ್​​ ಅಲ್ಲವೆ ಅಲ್ಲ ಎಂದಿದ್ರು. ಆದ್ರೆ, ಅದೇ ಪ್ರವಾಸದ ಸಿಡ್ನಿ ಏಕದಿನ ಪಂದ್ಯದಲ್ಲಿ 90 ರನ್​ ಸಿಡಿಸಿದ್ದ ಪಾಂಡ್ಯ, ಕ್ಯಾನ್​ಬೆರಾದಲ್ಲಿ ನಡೆದ ಟಿ20 ಪಂದ್ಯದಲ್ಲಿ 22 ಎಸೆತಗಳಲ್ಲಿ 42 ರನ್​ ಸಿಡಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು.

ಕೇವಲ ಆಟಗಾರರು ಮಾತ್ರವಲ್ಲ..! ಸಹ ಕಾಮೆಂಟೇಟರ್​​ ಹರ್ಷ ಬೋಗ್ಲೆಯೊಂದಿಗೂ ಮಂಜ್ರೇಕರ್​​ ವಾಗ್ವಾದ ನಡೆಸಿದ್ರು. ಪರಿಣಾಮ ಕಳೆದ ಬಾಂಗ್ಲಾದೇಶ ತಂಡದ ಭಾರತದ ಪ್ರವಾಸದ ಕಾಮೆಂಟರಿ ಪ್ಯಾನಲ್​ನಿಂದ ಗೇಟ್​ ಪಾಸ್​ ಪಡೆದುಕೊಂಡಿದ್ರು. ನಿಷೇಧ ಅನುಭವಿಸಿ ಮತ್ತೇ ಕಾಮೆಂಟರಿ ಫ್ಯಾನಲ್​ಗೆ ವಾಪಾಸ್ಸಾದ್ರೂ, ಮಂಜ್ರೇಕರ್​​ರ ನಾಲಿಗೆ ಹರಿಬಿಡುವ ​ ಚಾಳಿ ಮಾತ್ರ ಇನ್ನೂ ನಿಂತಿಲ್ಲ..! ಮುಂದೆಯಾದ್ರೂ ಮಂಜ್ರೇಕರ್​​ ಎಚ್ಚೆತ್ತುಕೊಳ್ತಾರಾ ಕಾದುನೋಡಬೇಕಿದೆ.

The post ಟೆಸ್ಟ್ ಕ್ರಿಕೆಟ್​​ಗೆ ಕೊಹ್ಲಿ ಲಾಯಕ್ ಅಲ್ಲ.. ಪೊಲಾರ್ಡ್​​ಗೆ ಮೆದುಳಿಲ್ಲ ಅಂದಿದ್ದೇಕೆ ಮಾಂಜ್ರೆಕರ್..? appeared first on News First Kannada.

Source: newsfirstlive.com

Source link