ಭಾರೀ ಅಡೆತಡೆಗಳು ವಾದ-ವಿವಾದಗಳನ್ನ ಎದುರಿಸಿ ಕೊನೆಗೂ ಕೊನೆಗೂ ಜಪಾನ್ ಟೋಕಿಯೋ ಒಲಂಪಿಕ್ಸ್ ನಡೆಸಲು ನಿರ್ಧರಿಸಿಯೇಬಿಟ್ಟಿದೆ. ಟೋಕಿಯೋ ಒಲಂಪಿಕ್ಸ್​ಗೆ ಭಾರೀ ತಡೆಯಾಗಿದ್ದು ಕೋವಿಡ್ 19.. ಜಪಾನ್​ನಲ್ಲಿ ಮತ್ತೆ ಕೊರೊನಾ ಸೋಂಕು ಏರಿಕೆಯಾಗುತ್ತಿದೆ.

ಆದರೂ ಒಲಂಪಿಕ್ಸ್​ನಲ್ಲಿ ಸೋಂಕು ಹರಡದಂತೆ ತಡೆಯಲು ಒಲಂಪಿಕ್ಸ್ ಆಯೋಜಕರು ಭಾರೀ ಎಚ್ಚರಿಕೆ ವಹಿಸುತ್ತಿದ್ದಾರೆ. ಆದ್ರೆ ಆಯೋಜಕರಿಗೆ ಈವರೆಗೆ ತಲೆನೋವಾಗಿದ್ದದ್ದು ಟೋಕಿಯೋ ಒಲಂಪಿಕ್ಸ್​ನಲ್ಲಿ ಅಕಸ್ಮಾತ್ ಯಾರಿಗಾದ್ರೂ ಸೋಂಕು ಹರಡಿದ್ರೂ ಅದು ಹರಡದಂತೆ ಕಡಿವಾಣ ಹಾಕೋದು ಹೇಗೆ ಅಂತ.. ಅಲ್ಲದೇ ಟೋಕಿಯೋ ಒಲಂಪಿಕ್ಸ್​ಗೆಂದು ಬಂದ ಅಥ್ಲೀಟ್​ಗಳು ಹತ್ತಾರು ದಿನಗಳ ಕಾಲ ಅವರಿಗಾಗಿಯೇ ಮೀಸಲಿರಿಸಿದ ಜಾಗದಲ್ಲಿಯೇ ಇರಬೇಕಾಗುತ್ತದೆ. ಹೀಗಾಗಿ ಮೀಸಲಿರಿಸಿದ ಜಾಗದಲ್ಲಿಯೇ ಸೆಕ್ಸ್ ನೆಪ ಹೇಳಿಕೊಂಡು ಅಥ್ಲೀಟ್​ಗಳು ಒಬ್ಬರಿಗೊಬ್ಬರು ಕೋವಿಡ್ ಹತ್ತಿಸಿಕೊಂಡರೆ ಎಂಬ ಚಿಂತೆ ಆಯೋಜಕರನ್ನ ಕಾಡಿತ್ತು. ಇದೀಗ ಇದಕ್ಕೆ ಆಯೋಜಕರು ಸಖತ್ ಐಡಿಯಾವನ್ನೇ ಮಾಡಿಕೊಂಡಿದ್ದಾರೆ.

ಅಥ್ಲೀಟ್​ಗಳಿಗಾಗಿ ಆ್ಯಂಟಿ ಸೆಕ್ಸ್​ ಬೆಡ್​ಗಳನ್ನ ಆಯೋಜಕರು ತಯಾರು ಮಾಡಿದ್ದಾರೆ. ಇವುಗಳನ್ನ ಕಾರ್ಡ್​ಬೋರ್ಡ್​​ಗಳ ಮೂಲಕ ತಯಾರಿಸಲಾಗಿದ್ದು ಓರ್ವ ವ್ಯಕ್ತಿಯ ದೇಹದ ತೂಕವನ್ನಷ್ಟೇ ತಡೆಯಬಲ್ಲ ಸಾಮರ್ಥ್ಯ ಈ ಕಾರ್ಡ್​ಬೋರ್ಡ್​ನಿಂದ ತಯಾರಿಸಿದ ಆ್ಯಂಟಿಸೆಕ್ಸ್​ ಬೆಡ್​ಗಳಿಗೆ ಇರುತ್ತದೆ. ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಇದರ ಮೇಲೆ ಕೂತರೆ ಅಥವಾ ಮಲಗಿದರೆ ಬೆಡ್ ಮುರಿದುಬೀಳುತ್ತದೆ.

ಅಲ್ಲದೇ ಟೋಕಿಯೋ ಒಲಂಪಿಕ್ಸ್ ಆಯೋಜಕರು 4 ಕಾಂಡೋಮ್ ಕಂಪನಿಗಳ ಜೊತೆಗೆ ಡೀಲ್ ಮಾಡಿಕೊಂಡಿದ್ದು ಅಥ್ಲೀಟ್​ಗಳಿಗೆ 1,60,000 ಕಾಂಡೋಮ್​ಗಳನ್ನು ಹಂಚಲು ನಿರ್ಧರಿಸಿದ್ದಾರೆ. ಈ ಕಾಂಡೋಮ್​ಗಳನ್ನ ಅಥ್ಲೀಟ್​ಗಳ ಬಳಕೆಗೆ ನೀಡಲಾಗುವುದಿಲ್ಲ.. ಅಥ್ಲೀಟ್​ಗಳು ಒಲಂಪಿಕ್ಸ್ ಮುಗಿಸಿ ವಾಪಸ್ಸಾಗುವಾಗ ಇವುಗಳನ್ನ ಕೊಂಡೊಯ್ಯಬಹುದು ಎಂದು ಆಯೋಜಕರು ಹೇಳಿದ್ದಾರೆ.

The post ಟೋಕಿಯೋ ಒಲಂಪಿಕ್ಸ್​​ನಲ್ಲಿ ಒಬ್ಬರಿಗೆ ಒಂದೇ ಮಂಚ.. ಏನಿದು ‘ಆ್ಯಂಟಿ-ಸೆಕ್ಸ್’ ಬೆಡ್ ಅಸ್ತ್ರ? appeared first on News First Kannada.

Source: newsfirstlive.com

Source link