ನೈಜೀರಿಯಾದ ಅಧ್ಯಕ್ಷ ಮೊಹಮ್ಮದ್ ಬುಹಾರಿಯವರ ಟ್ವೀಟ್ ಅನ್ನು ರಿಮೂವ್ ಮಾಡಿದ ಕಾರಣ, ನೈಜೀರಿಯಾದಲ್ಲಿ ಅನಿರ್ದಿಷ್ಟಾವಧಿಯವರೆಗೂ ಟ್ವಿಟರ್ ಬಳಕೆ ಮಾಡುವಂತಿಲ್ಲ ಅಂತ ಅಲ್ಲಿನ ಸರ್ಕಾರ ಆದೇಶ ಹೊರಡಿಸಿತ್ತು. ಸದ್ಯ ಇದೇ ಸಮಯದಲ್ಲಿ ಭಾರತದ ಕೂ ಆ್ಯಪ್ ನೈಜೀರಿಯಾದಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆಗೆ ಚಿಂತಿಸುತ್ತಿದೆ.

ಈ ಬಗ್ಗೆ ಕೂ ಆ್ಯಪ್​ನ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಟ್ವೀಟ್ ಮಾಡಿದ್ದು, ಕೂ ಆ್ಯಪ್  ನೈಜೀರಿಯಾದಲ್ಲಿ ಲಭ್ಯವಿದೆ. ಅಲ್ಲಿನ ಸ್ಥಳೀಯ ಭಾಷೆಗಳನ್ನೂ ಕೂಡ ಆ್ಯಪ್​ನಲ್ಲಿ ಸೇರಿಸಲು ನಾವು ಚಿಂತಿಸುತ್ತಿದ್ದೇವೆ. ಏನಂತೀರಾ? ಅಂತ ಪ್ರಶ್ನಿಸಿದ್ದಾರೆ.

ಏನಿದು ಕೂ ಆ್ಯಪ್..? ಯಾರಿದರ ಮಾಲೀಕ..?
1 ವರ್ಷದ ಹಿಂದೆ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ತಂಡವೊಂದು ಕೂ ಎಂಬ ಮೈಕ್ರೋಬ್ಲಾಗಿಂಗ್ ಆ್ಯಪ್  ಲಾಂಚ್ ಮಾಡಿತ್ತು.​ ಟ್ವಿಟರ್​ಗೆ ಪರ್ಯಾಯವಾಗಿ ದೇಶಿ ಆ್ಯಪ್​ ಆಗಿ ಇದನ್ನ ರಚಿಸಲಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸರ್ಕಾರ ಆಯೋಜಿಸಿದ್ದ ಆತ್ಮನಿರ್ಭರ್​ ಆ್ಯಪ್ ಚಾಲೆಂಜ್​​ನಲ್ಲಿ ಈ ಆ್ಯಪ್ ಗೆಲುವು ಸಾಧಿಸಿತ್ತು. ಈ ಆ್ಯಪ್​ನಲ್ಲಿ ಹಿಂದಿ ಸೇರಿದಂತೆ ದೇಶೀಯ ಭಾಷೆಗಳನ್ನ ಬಳಸಿ ಸಂದೇಶ ಹಂಚಿಕೊಳ್ಳಬಹುದಾಗಿದೆ.

2020ರಲ್ಲಿ ಈ ಆ್ಯಪ್​ನ್ನು ಅಪ್ರಮೇಯ ರಾಧಾಕೃಷ್ಣನ್ ಮತ್ತು ಮಯಂಕ್ ಬಿದ್ವಟ್ಕ ಎಂಬುವವರು ರಚಿಸಿದ್ದರು. ಬೊಂಬೈನೇಟ್ ಟೆಕ್ನೋಲಜೀಸ್ ಪ್ರೈವೇಟ್ ಲಿಮಿಟೆಡ್​ ಇದರ ಮಾಲೀಕತ್ವವನ್ನ ಹೊಂದಿದೆ. ಅಲ್ಲದೇ ಹಲವರು ಇದರಲ್ಲಿ ಬಂಡವಾಳ ಹೂಡಿದ್ದಾರೆ. ಸದ್ಯ ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಈ ಆ್ಯಪ್​ ಲಭ್ಯವಿದೆ.

 

The post ಟ್ವಿಟರ್​​ಗೆ ಟಕ್ಕರ್ ಕೊಟ್ಟ ನೈಜೀರಿಯಾದಲ್ಲಿ, ಭಾರತದ ಕೂ ಆ್ಯಪ್ ವಿಸ್ತರಣೆಗೆ ಪ್ಲಾನ್ appeared first on News First Kannada.

Source: newsfirstlive.com

Source link