ಟೆಸ್ಟ್ ಚಾಂಪಿಯನ್​ಶಿಪ್ DAY 5- ಟೀಮ್ ಇಂಡಿಯಾ ವೇಗಿಗಳ ಘರ್ಜನೆ​​- ನ್ಯೂಜಿಲೆಂಡ್​ 135/5

ಟೆಸ್ಟ್ ಚಾಂಪಿಯನ್​ಶಿಪ್ DAY 5- ಟೀಮ್ ಇಂಡಿಯಾ ವೇಗಿಗಳ ಘರ್ಜನೆ​​- ನ್ಯೂಜಿಲೆಂಡ್​ 135/5

ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಪಂದ್ಯದ 5ನೇ ದಿನದಾಟದ ಮೊದಲ ಸೆಷನ್​ನಲ್ಲಿ ಟೀಮ್​ ಇಂಡಿಯಾ ಮೇಲುಗೈ ಸಾಧಿಸಿದೆ. 2 ವಿಕೆಟ್​ ನಷ್ಟಕ್ಕೆ 101ರನ್​ಗಳೊಂದಿಗೆ ದಿನದಾಟ ಆರಂಭಿಸಿದ ಕಿವೀಸ್​, ಭೋಜನ ವಿರಾಮದ ವೇಳೆಗೆ ಕೇವಲ 34 ರನ್​ ಕಲೆ ಹಾಕಿ ರನ್​​​ಗಳಿ​​ಗೆ 3 ವಿಕೆಟ್​ ಕಳೆದುಕೊಂಡಿದೆ. ಕಿವೀಸ್​​ ಪರ ದಿನದಾಟ ಆರಂಭಿಸಿದ ಕೇನ್​ ವಿಲಿಯಮ್ಸನ್​ -​​ ರಾಸ್​ ಟೇಲರ್​​ ಎಚ್ಚರಿಕೆಯ ಆಟಕ್ಕೆ ಯತ್ನಿಸಿದ್ರು. ಆದರೆ ಮೊಹಮ್ಮದ್ ಶಮಿ ಆ ಆಟಕ್ಕೆ ಬ್ರೇಕ್​ ಹಾಕಿದ್ರು. ತಾಳ್ಮೆಯ ಆಟಕ್ಕೆ ಮುಂದಾಗಿದ್ದ ಟೇಲರ್​ಗೆ ಶಮಿ ಬೌಲಿಂಗ್​ನಲ್ಲಿ ಶುಭ್​ಮನ್​ಗಿಲ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದ್ರು. ಟೇಲರ್​​ ನಿರ್ಗಮನದ ಬಳಿಕ ಕಣಕ್ಕಿಳಿದ ಹೆನ್ರಿ ನಿಕೋಲಸ್​ ಮತ್ತು ಬಿಜೆ ವಾಟ್ಲಿಂಗ್​ ಕೂಡ ಅಲ್ಪ ಮೊತ್ತಕ್ಕೆ ಔಟ್​ ಆದ್ರು. ಇಂದಿನ ದಿನದಾಟದ ಮೊದಲ ಸೆಷನ್​ನಲ್ಲಿ ಶಮಿ 2 ವಿಕೆಟ್​​ ಕಬಳಿಸಿದ್ರೆ, ಇಶಾಂತ್​ ಶರ್ಮಾ 1 ವಿಕೆಟ್​​ ಕಬಳಿಸಿದ್ರು. ಸದ್ಯ ಮೊದಲ ಸೆಷನ್​ ಅಂತ್ಯಕ್ಕೆ ನ್ಯೂಜಿಲೆಂಡ್​ 135 ರನ್​ಗಳಿಗೆ 5 ವಿಕೆಟ್​ಗಳನ್ನ ಕಳೆದುಕೊಂಡಿದೆ. ಇನ್ನು 19 ರನ್ ಕಲೆ ಹಾಕಿರುವ ಕ್ಯಾಪ್ಟನ್​ ಕೇನ್​​ ವಿಲಿಯಮ್ಸನ್ ಮತ್ತು ಕಾಲಿನ್​ ಗ್ರಾಂಡ್​ಹೋಮ್​ ಕ್ರೀಸ್​ನಲ್ಲಿದ್ದಾರೆ.

The post ಟೆಸ್ಟ್ ಚಾಂಪಿಯನ್​ಶಿಪ್ DAY 5- ಟೀಮ್ ಇಂಡಿಯಾ ವೇಗಿಗಳ ಘರ್ಜನೆ​​- ನ್ಯೂಜಿಲೆಂಡ್​ 135/5 appeared first on News First Kannada.

Source: newsfirstlive.com

Source link