ಟ್ಯಾಂಕರ್​​​ನಿಂದ ಆಯಿಲ್​ ಲೀಕ್​​.. ತೈಲ ಸಂಗ್ರಹಿಸಲು ಮುಗಿಬಿದ್ದ ಜನ.. 92 ಮಂದಿ ಅಗ್ನಿಗಾಹುತಿ


ಆಫ್ರಿಕಾದ ಸಿಯೇರಾ ಲಿಯೋನ್​ನಲ್ಲಿ ನಡೆದ ಭೀಕರ ಟ್ಯಾಂಕರ್ ಸ್ಫೋಟದಲ್ಲಿ 92ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

ಇಂಧನ ತುಂಬಿದ್ದ ಟ್ಯಾಂಕರ್​ ಲಾರಿಯಿಂದ ತೈಲ ಸೋರಿಕೆಯಾಗಿದ್ದು, ಇದನ್ನು ಸಂಗ್ರಹಿಸಲು ಜನ ಮುಗಿಬಿದ್ದಿದ್ದರು. ಈ ವೇಳೆ ಬಸ್​ವೊಂದು ಟ್ಯಾಂಕರ್​ಗೆ ಡಿಕ್ಕಿಯಾದ ಪರಿಣಾಮ ಭಾರೀ ಶಬ್ದದೊಂದಿಗೆ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ನೋಡನೋಡ್ತಿದ್ದಂತೆ ರಸ್ತೆ ಮೇಲಿದ್ದ ಕಾರುಗಳು ಹಾಗೂ ಬೈಕ್​ಗಳಿಗೆ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ. ಇನ್ನೂ ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೀತಿದ್ದಾರೆ.

News First Live Kannada


Leave a Reply

Your email address will not be published. Required fields are marked *