ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್ ಪಂದ್ಯ ಹತ್ತಿರವಾಗ್ತಿದೆ. ಈಗ ಎಲ್ಲರ ಚಿತ್ತ ಜೂನ್​ 18ರಂದ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನತ್ತ​ ನೆಟ್ಟಿದೆ. ಟೆಸ್ಟ್​ ಚಾಂಪಿಯನ್​ಶಿಪ್​​​ ಫೈನಲ್​​ ಪಂದ್ಯವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಉಭಯ ತಂಡಗಳು, ಚೊಚ್ಚಲ ಟೆಸ್ಟ್​ ಚಾಂಪಿಯನ್ ಆಗಿ ಮೆರೆಯಲು ಭಾರೀ ಕಸರತ್ತನ್ನೇ ನಡೆಸ್ತಿವೆ. ಅದ್ರಲ್ಲೂ ಘಟಾನುಘಟಿ ಆಟಗಾರರ ಮುಖಾಮುಖಿಯಿಂದ ಮತ್ತಷ್ಟು ಕಾವು ಪಡೆದುಕೊಂಡಿರುವ ಈ ಪಂದ್ಯ, ಅಭಿಮಾನಿಗಳ ನಿರೀಕ್ಷೆ ಡಬಲ್ ಮಾಡಿದೆ.

ಆದ್ರೆ, ಮತ್ತೊಂದೆಡೆ ಇಂಗ್ಲೆಂಡ್​​ನ ಬೌನ್ಸಿ ಟ್ರ್ಯಾಕ್, ಹವಾಮಾನ, ಅನುಭವ, ಡ್ಯೂಕ್ ಬಾಲ್, ಇನ್ನಿತರೆ ಆಯಾಮದಲ್ಲಿ ಪಂದ್ಯದಲ್ಲಿ ಕಿವೀಸ್ ಮೇಲುಗೈ ಸಾಧಿಸುತ್ತೇ ಎನ್ನಲಾಗ್ತಿದೆ. ಅಷ್ಟೇ ಅಲ್ಲ..! ಸೌತಾಂಪ್ಟನ್​​ನಲ್ಲಿ ಟೀಮ್ ಇಂಡಿಯಾ ಗೆಲುವು ಅಷ್ಟು ಸುಲಭವಾಗಿಲ್ಲ ಎಂಬ ಹೇಳಿಕೆಗಳು, ನ್ಯೂಜಿಲೆಂಡ್ ವಿರುದ್ಧದ ಅಂಕಿಅಂಶಗಳೂ, ಒಂದೆಡೆ ವಿರಾಟ್​ ಪಡೆಯನ್ನ ಚಿಂತೆಗೆ ದೂಡುವಂತೆ ಮಾಡಿದ್ರು. ಈ ನಡುವೆ ಟೀಮ್ ಇಂಡಿಯಾಕ್ಕೊಂದು ಗುಡ್​ನ್ಯೂಸ್ ಸಿಕ್ಕಿದೆ. ಅದು ಕೂಡ ಕೇನ್​ ವಿಲಿಯಮ್ಸನ್ ರೂಪದಲ್ಲಿ ಅನ್ನೋದು ಇಂಟ್ರೆಸ್ಟಿಂಗ್..!

ಕಿವೀಸ್​ನ ರನ್​​ ಮಷಿನ್ ಕೇನ್ ವಿಲಿಯಮ್ಸನ್..!
ಸದ್ಯ ಮಾಡ್ರನ್ ಕ್ರಿಕೆಟ್​ನ ಶ್ರೇಷ್ಠ ಬ್ಯಾಟ್ಸ್​ಮನ್ ಕೇನ್​ ವಿಲಿಯಮ್ಸನ್, ಕಿವೀಸ್​​ನ ಸೂಪರ್ ಸ್ಟಾರ್ ಬ್ಯಾಟ್ಸ್​ಮನ್​. ತನ್ನ ಶಾಂತಸ್ವಭಾವದ ಮನಸ್ಥಿತಿಯಿಂಲೇ ಟೆಸ್ಟ್​ ಕ್ರಿಕೆಟ್​ನ ನಂ.1 ಬ್ಯಾಟ್ಸ್​ಮನ್​​ ಆಗಿ ಮರೆಯುತ್ತಿದ್ದಾರೆ. ಯಾವುದೇ ಪಿಚ್​ನಲ್ಲಿ ಸರಾಗವಾಗಿ ರನ್ ಗಳಿಸೋ ಕೇನ್, ನ್ಯೂಜಿಲೆಂಡ್​ನ ರನ್​​ ಮಷಿನ್.! ಇತ್ತಿಚೆಗೆ ವೆಸ್ಟ್​ ಇಂಡೀಸ್ ಹಾಗೂ ಪಾಕ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಸೂಪರ್ ಫಾರ್ಮ್ ಮುಂದುವರಿಸಿದ್ದ ಕೇನ್, ಮೂರು ಪಂದ್ಯಗಳಲ್ಲೇ ಎರಡು ದ್ವಿಶತಕ, ಒಂದು ಶತಕ ಸಿಡಿಸಿ ಟೆಸ್ಟ್​ ಕ್ರಿಕೆಟ್​ ಬಾಸ್​ ಆಗಿದ್ದಾರೆ. ಇದೇ ಫಾರ್ಮ್​ ಟೀಮ್ ಇಂಡಿಯಾಕ್ಕೆ ಇಂಗ್ಲೆಂಡ್​ ನೆಲದಲ್ಲಿ ಸವಾಲ್ ಆಗುತ್ತೆ ಅಂತಾನೇ ಊಹಿಸಲಾಗಿತ್ತು. ಆದ್ರೆ, ಕೆಲ ಅಂಕಿಅಂಶಗಳ ಪ್ರಕಾರ, ಕೇನ್ ಭಾರತಕ್ಕೆ ಸವಾಲೇ ಅಲ್ಲ..!

ಮೊದಲ ಟೆಸ್ಟ್​ನಲ್ಲಿ ಕೇನ್ ವಿಲಿಯಮ್ಸನ್ ವೈಫಲ್ಯ
ಇಂಗ್ಲೆಂಡ್​ನ ವಿರುದ್ಧದ ಮೊದಲ ಟೆಸ್ಟ್​ ಕೇನ್ ವಿಲಿಯಮ್ಸನ್, ಸತತ ವೈಫಲ್ಯ ಅನುಭವಿಸಿದ್ದಾರೆ. ಲಾರ್ಡ್ಸ್​ ಟೆಸ್ಟ್​ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 33 ಎಸೆತ ಎದುರಿಸಿದ್ದ ಕ್ಯಾಪ್ಟನ್ ಕೇನ್, 13 ರನ್​ ಗಳಿಸಿ ಆ್ಯಂಡರ್ಸನ್​​ಗೆ ಕ್ಲೀನ್ ಬೌಲ್ಡ್​ ಆಗಿ ಪೆವಿಲಿಯನ್ ಸೇರಿದ್ರು. ನಂತರದ 2ನೇ ಇನ್ನಿಂಗ್ಸ್​ನಲ್ಲಿ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದೇ ವೈಫಲ್ಯ ಈಗ ಟೀಮ್ ಇಂಡಿಯಾ ಕ್ಯಾಂಪ್​ನಲ್ಲಿ ನಿರಾಳ ಮೂಡಿಸಿದೆ. ಜಸ್ಟ್​ ಈ ಒಂದು ವೈಫಲ್ಯದಿಂದಲೇ ರಿಲೀಫ್ ತಂದಿಲ್ಲ..! ಇದಕ್ಕೆ ಮತ್ತೊಂದು ಕಾರಣವೂ ಇದೆ.

ಫಾರೀನ್ ಟೂರ್​​ಗಳಲ್ಲಿ ಕೇನ್ ನಿರಂತರ ವೈಫಲ್ಯ..!
ವಿದೇಶದಲ್ಲಿ ಶತಕ ಸಿಡಿಸಿ ಆಯ್ತು 4 ವರ್ಷ 10 ತಿಂಗಳು..!
ಇಂಗ್ಲೆಂಡ್ ಸರಣಿಗೂ ಮುನ್ನ ಸ್ವದೇಶದ ಟೆಸ್ಟ್​ ಸರಣಿಯಲ್ಲಿ ಮಿಂಚಿದ್ದ ಕೇನ್ ವಿಲಿಯಮ್ಸನ್, ಸದ್ಯ ನಡೀತಿರುವ ಇಂಗ್ಲೆಂಡ್​ ವಿರುದ್ಧದ ಒಂದೇ ಒಂದು ಪಂದ್ಯದಲ್ಲಿ ಮಾತ್ರವೇ ವೈಫಲ್ಯ ಅನುಭವಿಸಿಲ್ಲ. ಕೊನೆಯ 12 ಇನ್ನಿಂಗ್ಸ್​ಗಳಿಂದ ಅರ್ಧಶತಕ ಸಿಡಿಸೋಕು ಕೇನ್ ವಿಲಿಯಮ್ಸನ್​​ರಿಂದ ಸಾಧ್ಯವಾಗುಲ್ಲ.. ಅಷ್ಟೇ ಯಾಕೆ..! 2016 ಆಗಸ್ಟ್​ 6ರಂದು ಜಿಂಬಾಬ್ವೆ ನೆಲದಲ್ಲಿ ಶತಕ ಸಿಡಿಸಿದ್ದು ಬಿಟ್ಟರೇ ಇದುವರೆಗೆ ಒಂದೇ ಒಂದು ಶತಕ ವಿದೇಶಿ ನೆಲದಲ್ಲಿ ಬಂದಿಲ್ಲ. ಕೇನ್ ವಿದೇಶದಲ್ಲಿ ಶತಕ ಸಿಡಿಸಿ 4 ವರ್ಷ 10 ತಿಂಗಳೇ ಕಳೆದಿದೆ ಅಂದ್ರೆ, ನೀವು ನಂಬಲೇಬೇಕು..!

2016ರ ಬಳಿಕ ವಿದೇಶದಲ್ಲಿ ಕೇನ್
ಪಂದ್ಯ               9
ರನ್               314
ಬೆಸ್ಟ್​               77
ಸರಾಸರಿ        20.93

ನೋಡಿದ್ರಲ್ಲ ವಿದೇಶದಲ್ಲಿ ಕಳೆದೈದು ವರ್ಷಗಳಿಂದ ಕೇನ್ ವಿಲಿಯಮ್ಸನ್ ಬ್ಯಾಟಿಂಗ್, ವೈಭವ ಹೇಗಿದೆ ಅನ್ನೋದನ್ನ.. ಆದ್ರೆ, ವಿದೇಶದಲ್ಲಿ ರನ್​​ಗಳಿಕೆಗೆ ಪರದಾಟ ನಡೆಸಿರೊ ಕೇನ್, ಸ್ವದೇಶದಲ್ಲಿ ಅಬ್ಬರಿಸುತ್ತಿದ್ದಾರೆ. ಶತಕದ ಮೇಲೆ ಶತಕ ಸಿಡಿಸಿದ್ದಾರೆ. ಈಗ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಇಂಗ್ಲೆಂಡ್​​ನಲ್ಲಿ ನಡೀತಿರೊದ್ರಿಂದ, ವಿದೇಶದಲ್ಲಿನ ಕೇನ್​ ಬ್ಯಾಟಿಂಗ್​ ವೈಫಲ್ಯ ಟೀಮ್ ಇಂಡಿಯಾ ಪಾಳಯಕ್ಕೆ ಗುಡ್​ನ್ಯೂಸ್​ ಆಗಿದೆ. ಕೇವಲ ಅಂಕಿ ಅಂಶಗಳಿಂದಲೇ ಕೇನ್ ವಿಲಿಯಮ್ಸನ್​​ರನ್ನ ಅಳೆದು ಮೈಮರೆತರೆ ಟೀಮ್ ಇಂಡಿಯಾಕ್ಕೆ ಅಪಾಯ ತಪ್ಪಿದ್ದಲ್ಲ..

The post ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಟೀಮ್ ಇಂಡಿಯಾ ಟಾರ್ಗೆಟ್ ವಿಲಿಯಮ್ಸನ್..? appeared first on News First Kannada.

Source: newsfirstlive.com

Source link