ಬಹು ನಿರೀಕ್ಷಿತ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​ ಪಂದ್ಯ ಮೊದಲ ದಿನವೇ ಮಳೆಗೆ ಆಹುತಿಯಾಗಿದ್ದು, ಭಾರತ – ನ್ಯೂಜಿಲೆಂಡ್ ತಂಡಗಳಿಗೆ ನಿರಾಸೆ ಮೂಡಿಸಿವೆ. ಇಂಗ್ಲೆಂಡ್​ನ ಸೌತಾಂಪ್ಟನ್​ನಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಸದ್ಯ ಮೊದಲ ದಿನದ ಪಂದ್ಯ ರದ್ದಾಗಿದ್ದು, ನಾಳೆಯೂ ವರುಣ ಅಡ್ಡಿಪಡಿಸದಿದ್ದರೆ, ಟಾಸ್​ ಆರಂಭವಾಗುವ ಸಾಧ್ಯತೆ ಇದೆ. ಫೈನಲ್​ ಪಂದ್ಯಕ್ಕಾಗಿ ಮೀಸಲು ದಿನವನ್ನು ಇಟ್ಟಿದ್ದು, ಒಂದು ವೇಳೆ ನಾಳೆ ಪಂದ್ಯ ಆರಂಭವಾದರೆ, ಜೂನ್​ 23ರವರೆಗೂ ಪಂದ್ಯ ನಡೆಯಲಿದೆ.
ಟಾಸ್​ ಆರಂಭಕ್ಕೂ ಮುನ್ನ ಮಳೆ ಹೆಚ್ಚಿದ್ದರಿಂದ ಮೊದಲ ಸೆಷನ್ ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಯ್ತು. ಕೊನೆಗೆ ಮಳೆ ನಿಂತಿತ್ತಾದರೂ, ಮೈದಾನದಲ್ಲಿ ಮಳೆ ನೀರು ತೆರವು ಕಾರ್ಯಾಚರಣೆಗೆ ಹೆಚ್ಚಿನ ಸಮಯ ತೆಗೆದುಕೊಳ್ತು. ಕಾರಣ ಮೊದಲ ದಿನದಾಟವನ್ನೇ ರದ್ದುಗೊಳಿಸಲಾಗಿದೆ. ಸೌತಾಂಪ್ಟನ್​ ಹವಾಮಾನದ ಪ್ರಕಾರ, ಮುಂದಿನ ಒಂದು ವಾರದವರೆಗೆ ಮಳೆ ಬೀಳುವ ಮುನ್ಸೂಚನೆ ಇದೆ.

The post ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ DAY 1- ಮೊದಲ ದಿನದ ಪಂದ್ಯ ಮಳೆಯಿಂದ ವಾಷ್​ಔಟ್​ appeared first on News First Kannada.

Source: newsfirstlive.com

Source link