ಮುಂಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ ಒನ್ ತಂಡವಾಗಿ ಹೊರಹೊಮ್ಮಿದೆ. ಅಲ್ಲದೇ ನ್ಯೂಜಿಲೆಂಡ್ನಿಂದ ಅಗ್ರ ಸ್ಥಾನವನ್ನು ಕಸಿದುಕೊಂಡಿದೆ.
2ನೇ ಟೆಸ್ಟ್ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ 372 ರನ್ ಗೆಲುವು ಸಾಧಿಸಿತ್ತು. ಇದರ ಮುಖೇನ ಭಾರತ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದಿದೆ. ಈಗ ಟೀಮ್ ಇಂಡಿಯಾ ಟೆಸ್ಟ್ ಱಂಕಿಂಗ್ನಲ್ಲಿ ಅಗ್ರ ಸ್ಥಾನಕ್ಕೇರಿದೆ.
ಜೂನ್ 2021ರಲ್ಲಿ ಕಿವೀಸ್ ಮೊದಲ ಸ್ಥಾನದಲ್ಲಿತ್ತು. 126 ರೇಟಿಂಗ್ನೊಂದಿಗೆ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದ್ದಾಗ ಭಾರತ 119 ರೇಟಿಂಗ್ ಪಾಯಿಂಟ್ ಜತೆಗೆ ಎರಡನೇ ಸ್ಥಾನದಲ್ಲಿತ್ತು. ಈಗ 124 ರೇಟಿಂಗ್ ನೊಂದಿಗೆ ಭಾರತ ಅಗ್ರಸ್ಥಾನಕ್ಕೆರಿದೆ. ನ್ಯೂಜಿಲೆಂಡ್ 121 ರೇಟಿಂಗ್ ನೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ.