ಟೆಸ್ಟ್ ಸ್ಪೆಷಲಿಸ್ಟ್​​​ಗಳ ವೈಫಲ್ಯ -ಮೊದಲ ದಿನದಾಟದ ಅಂತ್ಯಕ್ಕೆ ಭಾರತ 258ಕ್ಕೆ 4

ನ್ಯೂಜಿಲೆಂಡ್​​ ವಿರುದ್ಧದ ಮೊದಲ ಟೆಸ್ಟ್​​​ ಪಂದ್ಯದಲ್ಲಿ ಸಂಕಷ್ಟದ ನಡುವೆಯೇ ಭಾರತ ಕಮ್​ಬ್ಯಾಕ್ ಮಾಡಿದೆ. ಕಾನ್ಪುರದ ಗ್ರೀನ್‌ ಪಾರ್ಕ್​​​ ಮೈದಾನದಲ್ಲಿ ಟಾಸ್​​ ಗೆದ್ದ ಭಾರತ, ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಕಿವೀಸ್ ವೇಗಿ ಕೈಲ್​ ಜೆಮಿಸನ್ ನಡೆಸಿದ ಮಾರಕ ದಾಳಿಗೆ ರಹಾನೆ ಪಡೆ ತತ್ತರಿಸಿತು. ಆದರೆ ಶುಭ್​​​ಮನ್​ ಗಿಲ್,​ ಶ್ರೇಯಸ್​ ಅಯ್ಯರ್​​​​ ಮತ್ತು ರವೀಂದ್ರ ಜಡೇಜಾ ಅಮೋಘ ಅರ್ಧಶತಕ ಸಿಡಿಸಿ ಇಕ್ಕಟ್ಟಿನಲ್ಲಿದ್ದ ತಂಡಕ್ಕೆ ಸಂಜೀವಿನಿಯಾದರು.

ಮೊದಲ ಸೆಷನ್​​​​​ನಲ್ಲಿ ಟೀಮ್​ ಇಂಡಿಯಾಗೆ ‘ಶುಭ್​’ಆರಂಭ
ಶುಭ್​ಮನ್​​​ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್​​ ಅಗರ್​ವಾಲ್, ಆರಂಭದಲ್ಲಿ ಭರವಸೆ ಮೂಡಿಸಿದ್ರು. ಆದರೆ ಜೆಮಿಸನ್‌ ಎಸೆತದಲ್ಲಿ ಮಯಾಂಕ್, 13ರನ್​ ​​​ಗಳಿಸಿದಾಗ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತರು. ಬಳಿಕ ಜೊತೆಯಾದ ಗಿಲ್ ಮತ್ತು ಚೇತೇಶ್ವರ್​​ ಪೂಜಾರ ತಂಡಕ್ಕೆ ಚೇತರಿಕೆ ನೀಡಿದರು. ಮತ್ತೊಂದೆಡೆ ಮನಮೋಹಕ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದ ಗಿಲ್‌​, ಭೋಜನ ವಿರಾಮದ ಹೊತ್ತಿಗೆ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. ಅಲ್ಲದೆ 2ನೇ ವಿಕೆಟ್​ಗೆ 61 ರನ್​ಗಳ ಜೊತೆಯಾಟವಾಡಿಡ ಗಿಲ್-ಪೂಜಾರ ಜೋಡಿ, 2ನೇ ಸೆಷನ್​ಗೆ ಕ್ರೀಸ್​ ಕಾಯ್ದುಕೊಂಡಿತ್ತು ಅಷ್ಟೊತ್ತಿಗಾಗಲೇ 1 ವಿಕೆಟ್​ ಕಳೆದುಕೊಂಡಿದ್ದ ಭಾರತ 82ರನ್​​ ಗಳಿಸಿತ್ತು.

ಸುಸ್ಥಿತಿಯಲ್ಲಿದ್ದ ಭಾರತಕ್ಕೆ ಎರಡನೇ ಸೆಷನ್​​​ನಲ್ಲಿ ಶಾಕ್​.!
ಮೊದಲ ಸೆಷನ್​​​ನಲ್ಲಿ ಉತ್ತಮ ಆರಂಭ ಪಡೆದಿದ್ದ ಭಾರತ, 2ನೇ ಸೆಷನ್​ನಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. 52ರನ್‌ ಗಳಿಸಿದ್ದ ಗಿಲ್​​​​, ದೊಡ್ಡ ಇನಿಂಗ್ಸ್‌ ಕಟ್ಟುವ ಮುನ್ಸೂಚನೆ ನೀಡಿದ್ರು. ಆದರೆ 2ನೇ ಸೆಷನ್​ ಆರಂಭದಲ್ಲೇ ಕ್ರೀಸ್‌ಗೆ ಬಂದ ಗಿಲ್​​​, ಜೆಮಿಸನ್​​​ ಬೌಲಿಂಗ್​ನಲ್ಲಿ ಕ್ಲೀನ್‌ಬೌಲ್ಡ್ ಆದ್ರು. ಇದರ​​ ಬೆನ್ನಲ್ಲೇ ಪೂಜಾರ ಸಹ ಔಟಾಗಿ ನಿರಾಸೆ ಮೂಡಿಸಿದ್ರು. ಅತ್ತ 35ರನ್‌ ಗಳಿಸಿದ್ದ ಅಜಿಂಕ್ಯಾ ರಹಾನೆ, ತಂಡವನ್ನ ಸಂಕಷ್ಟದಿಂದ ಪಾರುಮಾಡುವ ಭರವಸೆ ಮೂಡಿಸಿದ್ರು. ಆದ್ರೆ ಅನಗತ್ಯ ಹೊಡೆತಕ್ಕೆ ಕೈಹಾಕಿದ ರಹಾನೆ, ಬೌಲ್ಡ್‌ ಆದ್ರು. ಇದರಿಂದ 2ನೇ ಸೆಷನ್​​​​ನಲ್ಲಿ ಭಾರತ, 154 ರನ್​​​ಗಳಿಸಿ 4 ವಿಕೆಟ್ ಕಳೆದುಕೊಳ್ತು.

ಅಂತಿಮ ಸೆಷನ್​​​ನಲ್ಲಿ ಶ್ರೇಯಸ್​ – ಜಡೇಜಾ ಶತಕದ ಮೆರೆದಾಟ​..!
ಮೂರನೇ ಸೆಷನ್​​ಗೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ಶ್ರೇಯಸ್- ಜಡೇಜಾ, ಭಾರತಕ್ಕೆ ಅದ್ಭುತ ಕೊಡುಗೆ ನೀಡಿದರು. ಪಾದಾರ್ಪಣೆ ಮಾಡಿದ ಚೊಚ್ಚಲ ಟೆಸ್ಟ್​​​ನಲ್ಲೇ ಅಯ್ಯರ್​, ಅರ್ಧಶತಕ ಸಿಡಿಸಿ, ಕುಸಿತ ಕಂಡಿದ್ದ ತಂಡಕ್ಕೆ ಆಸರೆಯಾದ್ರು. ಜೊತೆಗೆ ಅಯ್ಯರ್​​ಗೆ ಸಾಥ್​ ನೀಡಿದ ಆಲ್​ರೌಂಡರ್​ ಜಡೇಜಾ ಕೂಡ, ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. ಜವಾಬ್ದಾರಿಯುತ ಮತ್ತು ರಕ್ಷಣಾತ್ಮಕ ಆಟವಾಡಿದ ಈ ಜೋಡಿ, ಅಜೇಯ 113 ರನ್​ಗಳ ಬೊಂಬಾಟ್​​ ಜೊತೆಯಾಟ ನೀಡಿತು.

ಅಂತಿಮವಾಗಿ ಮೊದಲ ದಿನದಾಟದ ಅಂತ್ಯಕ್ಕೆ ಟೀಮ್​ ಇಂಡಿಯಾ, 84 ಓವರ್​​​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 258 ರನ್​ ಕಲೆ ಹಾಕಿದೆ. ಶ್ರೇಯಸ್​ ಅಯ್ಯರ್​ ಅಜೇಯ 75 ರನ್​​​ ಮತ್ತು ರವೀಂದ್ರ ಜಡೇಜಾ ಅಜೇಯ 50 ರನ್ ಗಳಿಸಿದ್ದು, 2ನೇ ದಿನದಾಟಕ್ಕೆ ಕ್ರೀಸ್​​​ ಕಾಯ್ದುಕೊಂಡಿದ್ದಾರೆ.

News First Live Kannada

Leave a comment

Your email address will not be published. Required fields are marked *