ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ..?

ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ..?

ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಠ ಕಲಿತಿರುವ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​​​ ಇಂಗ್ಲೆಂಡ್​ ಪ್ರವಾಸಕ್ಕೆ ಜಂಬೋ ತಂಡವನ್ನೇ ಕಳುಹಿಸಿದೆ. ಇದು ಆಯ್ಕೆ ಸಮಿತಿ, ಬಿಸಿಸಿಐ ಪಾಲಿಗೆ ರಿಲೀಫ್​​​ ನೀಡಿದ್ರೆ, ಟೀಮ್​ ಮ್ಯಾನೇಜ್​ಮೆಂಟ್​ಗೆ ತಲೆನೋವಾಗಿತ್ತು. ಇರೋ 20 ಜನರಲ್ಲಿ ಯಾವ 11 ಆಟಗಾರರನ್ನ ಆಡಿಸೋದು ಅನ್ನೋದು ಗೊಂದಲವಾಗಿತ್ತು. ಇದೀಗ ಈ ಗೊಂದಲವನ್ನ ಮ್ಯಾನೇಜ್​ಮೆಂಟ್​​​ ಅರ್ಧದಷ್ಟು, ಕಡಿಮೆ ಮಾಡಿಕೊಂಡಿದೆ.

ಆಯ್ಕೆ ತಲೆಭಾರ ಕಡಿಮೆ ಮಾಡಿಕೊಂಡ ಮ್ಯಾನೇಜ್​ಮೆಂಟ್​​..!
ಫೈನಲ್​ ಫೈಟ್​ಗೆ 15 ಆಟಗಾರರ ತಂಡ ಪ್ರಕಟ..!

ಇಂಗ್ಲೆಂಡ್​​ನಲ್ಲಿ​ ಕ್ವಾರಂಟೀನ್​ನಿಂದ ವಿನಾಯಿತಿ ಸಿಕ್ಕ ಬೆನ್ನಲ್ಲೇ, ಅಭ್ಯಾಸ ಕಣಕ್ಕಿಳಿದಿದ್ದ ಟೀಮ್ಇಂಡಿಯಾ ಆಟಗಾರರು, 4 ದಿನಗಳ ಇನ್​​ಟ್ರಾ ಸ್ಕ್ವಾಡ್​ ಪಂದ್ಯವನ್ನೂ ಆಡಿ ಫೈನಲ್​ ಫೈಟ್​ಗೆ ಅಣಿಯಾಗಿದ್ದಾರೆ. ಆಟಗಾರರ ಪಾಲಿನ ಅಭ್ಯಾಸ ಪಂದ್ಯವನ್ನೇ, ಸೆಲೆಕ್ಷನ್​ ಮಾನದಂಡವಾಗಿಸಿದ್ದ ಮ್ಯಾನೇಜ್​ಮೆಂಟ್​​ ಆಯ್ಕೆ ಕಗ್ಗಂಟನ್ನ ಅರ್ಧದಷ್ಟು ಕಡಿಮೆ ಮಾಡಿಕೊಂಡಿದೆ. ಅಭ್ಯಾಸ ಪಂದ್ಯದಲ್ಲಿ ಆಟಗಾರರು ನೀಡಿದ ಪ್ರದರ್ಶನವನ್ನೇ ಆಧಾರವಾಗಿಟ್ಟುಕೊಂಡು ಮ್ಯಾನೇಜ್​ಮೆಂಟ್​, 20 ಜನರಿದ್ದ ಜಂಬೋ ತಂಡವನ್ನ 15 ಆಟಗಾರರ ಮಿನಿ ತಂಡವನ್ನಾಗಿಸಿದೆ.

15 ಜನರ ತಂಡದಿಂದ ಕನ್ನಡಿಗರಿಗೆ ಕೊಕ್​..!
ಕೆಎಲ್​ ರಾಹುಲ್​, ಮಯಾಂಕ್​ಗೆ ಗೇಟ್​ಪಾಸ್​..!
VO: ಯೆಸ್​​..! 20 ಆಟಗಾರರಿದ್ದ ತಂಡವನ್ನ 15ಕ್ಕೆ ಇಳಿಸಿರುವ ಮ್ಯಾನೇಜ್​ಮೆಂಟ್​​ ಕನ್ನಡಿಗರಿಗೆ ಕೊಕ್​ ನೀಡಿದೆ. ಕೆಎಲ್​ ರಾಹುಲ್​, ಮಯಾಂಕ್​ ಅಗರ್​ವಾಲ್​ಗೆ ಮ್ಯಾನೇಜ್​ಮೆಂಟ್​​ ತಂಡದಿಂದ ಗೇಟ್​ಪಾಸ್​ ನೀಡಿದೆ. ಜೊತೆಗೆ ಆಲ್​ರೌಂಡರ್​ಗಳಾದ​ ವಾಷಿಂಗ್ಟನ್​ ಸುಂದರ್​, ಅಕ್ಷರ್​ ಪಟೇಲ್​ ಹಾಗೂ ವೇಗಿ ಶಾರ್ದೂಲ್​ ಠಾಕೂರ್​ಗೂ ಸ್ಥಾನ ನೀಡಿಲ್ಲ.

ಫೈನಲ್​ ಫೈಟ್​ಗೆ 15 ಜನರ ಟೀಮ್​​ಇಂಡಿಯಾ
ರೋಹಿತ್​                          ಗಿಲ್​                              ಪೂಜಾರ                        ಕೊಹ್ಲಿ
ರಹಾನೆ                            ವಿಹಾರಿ                              ಪಂತ್​                          ಸಾಹ
ಅಶ್ವಿನ್​                            ಜಡೇಜಾ                           ಬೂಮ್ರಾ                       ಇಶಾಂತ್​
ಶಮಿ                               ಉಮೇಶ್​                         ಸಿರಾಜ್​

ಆರಂಭಿಕರ ಸ್ಥಾನದಲ್ಲಿ ರೋಹಿತ್​ ಶರ್ಮಾ, ಶುಭ್​ಮನ್​ಗಿಲ್​ಗೆ ಅವಕಾಶ ಕಲ್ಪಿಸಿರುವ ಮ್ಯಾನೇಜ್​ಮೆಂಟ್​​ ಮಿಡಲ್​ ಆರ್ಡರ್​ನಲ್ಲಿ ಪೂಜಾರ, ಕೊಹ್ಲಿ, ರಹಾನೆ, ವಿಹಾರಿಗೆ ಮಣೆ ಹಾಕಿದೆ. ವಿಕೆಟ್​ ಕೀಪರ್​ ಕೋಟಾದಲ್ಲಿ ರಿಷಭ್​ ಪಂತ್​, ವೃದ್ಧಿಮಾನ್​ ಸಹಾ ಆಯ್ಕೆಯಾಗಿದ್ರೆ, ಅಶ್ವಿನ್​, ಜಡೇಜಾ ಆಲ್​ರೌಂಡರ್​​ಗಳಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ವೇಗದ ವಿಭಾಗದಲ್ಲಿ ಜಸ್​ಪ್ರಿತ್​ ಬೂಮ್ರಾ, ಇಶಾಂತ್​ ಶರ್ಮಾ, ಮೊಹಮದ್​ ಶಮಿ, ಉಮೇಶ್ ಯಾದವ್​ ಹಾಗೂ ಮೊಹಮದ್​ ಸಿರಾಜ್​ರನ್ನ ಆಯ್ಕೆ ಮಾಡಿಕೊಳ್ಳಲಾಗಿದೆ.

ಟೀಮ್​ ಮ್ಯಾನೇಜ್​ಮೆಂಟ್​ ತಂಡವನ್ನ ಸೆಲೆಕ್ಷನ್​ ಮಾಡಿದ ಬೆನ್ನಲ್ಲೇ, ಹಲವು ಚರ್ಚೆಗಳು ನಡೆದಿದ್ದು ಬ್ಯಾಲೆನ್ಸ್​​​ಡ್​​ ತಂಡ ಎಂದೇ ಹೇಳಲಾಗ್ತಿದೆ. ಅದರಲ್ಲೂ ಬ್ಯಾಟಿಂಗ್​ ವಿಭಾಗ ಬಲಿಷ್ಠವಾಗಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗ್ತಿವೆ. ಜೊತೆಗೆ ಟೆಸ್ಟ್​ ಸ್ಪೆಷಲಿಸ್ಟ್​​ ಹನುಮ ವಿಹಾರಿಗೆ ಹಾಗೂ ವೃದ್ಧಿಮಾನ್​ ಸಹಾಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಸಿಗುತ್ತಾ ಎಂಬ ಬಗ್ಗೆ ಹೆಚ್ಚು ಚರ್ಚೆಗಳಾಗ್ತಾ ಇವೆ.

ಬ್ಯಾಟಿಂಗ್​ ವಿಭಾಗದ ಆಯ್ಕೆಯನ್ನ ಸರಳವಾಗಿಸಿಕೊಂಡಿರುವ ಮ್ಯಾನೇಜ್​ಮೆಂಟ್​ಗೆ ಬೌಲಿಂಗ್​ ವಿಭಾಗ ಬಿಸಿತುಪ್ಪವಾಗಿಯೇ ಇದೆ. ಅದರಲ್ಲೂ ವೇಗಿಗಳ ಕೋಟಾದಲ್ಲಿ ಯಾರಿಗೆ ಅವಕಾಶ ನೀಡೋದು ಅನ್ನೋ ವಿಚಾರದಲ್ಲಿ ಮ್ಯಾನೇಜ್​ಮೆಂಟ್​ ಸ್ಪಷ್ಟತೆ ಇಲ್ಲದಿರೋದು ಗೋಚರಿಸಿದೆ. 5 ವೇಗಿಗಳನ್ನ 15ರ ಬಳಗದಲ್ಲಿ ಹೆಸರಿಸಿರುವ ಮ್ಯಾನೇಜ್​ಮೆಂಟ್​ ಅಂತಿಮವಾಗಿ ಯಾವ ಮೂರು ಸ್ಪೀಡ್​ಸ್ಟರ್​​ಗೆ ಮಣೆ ಹಾಕುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ಬ್ಯಾಟಿಂಗ್​, ಬೌಲಿಂಗ್​ ವಿಭಾಗದ ಗೊಂದಲ ಹೊರತುಪಡಿಸಿದ್ರೆ, ಮ್ಯಾನೇಜ್​ಮೆಂಟ್​ ಆಲ್​ರೌಂಡರ್​ ಕೋಟಾದಲ್ಲಿ ಕಟ್​ ಆ್ಯಂಡ್​ ಕ್ಲೀಯರ್​ ಆಗಿದೆ. ರವಿಚಂದ್ರನ್​ ಅಶ್ವಿನ್​, ರವೀಂದ್ರ ಜಡೇಜಾ ಇಬ್ಬರನ್ನೂ ಆಡಿಸೋಕೆ ಪ್ಲಾನ್​ ರೂಪಿಸಿದೆ. ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡರಲ್ಲೂ ತಂಡಕ್ಕೆ ನೆರವಾಗಬಲ್ಲ ಸಾಮರ್ಥ್ಯವಿರೋದು ಇಬ್ಬರ ಆಯ್ಕೆಗೆ ಪ್ಲಸ್​ಪಾಯಿಂಟ್​ ಆಗಿದೆ.

ಒಟ್ಟಿನಲ್ಲಿ ಸದ್ಯ 15 ಜನರ ತಂಡವನ್ನ ಪ್ರಕಟಿಸಿರುವ ಟೀಮ್​ಇಂಡಿಯಾ ಪಂದ್ಯದ ಕುತೂಹಲವನ್ನ ಡಬಲ್​ ಮಾಡಿದೆ. ಜೊತೆಗೆ ಅಂತಿಮ 11ರ ಬಳಗದಲ್ಲಿ ಕಾಣಿಸಿಕೊಳ್ಳೋದ್ಯಾರು ಅನ್ನೋ ಚರ್ಚೆಗಳಿಗೂ ಆಹಾರವಾಗಿದೆ.

The post ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ..? appeared first on News First Kannada.

Source: newsfirstlive.com

Source link