ಚಾಮರಾಜನಗರ: ಟೊಮ್ಯಾಟೋ ಟ್ರೇಯಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಜಿಲ್ಲೆಯ ಗುಂಡ್ಲುಪೇಟೆ ನಗರದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದು, ಕೇರಳ ಮೂಲದ ಗಫೂರ್(37) ಬಂಧಿತ ಆರೋಪಿ. ತಮಿಳುನಾಡಿನಲ್ಲಿ ಕಠಿಣ ಲಾಕ್‍ಡೌನ್ ಜಾರಿಯಲ್ಲಿದ್ದು, ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಅಕ್ರಮವಾಗಿ ತಮಿಳುನಾಡಿಗೆ ಮದ್ಯ ಸಾಗಣೆ ಮಾಡುತ್ತಿದ್ದ. ಅಲ್ಲದೆ ಯಾರಿಗೂ ತಿಳಿಯದಂತೆ ಟೊಮ್ಯಾಟೋ ಟ್ರೇಗಳ ಜೊತೆ ಮದ್ಯದ ಬಾಟಲಿ ಇಟ್ಟು ಸಾಗಿಸುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಗುಂಡ್ಲುಪೇಟೆ ಪೊಲೀಸರು ಸ್ವತ್ತು ಸಮೇತ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಈತನ ಬಳಿಯಿದ್ದ ವಿವಿಧ ಕಂಪನಿಯ 147 ಮದ್ಯದ ಬಾಟಲಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರ ಬೆಲೆ ಸುಮಾರು 45 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ತಮಿಳುನಾಡಿನ ಗೂಡಲೂರಿಗೆ ಸಾಗಿಸುತ್ತಿದ್ದ ಖದೀಮನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ. ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಟೊಮ್ಯಾಟೋ ಟ್ರೇನಲ್ಲಿ ತಮಿಳುನಾಡಿಗೆ ಅಕ್ರಮ ಮದ್ಯ ಸಾಗಾಟ- ಕೇರಳದ ಆರೋಪಿ ಅರೆಸ್ಟ್ appeared first on Public TV.

Source: publictv.in

Source link