ಟ್ವಿಟರ್​ಗೆ ಮರಳಲಿದ್ದಾರೆ ಶ್ರೀರಾಮ್ ಕೃಷ್ಣನ್; ಯಾರಿವರು, ಎಲಾನ್ ಮಸ್ಕ್​ಗೆ ಹೇಗೆ ನೆರವಾಗಲಿದ್ದಾರೆ? – Who is Sriram Krishnan the software technologist from India said he is helping out with Elon Musk takeover at Twitter


ಟ್ವಿಟರ್​ನಲ್ಲೇ ಮೊದಲು ಕಾರ್ಯನಿರ್ವಹಿಸಿದ್ದ, ಭಾರತೀಯ ಮೂಲದ ಟೆಕಿ ಶ್ರೀರಾಮ್ ಕೃಷ್ಣನ್ ಅವರು ಎಲಾನ್ ಮಸ್ಕ್​ಗೆ ನೆರವಾಗುವ ಬಗ್ಗೆ ಟ್ವೀಟ್​ ಮಾಡಿದ್ದಾರೆ.

ಟ್ವಿಟರ್​ಗೆ ಮರಳಲಿದ್ದಾರೆ ಶ್ರೀರಾಮ್ ಕೃಷ್ಣನ್; ಯಾರಿವರು, ಎಲಾನ್ ಮಸ್ಕ್​ಗೆ ಹೇಗೆ ನೆರವಾಗಲಿದ್ದಾರೆ?

ಶ್ರೀರಾಮ್ ಕೃಷ್ಣನ್

Image Credit source: Twitter

ನವದೆಹಲಿ: ಟ್ವಿಟರ್ (Twitter) ಖರೀದಿ ಪ್ರಕ್ರಿಯೆಯನ್ನು ಇತ್ತೀಚೆಗೆ ಪೂರ್ಣಗೊಳಿಸಿದ್ದ ಉದ್ಯಮಿ ಎಲಾನ್ ಮಸ್ಕ್ (Elon Musk), ಸಿಇಒ ಪರಾಗ್ ಅಗರ್​ವಾಲ್ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿರುವವರನ್ನು ವಜಾಗೊಳಿಸಿದ್ದರು. ಟ್ವಿಟರ್​ ಅನ್ನು ಸರಪಡಿಸಿ ಮತ್ತೆ ಸರಿದಾರಿಗೆ ತರುತ್ತೇನೆ ಎಂದಿರುವ ಮಸ್ಕ್ ಇದೀಗ ಆ ಕೆಲಸಕ್ಕೆ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿಯನ್ನೇ ಆಯ್ದುಕೊಳ್ಳುವ ಬಗ್ಗೆ ಬಲವಾದ ಸುಳಿವು ದೊರೆತಿದೆ. ಟ್ವಿಟರ್​ನಲ್ಲೇ ಮೊದಲು ಕಾರ್ಯನಿರ್ವಹಿಸಿದ್ದ, ಭಾರತೀಯ ಮೂಲದ ಟೆಕಿ ಶ್ರೀರಾಮ್ ಕೃಷ್ಣನ್ ಅವರು ಎಲಾನ್ ಮಸ್ಕ್​ಗೆ ನೆರವಾಗುವ ಬಗ್ಗೆ ಟ್ವೀಟ್​ ಮಾಡಿದ್ದಾರೆ.

ಯಾರು ಈ ಶ್ರೀರಾಮ್ ಕೃಷ್ಣನ್?

ಶ್ರೀರಾಮ್ ಕೃಷ್ಣನ್ ಅವರು ಎಂಜಿನಿಯರ್ ಹಾಗೂ ತಂತ್ರಜ್ಞರಾಗಿದ್ದು ಟ್ವಿಟರ್, ಮೆಟಾ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 2005ರಲ್ಲಿ ಅವರು ತಮ್ಮ 21ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿದ್ದರು. ನಂತರ ಎಂಜಿನಿಯರ್ ಆಗಿ ವೃತ್ತಿಜೀವನ ಆರಂಭಿಸಿದ್ದರು.

ಟ್ವಿಟರ್​ನ ಮುಖ್ಯ ಟೈಮ್​ಲೈನ್, ಅದಕ್ಕೆ ಹೊಸ ಯುಐ ಅಭಿವೃದ್ಧಿಪಡಿಸುವಲ್ಲಿ ಹಾಗೂ ಬಳಕೆದಾರರ ಸಂಖ್ಯೆ ಹೆಚ್ಚಿಸುವಲ್ಲಿ ಶ್ರೀರಾಮ್ ಕೃಷ್ಣನ್ ಪ್ರಮುಖ ಪಾತ್ರ ವಹಿಸಿದ್ದರು. ಫೇಸ್​ಬುಕ್​ನಲ್ಲಿ​ (ಮೆಟಾ) ಮೊಬೈಲ್ ಜಾಹೀರಾತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದರು. ಇದು ಇಂದು ಅತಿದೊಡ್ಡ ಜಾಹೀರಾತು ಪ್ರದರ್ಶನ ವೇದಿಕೆಯಾಗಿ ಹೊರಹೊಮ್ಮಿದೆ.

TV9 Kannada


Leave a Reply

Your email address will not be published.