ರಾಮನಗರ: ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ಕೃಷಿ ಭೂಮಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಕೃಷಿ ಚಟುವಟಿಕೆಗಳಿಗಾಗಿ ಹೊಸ ಟ್ರ್ಯಾಕ್ಟರ್ ಖರೀದಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಪೂಜೆ ಸಲ್ಲಿಸುವ ಮೂಲಕ ಹೊಸ ಟ್ರ್ಯಾಕ್ಟರ್ ಅನ್ನು ಸ್ವಾಗತಿಸಿದ ಕುಮಾರಸ್ವಾಮಿಯವರು ತಾವೇ ಟ್ರ್ಯಾಕ್ಟರ್ ಚಲಾಯಿಸಿದರು. ತಮ್ಮ ಕೃಷಿಭೂಮಿಯನ್ನು ಮಾದರಿ ತೋಟವನ್ನಾಗಿ ಪರಿವರ್ತಿಸಲು ಕೊರೊನಾ ಸಂದರ್ಭದಲ್ಲಿ ಹೆಚ್ಚು ಆಸಕ್ತಿ ತೋರಿಸಿರುವ ಕುಮಾರಸ್ವಾಮಿ ಇತ್ತೀಚಿನ ತಿಂಗಳಲ್ಲಿ ಹೆಚ್ಚು ಕಾಲ ತೋಟದಲ್ಲೇ ವಾಸ್ತವ್ಯ ಹೂಡಿದ್ದಾರೆ.

ಟ್ರ್ಯಾಕ್ಟರ್ ವಿಶೇಷ
ಜಾನ್ ಡಿರ್ 5210 ಗೇರ್ ಪ್ರೊ ಟ್ರಾಕ್ಟರ್ ಹಾಗೂ 42 ಬ್ಲೇಡ್ ಇರುವ ರೋಟವೇಟರ್. ಟ್ರ್ಯಾಕ್ಟರ್ 50hp ಪವರ್ ಹೊಂದಿದ್ದು ಸರ್ವ ಕೃಷಿ ಕಾಮಗಾರಿಗಳನ್ನು ಮಾಡುತ್ತದೆ. ತಾಂತ್ರಿಕತೆಯಲ್ಲಿ ದಕ್ಷತೆಯುಳ್ಳ ಗೇರ್ ಬಾಕ್ಸ್ ಮತ್ತು 4 ವೀಲ್ ಡ್ರೈವ್ ಗಾಡಿಯಾಗಿರುತ್ತದೆ. ಜಾನ್ ಡಿಯರ್ ಭಾರತದಲ್ಲಿ 22 ವರ್ಷಗಳಿಂದ ರೈತರ ಸೇವೆಗೆ ಟ್ರ್ಯಾಕ್ಟರ್ ಮತ್ತು ಯಂತ್ರೋಪಕರಣಗಳು ಮಾರಾಟ ಮಾಡುತ್ತಿರುತ್ತದೆ. ಇದನ್ನೂ ಓದಿ: ಮೊಮ್ಮಗನ ಕೃಷಿ ಕಾರ್ಯ ಮೆಚ್ಚಿದ ದೇವೇಗೌಡರು

The post ಟ್ರ್ಯಾಕ್ಟರ್ ಖರೀದಿಸಿ ಚಲಾಯಿಸಿದ್ರು ಹೆಚ್‍ಡಿಕೆ appeared first on Public TV.

Source: publictv.in

Source link