ಟ್ಯಾಗೋರ್​ರಿಂದ ಮೈಕೆಲ್​ ಜಾಕ್ಸನ್​ವರೆಗೆ ಖ್ಯಾತನಾಮರನ್ನು ಗುರುತಿಸುವ ಈ ಪುಟಾಣಿ – Kid Recognises Mother Theresa Gandhiji Sachin Tendulkar and all Famous Personalities watch viral video


Wonder Kid : ಇವರು ಸಚಿನ್​ ತೆಂಡೂಲ್ಕರ್​, ಇವರು ಮಹಾತ್ಮಾ ಗಾಂಧೀ, ಇವರು ಮದರ್ ತೆರೇಸಾ, ಇವರು ನೆಲ್ಸನ್​ ಮಂಡೇಲಾ, ಇವರು ಥಾಮಸ್ ಅಲ್ವಾ ಎಡಿಸನ್​… ಪಟಪಟ ಅರಳು ಹುರಿದಂತೆ. ನೋಡಿ ಈ ಮಗುವಿನ ವಿಡಿಯೋ.

ವೈರಲ್ ವಿಡಿಯೋ : ಹಸಿಗೋಡೆಯಲ್ಲಿ ಹರಳು ಒಗೆದಂತೆ ಮಕ್ಕಳ ಮನಸ್ಸು, ಹೃದಯ. ಎಳವೆಯಲ್ಲಿ ಏನನ್ನು ಧಾರೆ ಎರೆಯುತ್ತೇವೋ ಅದನ್ನೇ ಸ್ವೀಕರಿಸುತ್ತದೆ ಮಗು. ಈಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿರುವ ಚುರುಕಾದ ಹೆಣ್ಣುಮಗುವನ್ನು ಗಮನಿಸಿ. 60 ಸೆಕೆಂಡುಗಳ ಈ ವಿಡಿಯೋ ನಿಮ್ಮನ್ನು ಬೆರಗಾಗಿಸದೇ ಇರದು.  ಖ್ಯಾತನಾಮರ ಫೋಟೋ ತೋರಿಸುತ್ತಿದ್ದಂತೆ ಪಟಪಟನೆ ಹೇಗೆ ಉತ್ತರಿಸುತ್ತದೆ ನೋಡಿ.

ಮಗುವಿನ ತಾಯಿ ಒಬ್ಬೊಬ್ಬರ ಫೋಟೋ ತೋರಿಸುತ್ತಿದ್ದಂತೆ ಪುಟಿಚೆಂಡಿನಂತೆ ಉತ್ತರಿಸುತ್ತಾ ಹೋಗುತ್ತದೆ. ನವೆಂಬರ್​ 27ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. 70,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 4,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಸುಮಾರು 700 ಜನ ರೀಟ್ವೀಟ್ ಮಾಡಿದ್ದಾರೆ.

ಈ ಮಗುವಿನ ವಿಡಿಯೋ ನೋಡಿದ ನೂರಾರು ಜನರು ಇದರ ಸ್ಮರಣಶಕ್ತಿಯನ್ನು, ಲವಲವಿಕೆಯನ್ನು ಕೊಂಡಾಡಿದ್ದಾರೆ. ಮಗುವನ್ನು ಈ ರೀತಿಯಲ್ಲಿ ಬೆಳೆಸುತ್ತಿರುವ ತಾಯಿಗೆ ಶರಣು ಎಂದಿದ್ದಾರೆ ಹಲವರು. ಈ ವಯಸ್ಸಿನಲ್ಲಿ ಮಕ್ಕಳು ಒಂದೆಡೆ ಕುಳಿತುಕೊಳ್ಳುವುದೇ ಕಷ್ಟ. ಆದರೆ ಇಂಥ ಚಟುವಟಿಕೆಗಳಲ್ಲಿ ತೊಡಗಿಸಿದಾಗ ಪಾಠವೂ ಆಟವಾಗುತ್ತದೆ ಎಂದಿದ್ದಾರೆ ಕೆಲವರು. ಇನ್ನೂ ಕೆಲವರು ತಮ್ಮತಮ್ಮ ಮಕ್ಕಳ ವಿಡಿಯೋಗಳನ್ನು ಹಾಕಿ ಈ ಮಗುವಿನ ಜಾಣತನವನ್ನೂ ನೋಡಿ ಎಂದಿದ್ದಾರೆ.

ನಿಮ್ಮ ಮನೆಯ ಪುಟ್ಟ ಮಕ್ಕಳನ್ನು ಹೇಗೆ ಆಟದ ಮೂಲಕ ಪಾಠದಲ್ಲಿ ತೊಡಗಿಸುತ್ತಿದ್ದೀರಿ? ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

TV9 Kannada


Leave a Reply

Your email address will not be published. Required fields are marked *