ಭಾರತ-ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಮತ್ತೆ ವರುಣನ ಅವಕೃಪೆಗೆ ಒಳಗಾಗಿದೆ. ಮಹತ್ವದ ಪಂದ್ಯದ 4ನೇ ದಿನದಾಟವನ್ನ ಆರಂಭಿಸೋದಕ್ಕೆ ಮಳೆ ಅವಕಾಶವನ್ನ ನೀಡಿಲ್ಲ. ಸೌತ್​ಹ್ಯಾಂಪ್ಟನ್​ನ ಭಾಗದಲ್ಲಿ ಬಿಡದೇ ಮಳೆ ಸುರಿದ ಪರಿಣಾಮ, 4ನೇ ದಿನದಾಟವನ್ನ ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಪಂದ್ಯದ ಮೊದಲ ದಿನದಿಂದಲೂ ಐತಿಹಾಸಿಕ ಪಂದ್ಯಕ್ಕೆ ಮಳೆ ಭಾರೀ ಹಿನ್ನಡೆಯುಂಟು ಮಾಡುತ್ತಿದ್ದು, ಮೊದಲ ದಿನ ಸಂಪೂರ್ಣ ವ್ಯರ್ಥವಾದರೆ, 2ನೇ ದಿನದಾಟ ಮಂದ ಬೆಳಕಿನ ಕಾರಣ ಬೇಗ ಮುಕ್ತಾಯವಾಯ್ತು. ಇನ್ನು 3ನೇ ದಿನದಾಟವೂ ಮಳೆಯ ಕಾರಣ ಅರ್ಧಗಂಟೆ ತಡವಾಗಿ ಆರಂಭವಾಗಿ, ಬ್ಯಾಡ್​​ ಲೈಟ್​ ಕಾರಣದಿಂದ ಬೇಗನೇ ಮುಕ್ತಾಯ ಕಂಡಿತ್ತು. ಇಂದು ಕೂಡ ಒಂದೇ ಒಂದು ಎಸೆತ ಬೌಲ್ ಮಾಡದೆ, ಪಂದ್ಯವನ್ನ ರದ್ದುಗೊಳಿಸಲಾಯ್ತು. ಹೀಗಾಗಿ ಪಂದ್ಯದ ಫಲಿತಾಂಶ ಬರೋದು ಕೂಡ ಅನುಮಾನ ಎನ್ನಲಾಗ್ತಿದೆ.

The post ಟೆಸ್ಟ್ ಚಾಂಪಿಯನ್​ಶಿಪ್ DAY 4- ಮಳೆಯಿಂದ ದಿನದಾಟದ ಪಂದ್ಯ ರದ್ದು appeared first on News First Kannada.

Source: newsfirstlive.com

Source link