ಇಂಡೋ- ನ್ಯೂಜಿಲೆಂಡ್​​​ ಟೆಸ್ಟ್​​ ಚಾಂಪಿಯನ್​​​ಶಿಪ್​ ಹೈವೋಲ್ಟೆಜ್​ ಫೈಟ್​ಗೆ ಕೌಂಟ್​ಡೌನ್​ ಸ್ಟಾರ್ಟ್​​ ಆಗಿದೆ. ಮಹತ್ವದ ಪಂದ್ಯಕ್ಕೆ 5 ದಿನಗಳು ಮಾತ್ರ ಬಾಕಿ..! ದಿನದಿಂದ ದಿನಕ್ಕೆ ಪಂದ್ಯದ ಮೇಲಿನ ಕುತೂಹಲ ಮಾತ್ರವಲ್ಲ, ಭಾರತದ ಪ್ಲೇಯಿಂಗ್​ ಇಲೆವೆನ್​ ಆಯ್ಕೆಯ ಕುರಿತ ಕುತೂಹಲವೂ ಅಭಿಮಾನಿಗಳಲ್ಲಿ ಹೆಚ್ಚಾಗ್ತಿದೆ.

ಫೈನಲ್​ ಪಂದ್ಯಕ್ಕೆ ಮಹೂರ್ತ ನಿಗದಿಯಾದ ದಿನದಿಂದ ಈವರೆಗೆ ವಿಶ್ಲೇಷಣೆಗಳು, ಸಾಧ್ಯಾಸಾಧ್ಯತೆಗಳ ಬಗೆಗಿನ ಚರ್ಚೆಗಳು ಯತೇಚ್ಛವಾಗಿ ಸಾಗಿವೆ. ಇದೀಗ ಪ್ಲೇಯಿಂಗ್​ ಇಲೆವೆನ್​ ಆಯ್ಕೆಯ ಬಗ್ಗೆ ಹಲವು ಏಕ್ಸ್​ಪರ್ಟ್​​ಗಳು, ಮಾಜಿ ಆಟಗಾರರು ತಮ್ಮ ತಮ್ಮ ಅಭಿಪ್ರಾಯವನ್ನ ಮಂಡಿಸಿದ್ದಾರೆ. ಆಶ್ಚರ್ಯಕರ ರೀತಿಯಲ್ಲಿ ಪ್ರಮುಖ ಆಟಗಾರರೇ ಬೆಂಚ್​ ಕಾಯ್ತಾರೆ ಅನ್ನೋ ಮಾತುಗಳನ್ನಾಡಿದ್ದಾರೆ.

ಅನುಭವಿ ಇಶಾಂತ್​ಗಿಲ್ಲ ಪ್ಲೇಯಿಂಗ್​ ಇಲೆವೆನ್​ ಸ್ಥಾನ..?
ವೇಗಿ ಇಶಾಂತ್​ ಶರ್ಮಾ, ಸಧ್ಯ ಇಂಗ್ಲೆಂಡ್​ ಪ್ರವಾಸದಲ್ಲಿರೋ ಆಟಗಾರರ ಪೈಕಿ ಮೋಸ್ಟ್​ ಏಕ್ಸಿಪೀರಿಯನ್ಸ್​​ ಪ್ಲೇಯರ್​​..! ಮೂರು ಬಾರಿ ಇಂಗ್ಲೆಂಡ್​​ ಪ್ರವಾಸ ಕೈಗೊಂಡ ಅನುಭವ ಇಶಾಂತ್​ಗಿದೆ. ಅದಲ್ಲದೇ ಸೌತ್​ಹ್ಯಾಂಪ್ಟನ್​​ ಫೈಟ್​​ನಲ್ಲಿ ಮೂವರು ವೇಗಿಗಳ ಬಲದೊಂದಿಗೆ ಕಣಕ್ಕಿಳಿಯಲು ಮ್ಯಾನೇಜ್​ಮೆಂಟ್​ ನಿರ್ಧರಿಸಿರೋದ್ರಿಂದ ಡೆಲ್ಲಿ ವೇಗಿಗೆ ಸ್ಥಾನ ಫಿಕ್ಸ್​ ಎಂದೇ ಹೇಳಲಾಗಿತ್ತು. ಆದ್ರೆ, ಅನುಭವಿ ಇಶಾಂತ್​ ಸ್ಥಾನಕ್ಕೆ ಯಂಗ್​ ಸಿರಾಜ್​ ಟಕ್ಕರ್​ ನೀಡ್ತಿದ್ದಾರೆ. ಫಿಟ್​ನೆಸ್​ ಹಾಗೂ ಲಾಂಗ್​ಸ್ಪೆಲ್​ಗಳ ಮಾಡಬೇಕಿರೋದ್ರಿಂದ ಸಿರಾಜ್​ಗೆ ಸ್ಥಾನ ಸಿಗೋ ಸಾಧ್ಯತೆ ಇದೆ ಅನ್ನೋದು ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ರ ಅಭಿಪ್ರಾಯವಾಗಿದೆ.

ಟೆಸ್ಟ್​​ ಸ್ಪೆಷಲಿಸ್ಟ್​ ಹನುಮ ವಿಹಾರಿ ಆಡೋದು ಡೌಟ್​​..!
ಆಸಿಸ್​ ಪ್ರವಾಸದ ಸಿಡ್ನಿ ಟೆಸ್ಟ್​​ನಲ್ಲಿ ಹ್ಯಾಮ್​ಸ್ಟ್ರಿಂಗ್​ ಇಂಜುರಿಯ ನಡುವೆಯೂ ಹೋರಾಟದ ಇನ್ನಿಂಗ್ಸ್​ ಕಟ್ಟಿ ವಿರೋಚಿತ ಡ್ರಾಗೆ ಕಾರಣರಾಗಿದ್ದ, ಹನುಮ ವಿಹಾರಿ ಕೂಡ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಆಡೋದು ಡೌಟ್​..! ಈಗಾಗಲೇ 3 ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್​ ಕಾಂಬಿನೇಷನ್​ನಲ್ಲಿ ಕಣಕ್ಕಿಳಿಯೋ ಬ್ಲೂ ಪ್ರಿಂಟ್​ ಸಿದ್ಧವಾಗಿದೆ. ಇನ್ನು ಮಿಡಲ್​ ಆರ್ಡರ್​ನಲ್ಲಿ ಪೂಜಾರ, ಕೊಹ್ಲಿ, ರಹಾನೆ ಹಾಗೂ ಪಂತ್​ ಆಡೋದು ಕನ್​ಫರ್ಮ್​​​ ಆಗಿರೋದ್ರಿಂದ ವಿಹಾರಿಗೆ ಸ್ಥಾನವಿಲ್ಲ ಎಂದೇ ಹೇಳಲಾಗ್ತಿದೆ.

ಮಯಾಂಕ್ ಅಗರ್​ವಾಲ್​​, ಕೆಎಲ್​ ರಾಹುಲ್​ಗೂ ಇಲ್ಲ ಸ್ಥಾನ..!
ಕನ್ನಡಿಗರಾದ ಮಯಾಂಕ್​ ಅಗರ್​ವಾಲ್​, ಕೆಎಲ್​ ರಾಹುಲ್​ ಬೆಂಚ್​ ಕಾಯೋದೂ ಬಹುತೇಕ ಕನ್​ಫರ್ಮ್​..! ಸಿಕ್ಕ ಅವಕಾಶದಲ್ಲಿ ಅನುಭವಿಸಿರೋ ವೈಫಲ್ಯ ಒಂದೆಡೆಯಾದ್ರೆ, ಸ್ಥಾನಕ್ಕಿರುವ ಫೈಪೋಟಿ ಇನ್ನೊಂದೆಡೆ. ಆರಂಭಿಕರ ಸ್ಥಾನಕ್ಕೇ ರೋಹಿತ್​, ಶುಭ್​ಮನ್​ ಹೆಸರು ಬಹುತೇಕ ಫೈನಲ್​ ಆಗಿದೆ. ಇನ್ನೂ ಮಿಡಲ್​ ಆರ್ಡರ್​ನಲ್ಲಾಡಲು​ ಖಾಯಂ ಪ್ಲೇಯರ್ಸ್​ ಲಭ್ಯರಿದ್ದಾರೆ. ಒಂದು ವೇಳೆ ಯಾವುದಾದರೂ ಆಟಗಾರ ಆಯ್ಕೆಗೆ ಅಲಭ್ಯರಾದ್ರೆ ಮಾತ್ರ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಎನ್ನಲಾಗ್ತಿದೆ.

ಆಲ್​ರೌಂಡರ್​​​ ಅಕ್ಷರ್​ ಪಟೇಲ್​ಗೂ ಬೆಂಚೇ ಗತಿ..!
ತವರಿನಲ್ಲಿ ನಡೆದ ಇಂಗ್ಲೆಂಡ್​​ ಸರಣಿಯಲ್ಲಿ ಡೆಬ್ಯೂ ಮಾಡಿದ ಸ್ಪಿನ್ ಆಲ್​ರೌಂಡರ್​​​ ಕೂಡ ಬಹುತೇಕ ಬೆಂಚ್​​ಗೆ ಸೀಮಿತವಾಗಲಿದ್ದಾರೆ. ಪದಾರ್ಪಣೆ ಮಾಡಿದ ಟೆಸ್ಟ್​​ ಸರಣಿಯಲ್ಲೇ 27 ವಿಕೆಟ್​ ಕಬಳಿಸಿದ ಸಾಧನೆ ಬೆನ್ನಿಗಿದ್ರೂ, ಸ್ಟಾರ್​​ ಆಲ್​ರೌಂಡರ್​​ಗಳ ಲಭ್ಯತೆ ಅಕ್ಷರ್​ ಸ್ಥಾನಕ್ಕೆ ಕುತ್ತು ತಂದಿದೆ. ಬ್ಯಾಟಿಂಗ್​, ಬೌಲಿಂಗ್​ ಎರಡರಲ್ಲೂ ಮ್ಯಾಜಿಕ್​ ಮಾಡಬಲ್ಲ, ಅನುಭವಿಗಳಾದ ಆರ್​.ಅಶ್ವಿನ್​, ರವಿಂದ್ರ ಜಡೇಜಾ ಆಯ್ಕೆಗೆ ಲಭ್ಯರಿದ್ದಾರೆ. ಮ್ಯಾನೇಜ್​ಮೆಂಟ್​ ಕೂಡ ಆ್ಯಷ್​-ಜಡ್ಡು ಕಾಂಬಿನೇಷನ್​ನಲ್ಲೇ ಕಣಕ್ಕಿಳಿಲು ಸಿದ್ಧವಾಗಿದೆ.

ಫೈನಲ್​ ಪಂದ್ಯ ಆಡಲ್ಲ ‘ಅನ್​ಲಕ್ಕಿ’ ಶಾರ್ದೂಲ್​ ಠಾಕೂರ್​​​..!
ಶಾರ್ದೂಲ್​ ಠಾಕೂರ್​​ ಒಬ್ಬ ಅನ್​ಲಕ್ಕಿ ಟೆಸ್ಟ್​ ಕ್ರಿಕೆಟರ್​ ಅಂದ್ರೆ ತಪ್ಪಾಗಲ್ಲ. ಪದಾರ್ಪಣೆ ಮಾಡಿದ ಟೆಸ್ಟ್​ನಲ್ಲೇ ಇಂಜುರಿಗೆ ತುತ್ತಾಗಿ ಪಂದ್ಯದಿಂದ ಹೊರಬಿದ್ದ ಶಾರ್ದೂಲ್​ಗೆ 2ನೇ ಅವಕಾಶ ಸಿಕ್ಕಿದ್ದು 3 ವರ್ಷಗಳ ನಂತರ. ಆಸಿಸ್ ​ಪ್ರವಾಸದಲ್ಲಿ ಸಿಕ್ಕ ಅವಕಾಶವನ್ನ ಎರಡೂ ಕೈಗಳಿಂದ ಶಾರ್ದೂಲ್ ಬಾಚಿದ್ರು. ಗಬಾ ಮೈದಾನದಲ್ಲಿ 7 ವಿಕೆಟ್​ ಕಬಳಿಸಿ, ಲೋಯರ್​ ಆರ್ಡರ್​​​ನಲ್ಲಿ ಬ್ಯಾಟಿಂಗ್​ ಬಂದು 67 ರನ್​ಗಳ ಕಾಣಿಕೆಯನ್ನೂ ನೀಡಿದ್ರು. ಈ ಮಾಸ್ಟರ್​​ ಕ್ಲಾಸ್​​ ಪ್ರದರ್ಶನದ ಹೊರತಾಗಿಯೂ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಆಡೋದು ಅಸಾಧ್ಯವಾಗಿದೆ. ಮೊಹಮದ್​ ಶಮಿ, ಜಸ್​ಪ್ರಿತ್​ ಬೂಮ್ರಾ ಎರಡು ಸ್ಥಾನಕ್ಕೆ ಫಿಕ್ಸ್​ ಆಗಿದ್ರೆ, ಇಶಾಂತ್​, ಸಿರಾಜ್​ ನಡುವೆ ಇನ್ನೊಂದು ಸ್ಥಾನಕ್ಕೆ ಫೈಟ್​ ಏರ್ಪಟ್ಟಿದೆ. ಈ ಪೈಪೋಟಿಯಲ್ಲಿ ಅನ್​ಲಕ್ಕಿ ಶಾರ್ದೂಲ್​ ಕಳೆದು ಹೋಗಿದ್ದಾರೆ.

ಇಷ್ಟೇ ಅಲ್ಲ..! ಅನುಭವಿ ಉಮೇಶ್​ ಯಾದವ್​ಗೂ ಮಹತ್ವದ ಪಂದ್ಯದಲ್ಲಿ ಅವಕಾಶ ಸಿಗೋದು ಅನುಮಾನವಾಗಿದೆ. ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಅವಕಾಶ ಸಿಗಲ್ಲ ಅನ್ನೋದು ಆಟಗಾರರಲ್ಲೂ ಬಹುತೇಕ ಖಚಿತವಾಗಿದೆ. ಆದ್ರೆ, ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಾದ್ರೂ ಚಾನ್ಸ್​​ ಸಿಗಬಹುದೆಂಬ ಆಶಾಭಾವನೆ ಇದೆ.

The post ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್​ XIನಿಂದ ಐವರು ಡ್ರಾಪ್.? appeared first on News First Kannada.

Source: newsfirstlive.com

Source link