ಐಸಿಸಿ ವಿಶ್ವ ಟೆಸ್ಟ್ ​ಚಾಂಪಿಯನ್​ಶಿಪ್​​ ಫೈನಲ್​​​​ ಪಂದ್ಯಕ್ಕೆ, ಮೊದಲ ದಿನವೇ ಮಳೆ ಕಾಟ ಎದುರಾಗಿದೆ. ಬೆಳಗ್ಗೆಯಿಂದ ಬಿಟ್ಟು ಬಿಡದೆ ಕಾಡಿದ ವರುಣ, ಟಾಸ್​ಗೂ ಅಡ್ಡಿ ಪಡಿಸಿತ್ತು. ಇದರಿಂದಾಗಿ 3 ಗಂಟೆಗೆ ಆರಂಭವಾಗಬೇಕಿದ್ದ ಇಂಡೋ-ಕಿವೀಸ್​ ಫೈನಲ್​​ ಪಂದ್ಯ, ವಿಳಂಬವಾಗಿ ಆರಂಭಗೊಂಡಿತು. ಭಾರೀ ಮಳೆಯಿಂದಾಗಿ ಮೊದಲ ಸೆಷನ್ ಪೂರ್ತಿ ಮಳೆಗೆ ಆಹುತಿಯಾಯ್ತು. ಪ್ರತಿಷ್ಠಿತ ಫೈನಲ್​​ ಪಂದ್ಯಕ್ಕೆ, ಐದೂ ದಿನವೂ ಮಳೆ ಕಾಡುವ ಸಾಧ್ಯತೆ ಇದೆ ಎಂದು ಸೌತ್​​ಹ್ಯಾಂಪ್ಟನ್​ ಹವಾಮಾನ ವರದಿ ತಿಳಿಸಿದೆ. ಪಂದ್ಯಕ್ಕೆ ಪ್ರತಿದಿನ ಮಳೆ ಅಡಚಣೆ ತರುವ ಸಾಧ್ಯತೆ ಶೇ. 70-80ರಷ್ಟಿದೆ. ಇದರಿಂದಾಗಿ ಟೀಮ್ ಇಂಡಿಯಾ – ನ್ಯೂಜಿಲೆಂಡ್ ಟ್ರೋಫಿ ಹಂಚಿಕೊಳ್ಳುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಅಕಸ್ಮಾತ್ ಮಳೆಯ ಕಾರಣ ಅಡಚಣೆ ಉಂಟಾದರೆ, ಈಗಾಗಲೇ ಕಾಯ್ದಿರಿಸಿರುವ ಮೀಸಲು ದಿನದಂದು ಪಂದ್ಯ ನಡೆಸಲಾಗುತ್ತೆ. ಐಸಿಸಿ ನಿಯಮದ ಪ್ರಕಾರ ಪಂದ್ಯ ಡ್ರಾಗೊಂಡರೆ ಉಭಯ ತಂಡಗಳನ್ನ ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತೆ.

The post ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ DAY 1- ಮೊದಲ ಸೆಷನ್ ಮಳೆಯಿಂದ ರದ್ದು appeared first on News First Kannada.

Source: newsfirstlive.com

Source link