ಬೆಂಗಳೂರು: ಕೊರೊನಾ ಹೊಡೆತದಿಂದ ಇದೀಗ ಚೇತರಿಕೆ ಕಾಣುತ್ತಿರುವ ಬಿಎಂಟಿಸಿ, ಕೆಎಸ್‌ಆರ್‌ಟಿಸಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ನಿಗಮಗಳ ಬಸ್ಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮ ವರ್ಷವೊಂದರಲ್ಲಿಯೇ ಸಂಚಾರಿ ಪೊಲೀಸರಿಂದ ಬಾಕಿ ಇರುವ ಬರೋಬ್ಬರಿ ಒಂದು ಕೋಟಿಗೂ ಅಧಿಕ ದಂಡವನ್ನು ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಇತ್ತೀಚಿಗೆ ಸರಿಯಾಗಿ ಸಂಬಳ ಬಾರದೆ ನಿಗಳಮಗಳ ನೌಕರರು ಕಂಗಾಲಾಗಿದ್ದರು. ಕೊರೊನಾ ಬಿಕ್ಕಟ್ಟಿನಿಂದ ಆರ್ಥಿಕ ಹಿಂಜರಿಕೆ ಕಂಡಿದ್ದ ಉಭಯ ನಿಗಮಗಳು ಹಂಗೋ ಹಿಂಗೋ ಮಾಡಿ ಸಿಬ್ಬಂದಿಗೆ ಸಂಬಳ ಪಾವತಿಸುತ್ತಿದೆ. ಅಂತ್ರದಲ್ಲಿ ವಾಹನ ಚಾಲಕರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಂಸಿ ನಿಗಮಗಳು 1 ಕೋಟಿಗೂ ಅಧಿಕ ಮೊತ್ತದ ದಂಡವನ್ನ ಪಾವತಿಸುವಂತೆ ಮಾಡಿದ್ದಾರೆ.
ಅತೀ ವೇಗದ ಹಾಗೂ ನಿರ್ಲಕ್ಷ್ಯದ ಚಾಲನೆ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ಕಂಡ ಕಂಡಲ್ಲಿ ಬಸ್ ನಿಲ್ಲಿಸುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡಲಾಗಿದೆ. ಅಂತಹ ಬಸ್ ಡಿಪೋಗಳಿಗೆ ಇಲಾಖೆಯಿಂದ ಬಸ್‌ಗಳ ನಂಬರ್ ಉಲ್ಲೇಖಿಸಿ ದಂಡ ಪಾವತಿಸುವಂತೆ ನೋಟಿಸ್ ಕಳುಹಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ನಿಗಮಗಳ ಮೇಲೆ 35,048 ಪ್ರಕರಣ ದಾಖಲಾಗಿವೆ. ಇವೆಲ್ಲ ಕೇಸ್ಗಳಿಂದ ಬಿಎಂಟಿಸಿ ಬರೋಬ್ಬರಿ 1,94,83,200 ರೂಪಾಯಿ ದಂಡ ಬಾಕಿ ಉಳಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಿಗಮಗಳಿಗೆ ನೋಟಿಸ್ ಕಳಿಸಿದ ಬಳಿಕ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ಬಸ್ ಚಾಲಕರಿಗೂ ಕೂಡ ಪ್ರತ್ಯೇಕ ನೋಟಿಸ್ ಕಳುಹಿಸಲಾಗಿದೆ. ಮತ್ತು ಆ ದಂಡದ ಮೊತ್ತವನ್ನು ಚಾಲಕನೇ ಪಾವತಿಸಬೇಕೆಂದು ಡಿಪೋ ಮ್ಯಾನೇಜರ್ಗಳು ಹೇಳುತ್ತಿದ್ದರಂತೆ. ಡ್ರೈವರ್ ದಂಡ ಪಾವತಿಸಲು ನಿರಾಕರಿಸಿದ್ದಲ್ಲಿ ವೇತನದಲ್ಲಿ ಕಡಿತಗೊಳಿಸೋದಾಗಿ ವ್ಯವಸ್ಥಾಪಕರು ತಿಳಿಸಿದ್ದಾರಂತೆ. ಇದರಿಂದ ಸಂಬಳದಲ್ಲಿ ಜೀವನ ಮಾಡೋದೆ ಕಷ್ಟ ಎನ್ನುವ ಸಿಬ್ಬಂದಿ ಕಂಗಾಲಾಗಿದ್ದಾರೆ.
ಇದನ್ನೂ ಓದಿ:14,682 #Bitcoin ವರ್ಗಾವಣೆಗೆ ಸಾಕ್ಷಿ ಇಲ್ಲ -ಆರೋಪಗಳಿಗೆ ಪೊಲೀಸ್ ಇಲಾಖೆ ಕೊಟ್ಟ ಸ್ಪಷ್ಟನೆ ಏನು..?