ಟೊಮ್ಯಾಟೋ ಭಾರೀ ದುಬಾರಿ; ಬೆಂಗಳೂರಲ್ಲಿ ಕೆಜಿಗೆ ಎಷ್ಟು..?


ನವದೆಹಲಿ: ಕೇರಳ, ತಮಿಳುನಾಡಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತರಕಾರಿ ಬೆಲೆಗಳೆಲ್ಲಾ ಗಗನಕ್ಕೇರಿಕೆಯಾಗಿದೆ.

ಅದರಲ್ಲೂ ಟೊಮ್ಯಾಟೋ ಬೆಲೆಯಂತೂ ಪೆಟ್ರೋಲ್ ರೇಟ್​ಗಿಂತ ಹೆಚ್ಚಾಗಿದ್ದು, ಜನಸಾಮಾನ್ಯರಿಗೆ ಭಾರೀ ಹೊರೆ ಬಿದ್ದಂತಾಗಿದೆ. ಭಾರೀ ಮಳೆಯಾದ ಹಿನ್ನೆಲೆ ಸರಕು ಸಾಗಾಟ ವೆಚ್ಚ ದುಪ್ಪಟ್ಟಾಗಿದೆ. ಹೀಗಾಗಿ ತರಕಾರಿ ಬೆಲೆ ಏರಿಕೆಯಾಗಿದ್ದು, ಟೊಮ್ಯಾಟೋ 1 ಕೆಜಿಗೆ 140 ರಿಂದ 150 ರೂಪಾಯಿಯಷ್ಟು ಏರಿಕೆಯಾಗಿದೆ.

ಇನ್ನುಳಿದಂತೆ ಕ್ಯಾರೇಟ್​, ಬೀನ್ಸ್​ ಇನ್ನಿತರ ತರಕಾರಿ ಬೆಲೆಗಳು ಸಹ 100 ರ ಗಡಿ ತಲುಪಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಇತ್ತ ಬೆಂಗಳೂರಿನಲ್ಲೂ ಮತ್ತೆ ಟೊಮ್ಯಾಟೋ ಬೆಲೆ ಏರಿಕೆಯಾಗಿದ್ದು, ಕೆಜಿಗೆ 80 ರಿಂದ 90 ರೂಪಾಯಿಯಷ್ಟಾಗಿದೆ.

The post ಟೊಮ್ಯಾಟೋ ಭಾರೀ ದುಬಾರಿ; ಬೆಂಗಳೂರಲ್ಲಿ ಕೆಜಿಗೆ ಎಷ್ಟು..? appeared first on News First Kannada.

News First Live Kannada


Leave a Reply

Your email address will not be published. Required fields are marked *