ನವದೆಹಲಿ: ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಐಟಿ ನೀತಿಗಳನ್ನು ಪಾಲಿಸಲು ಟ್ವಿಟರ್​ಗೆ ಕೊನೆಯ ಅವಕಾಶ ನೀಡಲಾಗಿದೆ. ಈ ಕುರಿತು ಕೊನೆಯ ಬಾರಿಗೆ ನೋಟಿಸ್ ಹೊರಡಿಸಿರುವ ಕೇಂದ್ರ ಸರ್ಕಾರ ತಕ್ಷಣವೇ ಹೊಸ ಐಟಿ ನೀತಿಗಳನ್ನ ಅಳವಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದೆ.

ಕೇಂದ್ರ ಸರ್ಕಾರ ಸೋಷಿಯಲ್ ಮೀಡಿಯಾಗಳು ಹೊಸ ಐಟಿ ನೀತಿಗಳನ್ನ ಅಳವಡಿಸಿಕೊಳ್ಳಲು ನೀಡಿದ್ದ ಗಡುವು ಮೇ 26 ಕ್ಕೆ ಅಂತ್ಯವಾಗಿದೆ. ಆದರೂ ಟ್ವಿಟರ್​ಗೆ ಕಾಲಾವಕಾಶ ನೀಡಲಾಗಿತ್ತು. ಆದ್ರೆ ಟ್ವಿಟರ್​ ತನ್ನ ಮೊಂಡುತನವನ್ನ ಮುಂದುವರಿಸಿದೆ. ಇದರ ಜೊತೆ ಜೊತೆಗೆ ಇಂದು ದೇಶದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಖಾತೆಯ ಬ್ಲೂ ಟಿಕ್ ತೆಗೆದು ಮತ್ತೆ ರೀಸ್ಟೋರ್ ಮಾಡುವ ಮೂಲಕ, ಹಾಗೂ ಆರ್​ಎಸ್​ಎಸ್​ ನಾಯಕರ ಖಾತೆಗಳಿಂದ ಯಾವುದೇ ಸೂಚನೆ, ಮಾಹಿತಿ ನೀಡದೆ ಬ್ಲೂ ಟಿಕ್ ತೆಗೆದಿದೆ.

ಇದನ್ನೂ ಓದಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಖಾತೆಗೆ ಬ್ಲೂಟಿಕ್ ತೆಗೆದ ಟ್ವಿಟರ್, ಕೆಲವೇ ಹೊತ್ತಲ್ಲಿ ರೀಸ್ಟೋರ್

ಇನ್ನು ಟ್ವಿಟರ್​ಗೆ ನೋಟಿಸ್ ಹೊರಡಿಸಿರುವ ಕೇಂದ್ರ ಸರ್ಕಾರ.. ಈಗಾಗಲೇ ಹೊಸ ಐಟಿ ನೀತಿಗಳನ್ನ ಅಳವಡಿಸಿಕೊಳ್ಳಲು ನೀಡಲಾಗಿದ್ದ ಕಾಲಾವಧಿ ಮುಗಿದಿದ್ದು ಇದೀಗ ಕೊನೆಯ ನೋಟಿಸ್ ನೀಡಲಾಗುತ್ತಿದೆ. ಶೀಘ್ರವೇ ನಿಯಮಗಳನ್ನ ಅಳವಡಿಸಿಕೊಂಡು ಭಾರತ ಸರ್ಕಾರದ ಕಾನೂನಿಗೆ ಗೌರವ ನೀಡುವಂತೆ ಹೇಳಿದೆ.

ಇದನ್ನೂ ಓದಿ: ನಮಗೆ ನಿಮ್ಮ ಪಾಠ ಬೇಕಿಲ್ಲ, ಮೊದಲು ಈ ನೆಲದ ಕಾನೂನು ಒಪ್ಪಿಕೊಳ್ಳಿ -ಟ್ವಿಟರ್​ಗೆ ಕೇಂದ್ರ ವಾರ್ನಿಂಗ್

ಒಂದು ವೇಳೆ ಟ್ವಿಟರ್​ ಈ ಬಾರಿಯೂ ಉದ್ಧಟತನ ಪ್ರದರ್ಶಿಸಿದರೆ ಕೇಂದ್ರ ಸರ್ಕಾರ ಟ್ವಿಟರ್ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

The post ಟ್ವಿಟರ್​ಗೆ ಇದು ಲಾಸ್ಟ್​ ವಾರ್ನಿಂಗ್: ದೇಶದ ಐಟಿ ನಿಯಮ ಪಾಲಿಸದಿದ್ರೆ ಬ್ಯಾನ್..? appeared first on News First Kannada.

Source: newsfirstlive.com

Source link