ಟೊಯೋಟಾ ಹಿಲಕ್ಸ್ ಪಿಕ್-ಅಪ್ ಟ್ರಕ್​ಗಾಗಿ ಕಾಯ್ತಾ ಇದ್ದೀರಾ, ಜನೆವರಿ 20ರಂದು ನಿಮ್ಮ ಕಾಯುವಿಕೆ ಕೊನೆಗೊಳ್ಳಲಿದೆ!


Toyota Hilux pick-up truck

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಹೊಸ ವರ್ಷದಲ್ಲಿ ತನ್ನ ಮೊದಲ ಲಾಂಚ್ಗಾಗಿ ಭಾರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸಂಸ್ಥೆಯ ಹೊಸ ಟೊಯೋಟಾ ಹಿಲಕ್ಸ್ ಪಿಕ್-ಅಪ್ ಟ್ರಕ್ಕಿನ ಲಾಂಚನ್ನು ಭಾರತದಲ್ಲಿ ಬಹಳ ಕುತೂಹಲದಿಂದ ನಿರೀಕ್ಷಿಸಲಾಗುತ್ತಿದೆ ಮತ್ತು ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಇದನ್ನು ಜನೆವರಿ 20 ರಂದು ಮಾರ್ಕೆಟ್​ಗೆ ಬಿಡುಗಡೆ ಮಾಡಲಾಗುವುದು. ನವೀನ ಬಗೆಯ ಈ ವಾಹನವನ್ನು ಖರೀದಿಸಲು ಇಚ್ಛಿಸುವವರು ಬಹಳ ದಿನಗಳೇನೂ ಕಾಯಬೇಕಿಲ್ಲ. ಟೊಯೋಟಾ ಹಿಲಕ್ಸ್ ಲಾಂಚ್ ಮಾಡಿದ ದಿನದಂದೇ ಬುಕಿಂಗ್ ಕೂಡ ಅರಂಭಿಸಲಾಗುವುದೆಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಆಕಾಂಕ್ಷಿಗಳು ರೂ. ಒಂದು ಲಕ್ಷ ಟೋಕನ್ ಹಣ ನೀಡಿ ಟ್ರಕ್ಕನ್ನು ಬುಕ್ ಮಾಡಬಹುದು. ಆದರೆ ವಾಹನಗಳ ಡೆಲಿವರಿ ಮಾತ್ರ ಮಾರ್ಚ್​ನಿಂದ ಆರಂಭವಾಗಲಿದೆ.

ಟೊಯೋಟಾ ಹಿಲಕ್ಸ್ ಪಿಕ್-ಅಪ್ ಟ್ರಕ್ ಈಗಾಗಲೇ 180 ದೇಶಗಳಲ್ಲಿ ಮಾರಾಟವಾಗುತ್ತಿದೆ. ಇನ್ನೋವಾ ಕ್ರಿಸ್ಟಾ ಮತ್ತು ಫಾರ್ಚುನರ್ ಕಾರುಗಳ ತಂತ್ರಜ್ಞಾನ ಟೊಯೋಟಾ ಹಿಲಕ್ಸ್ ನಲ್ಲಿ ಬಳಸಲಾಗಿದೆ.

ಟೊಯೊಟಾ ಹಿಲಕ್ಸ್ ಅನ್ನು ಪವರ್ ನೀಡೋದು ಫಾರ್ಚುನರ್‌ ಕಾರಿಗೆ ಚಾಲನೆ ನೀಡುವ ಅದೇ 2.8-ಲೀಟರ್ ಡೀಸೆಲ್ ಎಂಜಿನ್ ಆಗಿದೆ. ಇದು 201 ಎಚ್ಪಿ ಗರಿಷ್ಠ ಶಕ್ತಿ ಮತ್ತು 500 ಎನ್ಎಮ್ ಗರಿಷ್ಠ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಎಂಜಿನ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್-ಕನ್ವರ್ಟರ್ ಎಟಿಯೊಂದಿಗೆ ಬರುತ್ತದೆ.

ಇದಲ್ಲದೆ, ಇದು ಉತ್ತಮ ಆಫ್-ರೋಡ್ ಸಾಮರ್ಥ್ಯಗಳೊಂದಿಗೆ 4×4 ಡ್ರೈವ್‌ಟ್ರೇನ್ ಪಡೆಯಲಿದೆ ಮತ್ತು ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್‌ಗಳನ್ನು ಸಹ ಹೊಂದುವ ಸಾಧ್ಯತೆಯಿದೆ. ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, ಇದರ ಎಲ್ಲಾ ಹೆಡ್‌ಲ್ಯಾಂಪ್‌ಗಳು ಎಲ್ಇಡಿ ಆಗಿದ್ದು, ಟಚ್‌ಸ್ಕ್ರೀನ್, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇತ್ಯಾದಿ ಸಹ ಲಭ್ಯವಿರುತ್ತವೆ.

TV9 Kannada


Leave a Reply

Your email address will not be published. Required fields are marked *