ವಿರಾಟ್ ಕೊಹ್ಲಿ ಬಳಿಯಿದ್ದ ಟೆಸ್ಟ್ ನಾಯಕತ್ವವನ್ನೂ ತ್ಯಜಿಸಿದ್ದಾಯ್ತು. ಈ ಪಟ್ಟಕ್ಕೆ ಹಲವರ ಹೆಸರು ತಳುಕು ಹಾಕಿಕೊಳ್ತಿದ್ರೂ, ಯಾರಿಗೆ ದೊರೆಯುತ್ತದೆ ಅನ್ನೋ ಪ್ರಶ್ನೆ ಉದಯವಾಗಿದೆ. ಭಾರತೀಯ ಕ್ರಿಕೆಟ್ನ ಕಿಂಗ್ ಆಗಿದ್ದ ಕೊಹ್ಲಿ, ಬಳಿಕ ಭಾರತೀಯ ಕ್ರಿಕೆಟ್ಗೆ ನೂತನ ಕಿಂಗ್ ಯಾರಾಗಲಿದ್ದಾರೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಪವರ್ ಹೌಸ್. ಹಾಗೆಯೇ ಬ್ರಾಂಡ್ ಕೂಡ ಹೌದು. ಬ್ಯಾಟ್ಸ್ಮನ್ ಆಗಿ ಮಾತ್ರವಲ್ಲ, ನಾಯಕರಾಗಿಯೂ ಅದೆಷ್ಟೋ ದಾಖಲೆಗಳು ಕೊಹ್ಲಿ ಹೆಸರಲ್ಲಿದೆ. ಅಗ್ರೆಸ್ಸೀವ್ಗೆ ಅಂಬಾಸಿಡರ್ ಆಗಿರುವ ಕೊಹ್ಲಿ, ದಿಗ್ಗಜರ ದಾಖಲೆಗಳನ್ನೇ ಹಿಂದಿಕ್ಕಿ ಮುಂದೆ ಸಾಗಿದ್ದಾರೆ. ಇದೇ ಕಾರಣಕ್ಕಾಗಿ ಕೊಹ್ಲಿಯನ್ನ MODERN DAY ಕ್ರಿಕೆಟ್ನ ಕಿಂಗ್ ಎಂದು ಕರೆಯಲಾಗ್ತಿತ್ತು. ಇದನ್ನು ಭಾರತವಲ್ಲ, ಇಡೀ ಕ್ರಿಕೆಟ್ ಜಗತ್ತೇ ಒಪ್ಪಿದೆ.
ಸೀಮಿತ ಓವರ್ಗಳ ಬಳಿಕ ಟೆಸ್ಟ್ ನಾಯಕತ್ವವನ್ನೂ ಕೊಹ್ಲಿ ತ್ಯಜಿಸಿದ್ದಾರೆ. ಆದರೆ ನಾಯಕನಾಗಿ ರಾಜನಂತೆ ಮೆರೆದಾಡಿದ ಕೊಹ್ಲಿಗೆ ಉತ್ತರಾಧಿಕಾರಿ ಯಾರು ಅನ್ನೋ ದೊಡ್ಡ ಪ್ರಶ್ನೆ ಉದ್ಭವವಾಗಿದೆ. ಆದರೆ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮುಂಬೈನ ಬಾಂದ್ರಾಗೆ ಸಮೀಪದ ಮನೆಯಲ್ಲಿ ನೂತನ ಕಿಂಗ್ನ ಉದಯವಾಗಿದೆ ಎನ್ನಲಾಗ್ತಿದೆ. ಆ ಕಿಂಗ್ ಬೇರೆ ಯಾರೂ ಅಲ್ಲ, ಸೀಮಿತ ಓವರ್ಗಳ ನಾಯಕ ರೋಹಿತ್ ಶರ್ಮಾ.
ರೋಹಿತ್ ಶರ್ಮಾನೇ ಭಾರತೀಯ ಕ್ರಿಕೆಟ್ನ ಮುಂದಿನ ಕಿಂಗ್..?
ರೋಹಿತ್ ಶರ್ಮಾನೇ ಮುಂದಿನ ಕಿಂಗ್.. ಅದರಲ್ಲಿ ಎರಡು ಮಾತಿಲ್ಲ. ಕೊಹ್ಲಿ ಯುಗ ಅಂತ್ಯಗೊಂಡಿದ್ದು, ಮೈದಾನದಲ್ಲಿ ಆಟಗಾರನಾಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಟಿ20 ಮತ್ತು ಏಕದಿನ ಕ್ರಿಕೆಟ್ನ ನಾಯಕನಾಗಿರುವ ರೋಹಿತ್ಗೆ ಟೆಸ್ಟ್ ಪಟ್ಟವನ್ನೂ ಕಟ್ಟಲಾಗುತ್ತೆ ಎನ್ನಲಾಗ್ತಿದೆ. ಆ ಮೂಲಕ 3 ಮಾದರಿ ಕ್ರಿಕೆಟ್ಗೆ ನೂತನ ಕಿಂಗ್ನ ಆಗಮನ ಆಗಲಿದೆ ಎಂದೇ ಹೇಳಲಾಗ್ತಿದೆ. ಇದು ಬಿಸಿಸಿಐ ಮಾಸ್ಟರ್ ಪ್ಲಾನ್ ಕೂಡ ಆಗಿದೆ.
ರೋಹಿತ್ಗೆ ಟೀಮ್ ಇಂಡಿಯಾವನ್ನ ಯಶಸ್ವಿಯಾಗಿ ಮುನ್ನೆಡೆಸಿದ ಅನುಭವ ಇದೆ. ಅಲ್ಲದೇ 2013ರಿಂದ IPL ನಾಯಕತ್ವ ವಹಿಸಿಕೊಂಡ ರೋಹಿತ್, MS ಧೋನಿಯನ್ನೇ ಮೀರಿಸಿ 5 IPL ಪ್ರಶಸ್ತಿಗಳನ್ನ ಗೆದ್ದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಧೋನಿ ODI-T20 ನಾಯಕತ್ವದಿಂದ ಕೆಳಗಿಳಿದು ಕೊಹ್ಲಿ ಪಟ್ಟಕೇರಿದಾಗ ರೋಹಿತ್ ಉಪನಾಯಕನಾಗಿ ಬಡ್ತಿ ಪಡೆದ್ರು. ಈಗ ಟೆಸ್ಟ್ ಉಪನಾಯಕರಾಗಿದ್ದಾರೆ. ಹಾಗಾಗಿ ಖಾಲಿ ಇರುವ ಟೆಸ್ಟ್ ನಾಯಕನ ಸ್ಥಾನಕ್ಕೆ ರೋಹಿತ್ ಶರ್ಮಾರೇ ಸೂಕ್ತ ಅಂತಿವೆ ಬಿಸಿಸಿಐ ಮೂಲಗಳು.
ಕೆಲ ಮಾಜಿ ಕ್ರಿಕೆಟಿಗರು ಒಬ್ಬೊಬರ ಪರ, ನಾಯಕನ ಸ್ಥಾನಕ್ಕೆ ಧ್ವನಿ ಎತ್ತುತ್ತಿದ್ದಾರೆ. ರಿಷಭ್ ಪಂತ್ ಪರ ಸುನಿಲ್ ಗವಾಸ್ಕರ್ ಬ್ಯಾಟ್ ಬೀಸಿದ್ರೆ, ಯುವರಾಜ್ ಸಿಂಗ್ ಗವಾಸ್ಕರ್ಗೆ ಬೆಂಬಲ ನೀಡಿದ್ದಾರೆ. ಆದ್ರೆ ತವರಿನಲ್ಲಿ ನಡೆಯಲಿರುವ ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ರೋಹಿತ್ ಗದ್ದುಗೆ ಏರಲಿದ್ದಾರೆ ಕನ್ಫರ್ಮ್ ಎನ್ನಲಾಗ್ತಿದೆ. ವಿಪರ್ಯಾಸ ಅಂದರೆ ಕೊಹ್ಲಿಗೆ ಇದು 100ನೇ ಟೆಸ್ಟ್ ಪಂದ್ಯ. ಅದೇನೆ ಇರಲಿ ಭಾರತೀಯ ಕ್ರಿಕೆಟ್ಗೆ ರೋಹಿತ್ ನೂತನ ಕಿಂಗ್ ಆಗ್ತಾರಾ ಅನ್ನೋದನ್ನ ಕಾದು ನೋಡಬೇಕು.