ಕಲಬುರಗಿ: ಟ್ಯಾಂಕರ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ತಾಲೂಕಿನ ಕೋಟನೂರು ಬಳಿ ನಡೆದಿದೆ.

ಕಲಬುರಗಿ ನಗರದ ನಿವಾಸಿಗಳಾದ ರಾಹುಲ್(25), ಖಾಸಿಂ(26), ಉಲ್ಲಾಸ್(26) ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಡರಾತ್ರಿ ಟ್ಯಾಂಕರ್ ಮತ್ತು ಕಾರಿನ ನಡುವೆ ದುರಂತ ಸಂಭವಿಸಿದೆ ಎನ್ನಲಾಗಿದ್ದು. ಟ್ಯಾಂಕರ್ ಕಲಬುರಗಿಯಿಂದ ಜೇವರ್ಗಿ ಕಡೆ ತೆರಳುತ್ತಿತ್ತು. ಕಾರು ಜೇವರ್ಗಿ ಮಾರ್ಗವಾಗಿ ಕಲಬುರಗಿಗೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಇನ್ನು ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು ಮೂವರ ಗುರುತು ಪತ್ತೆಯಾಗಿದೆ. ಇನ್ನೋರ್ವ ಮೃತನ ಗುರುತು ಪತ್ತೆ ಮಾಡಲಾಗುತ್ತಿದೆ. ಮೃತರೆಲ್ಲಾ ಕಲಬುರಗಿ ನಗರದ ನಿವಾಸಿಗಳು ಎನ್ನಲಾಗಿದ್ದು, ಕಲಬುರಗಿ ನಗರ ಸಂಚಾರಿ ಠಾಣೆ 2ರಲ್ಲಿ ಪ್ರಕರಣ ದಾಖಲಾಗಿದೆ.

The post ಟ್ಯಾಂಕರ್, ಕಾರ್​ ನಡುವೆ ಭೀಕರ ಅಪಘಾತ -ನಾಲ್ವರು ಯುವಕರು ಸ್ಥಳದಲ್ಲೇ ಸಾವು appeared first on News First Kannada.

Source: newsfirstlive.com

Source link