ಟೆಸ್ಟ್ ಚಾಂಪಿಯನ್​ಶಿಪ್ DAY 5- ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಡ್ 249 ರನ್​ಗಳಿಗೆ ಆಲೌಟ್

ಟೆಸ್ಟ್ ಚಾಂಪಿಯನ್​ಶಿಪ್ DAY 5- ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಡ್ 249 ರನ್​ಗಳಿಗೆ ಆಲೌಟ್

ಸೌತ್​ಹ್ಯಾಪ್ಟಂನ್​ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ನ್ಯೂಜಿಲೆಂಡ್,​​​ 249 ರನ್​ ಗಳಿಗೆ ಆಲೌಟ್​ ಆಗಿದೆ. ಇದರೊಂದಿಗೆ  ಪಂದ್ಯದಲ್ಲಿ ಕಿವೀಸ್ 32 ರನ್​​​ಗಳ ಮುನ್ನಡೆ ಕಾಯ್ದುಕೊಂಡಿದೆ.

2 ವಿಕೆಟ್​ ನಷ್ಟಕ್ಕೆ 101ರನ್​ಗಳೊಂದಿಗೆ ದಿನದಾಟ ಆರಂಭಿಸಿದ ಕಿವೀಸ್​, ಭಾರತೀಯ ಬೌಲರ್​ಗಳ ಸಂಘಟಿತ ಹೋರಾಟದ ಮುಂದೆ ಮಂಕಾಯ್ತು. ಭೋಜನ ವಿರಾಮದ ವೇಳೆಗೆ ಕೇವಲ 34 ರನ್​ ಕಲೆ ಹಾಕಿ ರನ್​​​ಗಳಿ​​ಗೆ 3 ವಿಕೆಟ್​ ಕಳೆದುಕೊಂಡ ತಂಡದ, 2ನೇ ಸೆಷನ್​ ಅಂತ್ಯಕ್ಕೂ ಮುನ್ನವೇ ಆಲೌಟ್​​ ಆಯ್ತು. ಕಿವೀಸ್​​ ಪರ ದಿನದಾಟ ಆರಂಭಿಸಿದ ಕೇನ್​ ವಿಲಿಯಮ್ಸನ್​ -​​ ರಾಸ್​ ಟೇಲರ್​​ ಎಚ್ಚರಿಕೆಯ ಆಟಕ್ಕೆ ಯತ್ನಿಸಿದ್ರು. ಆದರೆ ಮೊಹಮ್ಮದ್ ಶಮಿ ಆ ಆಟಕ್ಕೆ ಬ್ರೇಕ್​ ಹಾಕಿದ್ರು. ತಾಳ್ಮೆಯ ಆಟಕ್ಕೆ ಮುಂದಾಗಿದ್ದ ಟೇಲರ್​ಗೆ ಶಮಿ ಬೌಲಿಂಗ್​ನಲ್ಲಿ ಶುಭ್​ಮನ್​ಗಿಲ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದ್ರು.

ಟೇಲರ್​​ ನಿರ್ಗಮನದ ಬಳಿಕ ಕಣಕ್ಕಿಳಿದ ಹೆನ್ರಿ ನಿಕೋಲಸ್​ ಮತ್ತು ಬಿಜೆ ವಾಟ್ಲಿಂಗ್​ ಕೂಡ ಅಲ್ಪ ಮೊತ್ತಕ್ಕೆ ಔಟ್​ ಆದ್ರು. ಬಳಿಕ ಕಣಕ್ಕಿಳಿದ ಗ್ರಾಂಡ್​ ಹೋಮ್​ 13 ರನ್​ಗಳಿಸಿ ನಿರ್ಗಮಿಸಿದ್ರೆ, ಅಬ್ಬರದ 21 ರನ್​ ಕಲೆ ಹಾಕಿದ ಕೈಲ್​ ಜೆಮಿಸನ್​ ಶಮಿಗೆ ವಿಕೆಟ್​​ ಒಪ್ಪಿಸಿದ್ರು. ಹೋರಾಟದ ಇನ್ನಿಂಗ್ಸ್​​​ ಕಟ್ಟಿದ ನಾಯಕ ಕೇನ್​ ವಿಲಿಯಮ್​ಸನ್​ 49 ರನ್​ಗಳಿಸಿ ಔಟಾದ್ರೆ, ನೇಲ್​ ವ್ಯಾಗ್ನರ್​​ ಡಕೌಟ್​ ಆದ್ರು. ಅಂತಿಮವಾಗಿ ಟಿಮ್​ ಸೌಥಿ ಜಡೇಜಾ ಎಸೆತದಲ್ಲಿ ಕ್ಲೀನ್​ ಬೋಲ್ಡ್​​ ಆಗೋದ್ರೊಂದಿಗೆ ಕಿವೀಸ್​ ಇನ್ನಿಂಗ್ಸ್​ಗೆ ತೆರ ಬಿತ್ತು. ಅಂತಿಮವಾಗಿ ನ್ಯೂಜಿಲೆಂಡ್​​ 249 ರನ್​ಗಳಿಗೆ ಆಲೌಟ್​ ಆಯ್ತು. ಟೀಮ್​ ಇಂಡಿಯಾ ಪರ ಮೊಹಮದ್​ ಶಮಿ 4, ಇಶಾಂತ್​ 3, ಅಶ್ವಿನ್​ 2, ಜಡೇಜಾ 1 ವಿಕೆಟ್​ ಕಬಳಿಸಿದ್ರು.

The post ಟೆಸ್ಟ್ ಚಾಂಪಿಯನ್​ಶಿಪ್ DAY 5- ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಡ್ 249 ರನ್​ಗಳಿಗೆ ಆಲೌಟ್ appeared first on News First Kannada.

Source: newsfirstlive.com

Source link