ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​​ ಚಾಂಪಿಯನ್ ​ಶಿಪ್​ ಫೈನಲ್​ ಫೈಟ್​ಗೆ ಅಣಿಯಾಗುತ್ತಿರುವ ಟೀಮ್​ ಇಂಡಿಯಾಕ್ಕೆ, ಎದುರಾಳಿ ವಿರುದ್ಧ ತಂತ್ರ-ಪ್ರತಿತಂತ್ರ, ಸ್ಟಾರ್ಟಜಿ ರೂಪಿಸೋದೇ ತಲೆನೋವಾಗಿದೆ. ಇದರ ಜೊತೆಗೆ ಪ್ಲೇಯಿಂಗ್​ ಇಲೆವೆನ್​ ಆಯ್ಕೆಯೂ, ಟೀಮ್ ಮ್ಯಾನೇಜ್​ಮೆಂಟ್​ಗೆ ಮತ್ತಷ್ಟು ತಲೆನೋವು ಹೆಚ್ಚಿಸಿದೆ.

ಮ್ಯಾನೇಜ್​ಮೆಂಟ್​ಗೆ ಪ್ಲೇಯಿಂಗ್​-XI ಆಯ್ಕೆ ಕಗ್ಗಂಟು..!
6 ವೇಗಿಗಳ ಪೈಕಿ, ಬೆಸ್ಟ್​​ ತ್ರೀ ಕಾಂಬಿನೇಷನ್​ ಯಾವುದು..?

ಇಂಗ್ಲೆಂಡ್​ ಪ್ರವಾಸದ ಸುದೀರ್ಘತೆಯನ್ನ ಅರಿತಿರುವ ಸೆಲೆಕ್ಷನ್​ ಕಮಿಟಿ, ಜಂಬೋ ಸ್ವ್ಕಾಡ್​​​ ಅನ್ನ ಆಂಗ್ಲರ ನಾಡಿಗೆ ಕಳುಹಿಸಿದೆ. ಕಳೆದ ಬಾರಿ ಆಸಿಸ್​​ ಪ್ರವಾಸದಲ್ಲಾದಂತೆ ಆಟಗಾರರ ಅಲಭ್ಯತೆಯ ಸಮಸ್ಯೆಯಾಗಬಾರದೆಂಬುದು, ಆಯ್ಕೆ ಸಮಿತಿಯ ಉದ್ದೇಶವಾಗಿತ್ತು. ಆದ್ರೆ ಸೆಲೆಕ್ಷನ್​ ಕಮಿಟಿಯ ಈ ನಿರ್ಧಾರವೇ, ಇಡೀ ಮ್ಯಾನೇಜ್​ಮೆಂಟ್​ ಅನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಅದರಲ್ಲೂ ವೇಗಿಗಳಿಗೆ ಹೆಚ್ಚು ಸಹಾಯಕವಾಗಿರೋ ಸೌತಾಂಪ್ಟನ್​ ಅಂಗಳದಲ್ಲಿ, ಇರೋ 6 ವೇಗಿಗಳ ಪೈಕಿ ಯಾರಿಗೆ ಮಣೆ ಹಾಕೋದು ಅನ್ನೋದು, ಗೊಂದಲ ಮೂಡಿಸಿದೆ.

ಕಿವೀಸ್ ಉಡೀಸ್ ಮಾಡಲು ಕೊಹ್ಲಿ ಬಳಿ ಇದೆ ಅಸ್ತ್ರ

ಸೇನಾ ರಾಷ್ಟ್ರಗಳಲ್ಲಿ ಟೀಮ್​ ಇಂಡಿಯಾ ಯಶಸ್ಸಿನ ಹಿಂದಿರೋದು, ವೇಗಿಗಳು ಅನ್ನೋದನ್ನ ಮರೆಯುವಂತಿಲ್ಲ. ಬ್ಯಾಟ್ಸ್​ಮನ್​ಗಳ ವೈಫಲ್ಯದ ನಡುವೆಯೂ ಬೌಲಿಂಗ್​ನಲ್ಲಿ ಮ್ಯಾಜಿಕ್​ ಮಾಡುತ್ತಾ ಬಂದಿರೋ ವೇಗಿಗಳು, ಗೆಲುವಿನ ಸೂತ್ರಧಾರರ ಪಾತ್ರವನ್ನ ಅಚ್ಚುಕಟ್ಟಾಗೆ ನಿರ್ವಹಿಸುತ್ತಾ ಬಂದಿದ್ದಾರೆ. ಇದೀಗ ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಫೈನಲ್​ ಫೈಟ್​ನಲ್ಲೂ, ವೇಗಿಗಳೇ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಹೀಗಾಗಿಯೇ ಕೋಚ್​ ಶಾಸ್ತ್ರಿ, ಕ್ಯಾಪ್ಟನ್​ ವಿರಾಟ್​​ ಜೋಡಿ, ಪ್ರಮುಖ 3 ವೇಗಿಗಳೊಂದಿಗೆ ಕಣಕ್ಕಿಳಿಯೋಕೆ ಸಜ್ಜಾಗಿದೆ.

ಟೆಸ್ಟ್ ಚಾಂಪಿಯನ್​ಶಿಪ್ ಆಡೋ ತ್ರಿಮೂರ್ತಿಗಳು ಯಾರು..?

ಆದ್ರೆ ಆ ಮೂರು ವೇಗಿಗಳ್ಯಾರೂ ಅನ್ನೋದೇ, ತಲೆನೋವಾಗಿದೆ. ಈಗಾಗಲೇ ಇಂಗ್ಲೆಂಡ್​​ ನೆಲದಲ್ಲಿ ಆಡಿದ ಅನುಭವವಿರುವ ಆಟಗಾರರೇ, ಫಸ್ಟ್​​ ಚಾಯ್ಸ್​ ಎಂದೇ ಹೇಳಲಾಗ್ತಿದೆ. ಆದ್ರೆ ಇವರಿಗೆ ಮೊಹಮ್ಮದ್​ ಸಿರಾಜ್​, ನವದೀಪ್​ ಸೈನಿ, ಶಾರ್ದೂಲ್​ ಠಾಕೂರ್​,​ ಟಫ್​ ಕಾಂಪಿಟೇಶನ್​ ನೀಡ್ತಿದ್ದಾರೆ. ಕಾರಣ, ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್​​-ಗವಾಸ್ಕರ್​​ ಸರಣಿಯಲ್ಲಿ ಇವರು ನೀಡಿದ ಪ್ರದರ್ಶನ ಹಾಗಿತ್ತು.

ಅನುಭವಿ ವೇಗಿಗಳಿಗೆ ಯಂಗ್ ಪೇಸರ್ಸ್ ಕಾಂಪಿಟೇಶನ್..!

ಕಳೆದ ಆಸ್ಟ್ರೇಲಿಯಾ ಸರಣಿಯ ಅರಂಭದಲ್ಲೇ ಇಶಾಂತ್​ ಶರ್ಮಾ ಅಲಭ್ಯರಾದ್ರೆ, ಮೊದಲ ಪಂದ್ಯದಲ್ಲಿ ಹಿಂಜುರಿಗೆ ತುತ್ತಾದ ಮೊಹಮ್ಮದ್​ ಶಮಿ ಕೂಡ, ತಂಡದಿಂದ ಹೊರಗುಳಿದ್ರು. ಆಗ ಅವಕಾಶ ಗಿಟ್ಟಿಸಿಕೊಂಡ ಸಿರಾಜ್​, ಸೈನಿ, ಶಾರ್ದೂಲ್,​ ಕಾಂಗರೂ ನಾಡಲ್ಲೇ ಆಸಿಸ್​ ಬ್ಯಾಟ್ಸ್​ಮನ್​ಗಳನ್ನ ಕಾಡಿದ್ರು. ತವರು ನೆಲದಲ್ಲೇ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳು ಯುವ ಬೌಲರ್​ಗಳ ಕರಾರುವಕ್​ ದಾಳಿ ಎದುರು, ಮಂಕಾದ್ರು.

ಇದೀಗ ಈ ಯುವ ಆಟಗಾರರೊಂದಿಗೆ ಅನುಭವಿಗಳು ಕೂಡ ತಂಡದಲ್ಲಿದ್ದಾರೆ. ಇದೇ ಮ್ಯಾನೇಜ್​ಮೆಂಟ್​ಗೆ ದೊಡ್ಡ ತಲೆನೋವಾಗಿದೆ. ಈಗಾಗಲೇ ಈ ಬಗ್ಗೆ ಮಾತನಾಡಿರುವ ಹಲ ದಿಗ್ಗಜರು, ಬೂಮ್ರಾ, ಶಮಿ, ಇಶಾಂತ್​ ಕಾಂಬಿನೇಷನ್​ನಲ್ಲಿ ಕಣಕ್ಕಿಳಿಯೋದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗೆಂದ ಮಾತ್ರಕ್ಕೆ, ಈ ಯುವ ಆಟಗಾರರನ್ನ ಕಡೆಗಣಿಸೋದು ಅಸಾಧ್ಯ.

ಒಟ್ನಲ್ಲಿ.. ಇರುವ 6 ಅಸ್ತ್ರಗಳಲ್ಲಿ ಕೊಹ್ಲಿ-ಶಾಸ್ತ್ರಿ ಜೋಡಿ, ಯಾವ 3 ಅಸ್ತ್ರಗಳನ್ನ ರಣಾಂಗಣದಲ್ಲಿ ಪ್ರಯೋಗಿಸುತ್ತೇ ಅನ್ನೋ ಕುತೂಹಲಭರಿತ ಪ್ರಶ್ನೆಯಂತೂ, ಅಭಿಮಾನಿಗಳಲ್ಲಿ ಮೂಡಿದೆ. ಇದರ ಉತ್ತರಕ್ಕಾಗಿ ಜೂನ್​ 18ರವರೆಗೆ ಕಾಯಲೇಬೇಕಿದೆ.

The post ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಆಡೋ ತ್ರಿವಳಿ ವೇಗಿಗಳು ಯಾರು..? appeared first on News First Kannada.

Source: newsfirstlive.com

Source link