ಟ್ರಕ್ಕಿಂಗ್ ಹುಚ್ಚಿಗೆ ಪ್ರಾಣಕ್ಕೇ ಸಂಚಕಾರ ತಂದ್ಕೊಂಡ ಯುವಕ.. 2 ದಿನಗಳ ಬಳಿಕ ರೋಚಕ ಯಶಸ್ವಿ ಕಾರ್ಯಾಚರಣೆ


ಕೇರಳ: ಯುವಕರು ಎಂದ ಮೇಲೆ ಫ್ರೆಂಡ್ಸ್​ ಜೊತೆ ಲಾಂಗ್​ ಡ್ರೈವ್​, ಲೇಟ್​ ನೈಟ್​ ಪಾರ್ಟಿ, ಟ್ರಕ್ಕಿಂಗ್​ ಈ ರೀತಿಯ ಎಂಜಾಯ್​ಮೇಟ್ಸ್ ಇದ್ದೇ ಇರುತ್ತೆ. ಅದರಂತೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಬೆಟ್ಟದಲ್ಲಿ ಟ್ರಕ್ಕಿಂಗ್​ ಮಾಡಲು 23 ವರ್ಷದ ಆರ್​.ಬಾಬು ಎಂಬ ವ್ಯಕ್ತಿ ಸ್ನೇಹಿತರ ಜೊತೆ ಹೋಗಿದ್ದ.

ಆ ವೇಳೆಯಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಬೆಟ್ಟದ ಸೀಳಿನಲ್ಲಿ ಯುವಕ ಸಿಲುಕಿದ್ದ. ಎರಡು ದಿನಗಳಿಂದ ಊಟ ಮತ್ತು ನೀರಿಲ್ಲದೆ ಆತಂಕಕ್ಕೆ ಒಳಗಾಗಿದ್ದ. ಇದೀಗ ಭಾರತೀಯ ಸೇನೆ ಆತನನ್ನ ರಕ್ಷಿಸಿದೆ. ರಕ್ಷಣೆ ಬಳಿಕ ಕೂಡಲೇ ಆತನಿಗೆ ಆಹಾರವನ್ನ ನೀಡಲಾಗಿದೆ.

ರಕ್ಷಣೆ ಬಳಿಕ ಯುವಕ ಆರ್​.ಬಾಬು ತನಗೆ ಆದ ಅನುಭವ ಹಂಚಿಕೊಂಡಿದ್ದಾನೆ. ಬೆಟ್ಟ ಏರೋದು ಬಹಳ ಕಷ್ಟಕರವಾಗಿತ್ತು. ದಾರಿಯಲ್ಲಿ ಆಗಾಗ್ಗೆ ವಿಶ್ರಾಂತಿ ಪಡೆಯುತ್ತಿದ್ದೆ. ಸ್ನೇಹಿತರೊಂದಿಗೆ ಪಾಲಕ್ಕಾಡ್‌ನ ಚೆರಾಡುವಿನ ಕುರುಂಬಾಚಿ ಬೆಟ್ಟಕ್ಕೆ ಹೋದಾಗ ಈ ಘಟನೆ ನಡೆಯಿತು. ನಾನು ದಣಿದಿದ್ದ ಕಾರಣ ಬಂಡೆಗಳ ಮೇಲೆ ಜಾರಿಬಿದ್ದೆ. ನನ್ನ ಸ್ನೇಹಿತರು ರಕ್ಷಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ ಎಂದರು.

ಬೆಟ್ಟದಿಂದ ಕೆಳಗಿಳಿದು ಪೊಲೀಸರಿಗೆ ಮಾಹಿತಿ ನೀಡಿದರು. ಶೀಘ್ರದಲ್ಲೇ, ರಕ್ಷಣಾ ತಂಡಗಳು ಸ್ಥಳಕ್ಕೆ ಬಂದವು ಆದರೆ ಕೋಸ್ಟ್‌ಗಾರ್ಡ್‌ನಿಂದ ಹೆಲಿಕಾಪ್ಟರ್ ಬಳಸಿ ನನ್ನನ್ನು ರಕ್ಷಿಸುವ ಪ್ರಯತ್ನ ಆರಂಭವಾಯಿತು. ಆ ಪ್ರಯತ್ನವು 2 ದಿನಗಳ ಕಾಲ ನಡೆಯಿತು. ಈಗ ನಾನು ಸುರಕ್ಷಿತವಾಗಿದ್ದೇನೆ ಎಂದಿದ್ದಾನೆ.

News First Live Kannada


Leave a Reply

Your email address will not be published.