ಹಣ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹಣ ಅಂದ್ರೆ ಹೆಣವು ಬಾಯಿ ಬಿಡೋ ಕಾಲವಿದು. ಅಂತ್ರದಲ್ಲಿ ರಾಶಿ ರಾಶಿ ಹಣ ಯಾವುದೇ ಶ್ರಮವಿಲ್ಲದೆ ಕ್ಷಣಾರ್ಧದಲ್ಲಿ ಸಿಗುತ್ತೆ ಅಂದ್ರೆ ಮಲಗಿದ್ದವರ ಕಿವಿಯು ನಿಮಿರುತ್ತದೆ. ಹೌದು ಇಂತಹದ್ದೊಂದು ಅಪರೂಪದ ಘಟನೆ ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಫೆಡರಲ್ ಡಿಪಾಸಿಟ್ ಕಾರ್ಪ್ ಇನ್ಸೂರೆನ್ಸ್ ಕಂಪನಿ ಬ್ಯಾಂಕಿಗೆ ಹಣ ಹೊತ್ತು ಹೆದ್ದಾರಿಯಲ್ಲಿ ಸಾಗುತ್ತಿತ್ತು. ಈ ವೇಳೆ ಟ್ರಕ್ನ ಬಾಗಿಲು ಏಕಾಏಕಿ ತೆಗೆದುಕೊಂಡ ಪರಿಣಾಮ ರಾಶಿ ರಾಶಿ ಹಣ ರಸ್ತೆಗೆ ಬಿದ್ದಿದೆ. ಟ್ರಕ್ನಿಂದ ಹಣ ರಸ್ತೆಗೆ ಬೀಳುತ್ತಿರುವುದನ್ನು ಗಮನಿಸಿದ ಜನರು ಅರೆ ಕ್ಷಣದಲ್ಲಿ ಎಂಟ್ರಿಕೊಟ್ಟು ಹಣವನ್ನು ತಮ್ಮ ಬ್ಯಾಗ್ಗೆ ಬಾಚಿ ಬಾಚಿ ತುಂಬಿಕೊಂಡಿದ್ದಾರೆ.
ಈ ರೀತಿ ಹಣ ಬಾಚಿಕೊಳ್ತಿರುವ ವಿಡಿಯೋವನ್ನ ಮಹಿಳೆಯೊಬ್ಬರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪುಕ್ಸಟ್ಟೆಯಾಗಿ ಸಿಕ್ಕ ಹಣವನ್ನ ಯಾರೂ ಬಿಡೋದಿಲ್ಲ ಅಂತ ಕ್ಯಾಪ್ಷನ್ ಕೂಡ ಹಾಕಿದ್ದಾರೆ.
ಇದನ್ನೂ ಓದಿ:‘ಭಗವಾನ್ ಶ್ರೀಕೃಷ್ಣನ ಕೈತುಂಡಾಗಿದೆ’ ಎಂದು ವಿಗ್ರಹ ಆಸ್ಪತ್ರೆಗೆ ತಂದ ಅರ್ಚಕ..!
ಹಣ ಬಾಚಿಕೊಂಡವರಿಗೆ ಶಾಕ್ ಕೊಟ್ಟ ಬ್ಯಾಂಕ್!!
ಇನ್ನು ಹಣವನ್ನು ಬಾಚಿಕೊಂಡು ಹಾಯಾಗಿ ಮನೆಗೆ ತೆರಳಿದವರಿಗೆ ಬ್ಯಾಂಕ್ ಆಡಳಿತ ಮಂಡಳಿ ಶಾಕ್ ನೀಡಿದೆ. ಹಣವನ್ನು ತೆಗೆದುಕೊಂಡು ಹೋದವರು ಬ್ಯಾಂಕ್ಗೆ ಹಣ ಮರಳಿಸಬೇಕೆಂದು ಹೇಳಿದೆ. ಇನ್ನು ಈ ಘಟನೆಯಲ್ಲಿ ಎಷ್ಟು ಹಣ ಕಳೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಹಣ ಬಾಚಿಕೊಳ್ಳುವ ಹೊತ್ತಿಗೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿವೆ.