ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅಧಿಕಾರದಲ್ಲಿದ್ದಾಗ ಚೀನಿ ಆ್ಯಪ್​ ಟಿಕ್​ ಟಾಕ್​ ಅನ್ನು ದೇಶಾದ್ಯಂತ ಬ್ಯಾನ್ ಮಾಡಿ ಆದೇಶ ಹೊರಡಿಸಿದ್ರು. ಸದ್ಯ ಮಾಜಿ ಅಧ್ಯಕ್ಷರ ಈ ಆದೇಶವನ್ನು ಹಾಲಿ ಅಧ್ಯಕ್ಷ ಜೋ ಬೈಡನ್​ ಹಿಂಪಡೆದಿದ್ದಾರೆ.

ಟಿಕ್​ ಟಾಕ್​ ಸೇರಿದಂತೆ ಇತರೆ 8 ಚೀನಾ ಆ್ಯಪ್​ಗಳನ್ನ ಈ ಹಿಂದೆ ಡೊನಾಲ್ಡ್​ ಟ್ರಂಪ್​ ಬ್ಯಾನ್​ ಮಾಡಿದ್ರು. ಸದ್ಯ ಈ 8 ಆ್ಯಪ್​ಗಳ ಬ್ಯಾನ್​ ಆದೇಶವನ್ನ ಅಲ್ಲಿನ ಹಾಲಿ ಅಧ್ಯಕ್ಷರು ವಾಪಸ್​ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಎಲ್ಲಾ ಆ್ಯಪ್​ಗಳು ಮತ್ತೆ ಅಮೆರಿಕಾದಲ್ಲಿ ಬಳಕೆಗೆ ಸಿಗಲಿದೆ.

ಅಮೆರಿಕ ಸರ್ಕಾರದ ಹೊಸ ಆದೇಶವು ಯಾವುದೇ ಕಂಪನಿಗಳ ಹೆಸರನ್ನ ಉಲ್ಲೇಖಿಸಿಲ್ಲ. ಆದರೆ ಅಮೆರಿಕನ್ನರ ಗೌಪ್ಯ ವಿಷಯಗಳನ್ನ ವಿದೇಶಿ ವಿರೋಧಿಗಳಿಂದ ಅಂದರೆ ಚೀನಾದಿಂದ ರಕ್ಷಿಸುವ ಚೌಕಟ್ಟನ್ನು ಒದಗಿಸುತ್ತದೆ. ಕೆಲವು ಚೀನಾದ ಆ್ಯಪ್​​ಗಳ ವಿರುದ್ಧ ದೇಶದ ಭದ್ರತೆಗೆ ಧಕ್ಕೆ ತಂದಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳು ಚೀನಾದ ಆ್ಯಪ್​​ಗಳನ್ನ ಬ್ಯಾನ್​ ಮಾಡಿದ್ದವು.

The post ಟ್ರಂಪ್ ಆದೇಶಕ್ಕೆ ಗುನ್ನಾ ಕೊಟ್ಟ ಬೈಡನ್.. ಅಮೆರಿಕದಲ್ಲಿ ಟಿಕ್​​ಟಾಕ್ ಮೇನಿಯಾ​​​​ appeared first on News First Kannada.

Source: newsfirstlive.com

Source link