ಜೂನ್​ 18ರಿಂದ 22ರವರೆಗೆ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​​​ ಪಂದ್ಯದಲ್ಲಿ, ನ್ಯೂಜಿಲೆಂಡ್-ಟೀಮ್​ ಇಂಡಿಯಾ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಇಂಗ್ಲೆಂಡ್​​ನ ಸೌತಾಂಪ್ಟನ್​​​ನಲ್ಲಿ ನಡೆಯಲಿರುವ ಈ ಪಂದ್ಯದ ನಂತರ, ಟೀಮ್​ ಇಂಡಿಯಾ ಆಗಸ್ಟ್​ 4ರಿಂದ ಇಂಗ್ಲೆಂಡ್​​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯನ್ನ ಆಡಲಿದೆ. ಆದರೆ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​ ನಂತರ ಇಂಗ್ಲೆಂಡ್​ ವಿರುದ್ಧ ಸರಣಿ ಪ್ರಾರಂಭಕ್ಕೆ, ಬರೋಬ್ಬರಿ 6 ವಾರಗಳ ಕಾಲ ಗ್ಯಾಪ್​ ಸಿಗಲಿದೆ. ಹಾಗಾಗಿ ಭಾರತದ ಆಟಗಾರರಿಗೆ, ಮೂರು ವಾರಗಳ ಕಾಲ ಬಯೋಬಬಲ್​ನಿಂದ ಬ್ರೇಕ್​ ನೀಡಲು ಬಿಸಿಸಿಐ ನಿರ್ಧರಿಸಿದೆ. ವಿಶ್ರಾಂತಿ ಅವಧಿಯಲ್ಲಿ ಇಂಗ್ಲೆಂಡ್​​ ಸುತ್ತಬಹುದು. ಸ್ನೇಹಿತರು, ಕುಟುಂಬ ಸದಸ್ಯರು ಭೇಟಿಯಾಗಬಹುದು. ಬ್ರೇಕ್​ ಬಳಿಕ ಏಳು ದಿನಗಳ ಕಾಲ ಕ್ವಾರಂಟೀನ್​ಗೆ ಒಳಗಾಗಬೇಕು. ಅದಾದ ಬಳಿಕ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲು ಚಿಂತನೆ ನಡೆಸಿದೆ. ಆಗಸ್ಟ್​ 4ರಂದು ಮೊದಲ ಟೆಸ್ಟ್​ ಪಂದ್ಯ ನಾಟಿಂಗ್​​​ಹ್ಯಾಮ್​​ನಲ್ಲಿ ನಡೆಯಲಿದೆ.

The post ಟೆಸ್ಟ್ ಚಾಂಪಿಯನ್​ಶಿಪ್ ಬಳಿಕ ವಿರಾಟ್ ಕೊಹ್ಲಿ ಪಡೆಗೆ 3 ವಾರ ವಿಶ್ರಾಂತಿ appeared first on News First Kannada.

Source: newsfirstlive.com

Source link