ಚಾಮರಾಜನಗರ: ತರಕಾರಿ ವಾಹನದಲ್ಲಿ ತರಕಾರಿ ಮಾರೋದನ್ನ ಬಿಟ್ಟು ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದವರನ್ನ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ತರಕಾರಿ ವಾಹನದಲ್ಲಿ‌ ಟೊಮ್ಯಾಟೋ ಮಾರಾಟದ ಮಧ್ಯೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದವರನ್ನ ಗುಂಡ್ಲುಪೇಟೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೇರಳ ಮೂಲದ ಗಫೂರ್ ಬಿನ್‌ ಮಹಮದ್ ಎಂಬಾತನನ್ನ ಬಂಧಿಸಿದ್ದಾರೆ. ಈತನಿಂದ ವಿವಿಧ ಬಗೆಯ 45 ಸಾವಿರ ಮೌಲ್ಯದ 147 ಮದ್ಯ ಬಾಟಲಿಗಳನ್ನ ವಶಕ್ಕೆ ಪಡೆದಿದ್ದಾರೆ.

 

The post ಟೊಮ್ಯಾಟೋ ವ್ಯಾಪಾರದ ಹೆಸರಲ್ಲಿ ಮದ್ಯ ಸಾಗಾಣಿಕೆ: ಆರೋಪಿ ಅರೆಸ್ಟ್​ appeared first on News First Kannada.

Source: newsfirstlive.com

Source link