ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯ ಬಹುಮಾನ ಮೊತ್ತವನ್ನ, ಐಸಿಸಿ ಘೋಷಿಸಿದೆ. ಚೊಚ್ಚಲ ಆವೃತ್ತಿಯ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್​​ನಲ್ಲಿ ಗೆಲ್ಲುವ ತಂಡಕ್ಕೆ 11.7 ಕೋಟಿ ರೂ. ಬಹುಮಾನದ ಮೊತ್ತ ಸಿಗಲಿದೆ.

ರನ್ನರ್ ಅಪ್ ತಂಡಕ್ಕೆ 5.85 ಕೋಟಿ ರೂ. ಸಿಗಲಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಆಸ್ಟ್ರೇಲಿಯಾ ಹಾಗೂ ನಾಲ್ಕನೇ ಸ್ಥಾನ ಪಡೆದ ಇಂಗ್ಲೆಂಡ್‌ ತಂಡಗಳಿಗೆ ಕ್ರಮವಾಗಿ 3.29 ಕೋಟಿ ರೂ ಮತ್ತು 2.56 ಕೋಟಿ ರೂ ಲಭ್ಯವಾಗಲಿದೆ. ಇನ್ನೂ 5ನೇ ಸ್ಥಾನ ಪಡೆದ ಪಾಕಿಸ್ತಾನ ತಂಡಕ್ಕೆ 1.46 ಕೋಟಿ ರೂ. ಸಿಕ್ಕರೆ, ನಂತರದ ಸ್ಥಾನಗಳಲ್ಲಿರುವ ಸೌತ್​​ ಆಫ್ರಿಕಾ, ವೆಸ್ಟ್‌ ಇಂಡೀಸ್‌, ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳಿಗೆ ತಲಾ 73.18 ಲಕ್ಷ ರೂ ಸಿಗಲಿದೆ.

ಅಕಸ್ಮಾತ್​ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ, ಉಭಯ ತಂಡಗಳಿಗೂ ಸಮನಾಗಿ ಪ್ರಶಸ್ತಿ ಮೊತ್ತ ಹಂಚಲಿದೆ. ಅಂದ್ರೆ ಪ್ರಥಮ ಹಾಗೂ ರನ್ನರ್​​ ಆಪ್​​ ಬಹುಮಾನ ಮೊತ್ತವನ್ನು ಒಟ್ಟಾಗಿ ಸೇರಿಸಿ ಸಮನಾಗಿ ಹಂಚಿಕೊಳ್ಳಲಿವೆ. ಜೊತೆಗೆ ಜಂಟಿ ಚಾಂಪಿಯನ್ಸ್‌ ಅಂತ ಘೋಷಿಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.

The post ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್​​ ಗೆಲ್ಲೋ ತಂಡಕ್ಕೆ ಸಿಗುವ ಹಣ ಎಷ್ಟು ಗೊತ್ತಾ..? appeared first on News First Kannada.

Source: newsfirstlive.com

Source link